ಕವನ: ಕಡಲ ಮುತ್ತು

Must Read

ಕಡಲ ಮುತ್ತು

ನೀನು ಕನ್ನಡಾಂಬೆಯ ಸ್ವತ್ತು
ಸಾಹಿತ್ಯ ಕ್ಷೇತ್ರದ ಸಂಪತ್ತು
ನಿನ್ನ ಜನುಮದಿನದ ಈ ಹೊತ್ತು
ನಮನಾಂಜಲಿ ಓ! ಕಡಲ ಮುತ್ತು!!
ಕನ್ನಡ ಉಸಿರನು ಹೊತ್ತು
ನಡೆದು ಹೋದ ಗುರುತು
ಸಾಹಿತ್ಯ ಪ್ರೇಮಿಗಳಿಗೇ ಗೊತ್ತು
ಭಾರ್ಗವನ ಸಾಹಿತ್ಯ ಶ್ರಮದ ಗಮ್ಮತ್ತು!!
ರಾಜ ನೀನು ಕಾರಂತಜ್ಜ
ಕನ್ನಡದ ಕೀರ್ತಿ ಕಳಸ
ಅಕ್ಕರಗಳು ಅಕ್ಕರೆಯಿಂದ
ಕರೆಯುತಿವೆ ನಿನ್ನ ಬರಬಾರದೇ!
ಕನ್ನಡದ ಕಡಲದ ಮುತ್ತು ನೀನು
ಭಾರ್ಗವ ಶಿವರಾಮ
ಕನ್ನಡಿಗರ ಹೃದಯದ ಅರಸ
ಚಿರನೂತನ ನಿನ್ನ ನೆನಪು!!


ಗುರುದೇವಿ ಮಲಕಣ್ಣವರ
ಸ. ಹಿ. ಪ್ರಾಥಮಿಕ. ಶಾಲೆ, ಶ್ರೀರಂಗಪುರ. ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group