spot_img
spot_img

ಕವನ: ಸ್ವಚ್ಛ ಸಮಾಜ ನಿರ್ಮಾಪಕರು..

Must Read

- Advertisement -

ಸ್ವಚ್ಛ ಸಮಾಜ ನಿರ್ಮಾಪಕರು..

ಚಳಿ ಇರಲಿ, ಬಿಸಿಲಿರಲಿ,
ಮಳೆ ‘ಧೋ ಎಂದು ಸುರಿಯುತಿರಲಿ,
ನಿಮ್ಮ ಸೇವೆಯೇ ನಮ್ಮ ಧರ್ಮ,
ಬಸವಣ್ಣನ ಕಾಯಕ ತತ್ವದಲಿ
ಅನುದಿನ ಬಾಳುತಿಹೆವು ,
ಸ್ವಚ್ಛ ಸಮಾಜ ನಿರ್ಮಾತೃಗಳು
ನಾವು ಪೌರಕಾರ್ಮಿಕರು…

ಕೆಟ್ಟುನಿಂತ ಒಳಚರಂಡಿಗಳ,
ಅನೈರ್ಮಲ್ಯದ ರಸ್ತೆಗಳ ದುರಸ್ತಿ ಗೊಳಿಸಿ,
ಬೆಳೆದುನಿಂತ ಗಿಡಗಂಟಿಗಳ ಕಿತ್ತು,
ಆರೋಗ್ಯಕರ ಸಮಾಜ ನಿರ್ಮಾಣ ಮಾಡುವೆವು
ಸಮಾಜದ ಒಳಿತಿಗಾಗಿ
ನಮ್ಮ ಕೈಕಾಲುಗಳ ಕೊಳೆ‌ ಮಾಡಿಕೊಳ್ಳುವೆವು..
ಸ್ವಚ್ಛ ಭಾರತ ನಿರ್ಮಾಣಕ್ಕೆ ಪ್ರಾಣವನೇ ಮೀಸಲಿಟ್ಟಿಹೆವು ,
ನಾವು ಪೌರಕಾರ್ಮಿಕರು…

ತಲೆತಲಾಂತರದಿಂದ ಸ್ವಚ್ಛ ಸಮಾಜಕೆ
ಅನುದಿನ ದುಡಿಯುತಲೆ ಬಂದಿಹೆವು,
ಹೆಚ್ಚುತಿರುವ ಜನಸಂಖ್ಯೆ ತಂದಿದೆ
ನಮಗೆ ಅತಿ ಕೆಲಸದ ಹೊರೆ..
ಆದರೂ ಯಾರನ್ನೂ ದೂಷಿಸದೇ,
ನಿರಂತರ ಸ್ವಚ್ಛತಾ ಯಜ್ಞ ಮಾಡುತಿಹೆವು ,
ಕಾಯಕದಲೇ ಸಂತಸ ಕಾಣುತಿಹೆವು,
‘ನಮಗೆ ನಾವೇ ಆದರ್ಶ ‘..

- Advertisement -

ಶತಮಾನಗಳ ಕಾಲ ಸ್ವಚ್ಚತಾ ಕಾರ್ಯದಲಿ
ನಮ್ಮ ಜೀವನ ಕಳೆದುಬಿಟ್ಟಿಹೆವು,
ಮುಂದಿನ ತಲೆಮಾರಿನ‌ ಯುವ ಜನತೆಗೆ,
ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗ ಕ್ಕೆ ಆದ್ಯತೆ ,
ಇದು ನಮ್ಮ ಭವಿಷ್ಯದ ದೃಷ್ಟಿ
ಅದಕಾಗಿ ಯುವ ಜನತೆಗೆ ಮಾರ್ಗದರ್ಶನ ನೀಡೋಣ..

ಪೌರಕಾರ್ಮಿಕರು ‘ಸ್ವಚ್ಛ ಸಮಾಜ ನಿರ್ಮಾತೃಗಳು ‘
ಸಮಾಜದಲಿ ನಮ್ಮನು ನೋಡುವ ದೃಷ್ಟಿ ಬದಲಾಗಬೇಕು ;
ಇದೇ ನಮ್ಮ ಕೋರಿಕೆ

ಡಾ.ಭೇರ್ಯ ರಾಮಕುಮಾರ್ ,
ಸಾಹಿತಿಗಳು, ಪತ್ರಕರ್ತರು

- Advertisement -
- Advertisement -

Latest News

ನಮ್ಮ ಊರ ಜಾತ್ರೆಯೊಂದನ್ನು ನಿಮ್ಮ ಬದುಕಿನ ಯಾತ್ರೆಗೆ ಹೋಲಿಸುತ್ತ….

ಹಾಯ್, ಹಲೋ, ನಮಸ್ಕಾರ...ಸ್ನೇಹಿತರೆ ನೀವೆಲ್ಲ ಹೇಗಿದ್ದೀರಿ? ಬಹಳಷ್ಟು ಜನ ಪರವಾಗಿಲ್ಲ ಚೆನ್ನಾಗಿದ್ದೀವಿ ಅಂತೀರಿ ಇನ್ನು ಕೆಲವಷ್ಟು ಜನ ಅಯ್ಯೋ ಅದ್ ಏನ್ ಕೇಳ್ತೀರಾ ಬಿಡಿ ಅನ್ನುವಂತಹ...
- Advertisement -

More Articles Like This

- Advertisement -
close
error: Content is protected !!
Join WhatsApp Group