spot_img
spot_img

ಮೊದಲ ಮಳೆ ಕವನ: ಮೊದಲ ಮಳೆ ಹನಿ

Must Read

ಮೊದಲ ಮಳೆ ಹನಿ

- Advertisement -

ಸ್ಪರ್ಷಿಸಲು ಮೊದಲ ಮಳೆ ಹನಿ ಧರೆಯ
ಮಣ್ಣಿನ ಘಮಲು ಬೀರುವದು ಸುಧೆಯ.
ಆಹಾ! ಮೊದಲ ಹನಿ ಸ್ಪರ್ಷಿಸಿದಾಗ,
ಪುಳಕಗೊಂಡೆ ತನುವೆಲ್ಲಾ ತೋಯ್ದಾಗ //

ಮುಸ್ಸಂಜೆ ಮಳೆಯ ಸೊಬಗಿಂದ
ಭುವಿಗೆ ಬಂದ ಮೆರಗು ಚೆಂದ.
ಎಲೆಗಳ ಮೇಲೆ ಹೂಗಳ ಒಳಗೆ
ಮುತ್ತುಗಳ ರಾಶಿ ರಾಶಿ ಸೊಬಗಿನಂದ //

ಸುಂದರ ಮುಂಜಾವಿಗೆ ಸ್ವರ್ಗವೇ ನಾಚಿತು
ಸುತ್ತ ನೋಡಿದತ್ತ ಇಬ್ಬನಿ ಕಾಣಲು.
ಹಿಮಾಲಯದಿ ನಿಂತಂತಹ ಅನುಭೂತಿ
ಮೊದಲಮಳೆಗೆ ತನಿಯಿತು ಪ್ರಕೃತಿ //

- Advertisement -

ಚಿಲಿಪಿಲಿ ಎಂದುಲಿಯುವ ಹಕ್ಕಿಗಳ ಹಿಂಡು
ತಾಯ ಬಳಿ ಸೇರುವ ಮರಿಗಳ ದಂಡು.
ಸುಂಯ್ಯೆಂದು ಬೀಸುವ ತಂಗಾಳಿ ಇಂಪು
ಇದನೆಲ್ಲ ಕಂಡಾಗ ಮನವೆಲ್ಲ ತಂಪು //

ತುಂತುರು ಮಳೆ ಹನಿಯೇ
ಅದೆಷ್ಟು ಸೌಂದರ್ಯ ಹೊಂದಿಹೆ?
ಆವರಿಸಿ ಬಿಗಿದಪ್ಪುವಾಸೆ ನಿನ್ನ
ಕೈಗೆ ಸಿಗದೆ ಓಡಿಸುವೆ ನನ್ನ //

ಕುಪಿತಗೊಂಡು ಬೋರ್ಗರೆಯದಿರು
ಜರಿದರೆಂದು ತೊರೆಯದಿರು
ಜೀವ ರಾಶಿಗಳಿಗೆಲ್ಲ ಆಧಾರ ನೀ ಮರೆಯದಿರು
ನಿನ್ನ ಮೇಲಿನ ಪ್ರೇಮವ ಕಳೆದುಕೊಳ್ಳದಿರು //


- Advertisement -

ಶ್ರೀಮತಿ ಜ್ಯೋತಿ ಸಿ ಕೋಟಗಿ.

- Advertisement -
- Advertisement -

Latest News

ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು

ಮೂಡಲಗಿ: ‘ಜನಪದರು ಸೇರಿ ದೈವೀಆರಾಧನೆಯೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಭೇದ ಬಿಟ್ಟು ಸಾಮರಸ್ಯವನ್ನು ಬೆಳೆಸುವುದೇ ಜಾತ್ರೆಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group