Homeಕವನಕವನ: ಲ್ಯಾಂಡ್ ಲೈನ್ ಆಂಟಿ!

ಕವನ: ಲ್ಯಾಂಡ್ ಲೈನ್ ಆಂಟಿ!

ಲ್ಯಾಂಡ್ ಲೈನ್ ಆಂಟಿ !

ಲ್ಯಾಂಡ್ ಲೈನ್ ಆಂಟಿಯ ಒಡನಾಟದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದ ನಾನು
ಒಮ್ಮೆ ಮೊಬೈಲ್ ಚೆಲುವೆಯ
ಮೋಹಪಾಶಕ್ಕೆ ಒಳಗಾಗಿ ಉನ್ಮಾದದಿಂದ ಆಕಾಶದಲ್ಲಿ
ತೇಲಾಡುತ್ತಿದ್ದಾಗ
ಆಕೆಯ ಗೆಳತಿಯರಾದ ವ್ಯಾಟ್ಸಪ್,
ಸ್ಟೇಟಸ್, ಮತ್ತು ಫೇಸ್ಬುಕ್
ಮಾಯಾಂಗನೆಯರ
ಬಿಸಿ ಅಪ್ಪುಗೆಯಲ್ಲಿ ಸಿಕ್ಕು ಹಾಕಿಕೊಂಡು ಖುಷಿಯಿಂದ
ಮೋಜು ಮಸ್ತಿ
ಮಾಡಿದ್ದೇನೋ ನಿಜ !
ಆದರೆ ಏಕೋ ಏನೋ ಒಮ್ಮೆಲೇ
ನನ್ನ ಇರುವನ್ನೇ
ಕಳೆದುಕೊಂಡಂತೆನಿಸಿ
ಅವರ ಮಾಯಾಜಾಲದಿಂದ
ಹೊರಬರಬೇಕೆಂದು ಚಡಪಡಿಸಿದೆ.
ದಿಕ್ಕು ಕಾಣದಂತಾಗಿ, ಕೊನೆಗೆ
ಹೇಗೋ ತಪ್ಪಿಸಿಕೊಂಡ ನಾನು
ಲ್ಯಾಂಡ್ ಲೈನ್ ಆಂಟಿಯೇ
ಭೇಶ್ ಎಂದುಕೊಂಡು ತಿರುಗಿ
ಅವಳತ್ತ ಧಾವಿಸುವಷ್ಟರಲ್ಲಿ
ಅವಳೆಲ್ಲೋ ಮಟಾಮಾಯ !
ನೀವೇನಾದರೂ ಹುಡುಕಿ ಕೊಡುವಿರಾ ??


ಶಿವಾನಂದ ಬ. ಬೆಳಕೂಡ

RELATED ARTICLES

Most Popular

error: Content is protected !!
Join WhatsApp Group