ಕವನ: ಭಕ್ತಿ

Must Read

ಓಂ ನಮ ಶಿವಾಯ.

ಸರಳ ಪೂಜಾ ಪ್ರಿಯ.

ನಿನ್ನ ಅಲಂಕಾರಕ್ಕೆ ಬೇಕು

ನಂದಾ, ಭದ್ರಾ, ಸುಮನಾ, ಸುಶೀಲಾ ಎಂಬ ಗೋವುಗಳ

ಗೋಮಯದಿಂದ ತಯಾರಿಸಿದ ಭಸ್ಮ.

ಆ ವಿಭೂತಿ ಧರಿಸಿದ ಭಕ್ತನಾಗಲಾರ ದರಿದ್ರ.

ಪಂಚಾಕ್ಷರಿ ಮಂತ್ರ ಜಪಿಸಿದರೆ ಇಲ್ಲ ಕಷ್ಟ.

ಶುದ್ಧ ಜಲ, ಬಿಲ್ವ ಪತ್ರೆ, ಶುದ್ಧ ಭಕ್ತಿ ಸಾಕು

ನಿನ್ನೊಲಿಸಿಕೊಳ್ಳಲು.

ನಿನ್ನನ್ನು ಪ್ರತಿಕ್ಷಣ ಸ್ಮರಿಸಿದವರಿಗಿಲ್ಲ ಕಷ್ಟ ನಷ್ಟ.

ಕರುಣಿಸೆಲ್ಲರಿಗೂ ಒಳ್ಳೆಯ ಮನಸ್ಥಿತಿ.

ಮಾಡು ಭೂಲೋಕವನ್ನು
ಕೆಟ್ಟ ಕೃತ್ಯಗಳಿಂದ ವಿಮುಕ್ತಿ.

ಅರ್ಪಿಸುವೆ ನಿನಗೆ ನನ್ನೀ ಭಾವ ಭಕ್ತಿ


ಉಮಾದೇವಿ ಯು ತೋಟಗಿ, ಸ. ಶಿ.
ಸ. ಹಿ. ಪ್ರಾ. ಶಾ. ರಾಮಾಪೂರ

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group