spot_img
spot_img

ಕವನ: ಜಾಗೃತಿ

Must Read

spot_img

ಜಾಗೃತಿ

- Advertisement -

ಅಜ್ಜಿ ಮನೆಗೆ ಹೋಗಲೇ ಇಲ್ಲ
ರಜೆಯಲ್ಲ ಕಳೆಯಿತಲ್ಲ
ರಜೆಯೋ ಸಜೆಯೋ ತಿಳಿಯದಲ್ಲ
ಇದು ಎಂತಹ ರುಜಿನ ಪೋಗದಲ್ಲ

ವರುಷ ಉರುಳಿದರೂ ದೂರಾಗಲಿಲ್ಲ
ಮತ್ತೆ ಮತ್ತೆ ಕತ್ತ ಹಿಸುಕುತಿದೆಯಲ್ಲ
ನಿಶ್ಚಿಂತೆಯ ನಿಶೆಯಂತೂ ಇಲ್ಲವೇ ಇಲ್ಲ
ದಿನಗಳಂತೂ ಸಾಗುತಿವೆ ಎಲ್ಲ

ಕ್ರೂರಿಯ ಅರ್ಭಟದ ಅಂತ್ಯವೆಲ್ಲಿ
ಕೈ ಚೆಲ್ಲಿ ಕುಳಿತರೆ ಪರಿಹಾರವೆಲ್ಲಿ
ಸಾಗಿದೆ ಜೀವನ ದುಗುಡ ದುಮ್ಮಾನಗಳಲ್ಲಿ
ಬೇಕಿದೆ ಮನಕೆ ಭರವಸೆಯ ಜೆಲ್ಲಿ

- Advertisement -

ಸಂಕಟದ ಜೊತೆ ಸಂತೋಷವೂ ಅಡಗಿದೆ
ಸಂಕಟ ಬದಿಗೊತ್ತಿ ಸಂತೋಷ ಕಾಣಬೇಕಿದೆ
ಮರಿ ಪಿಳ್ಳೆಗಳ ಭವಿಷ್ಯಕ್ಕಾಗಿ
ಸುಂದರ ಸಧೃಢ ಸಮಾಜಕ್ಕಾಗಿ

ನವ ತರುಣರೇ ಜಾಗೃತರಾಗೋಣ ನಾವಿನ್ನು
ರಕ್ಷಿಸೋಣ ಭಾರತಾಂಬೆಯ ಮಣಿ ಮುಕಟವನ್ನು
ಭಯವೆಂಬ ಜಾಲದಿಂದ ಹೊರಬನ್ನಿ
ನಿರ್ಭಯದಿ ಹೋರಾಡಿ ಗೆಲ್ಲುವೆವು ಎನ್ನಿ

ಏನಿಲ್ಲದಿದ್ದರೂ ಸಾಗುವದು ಜೀವನ
ಸಾಗಿಸಲೇ ಬೇಕು ಬಾಳಿನ ಹೂರಣ
ಯುದ್ದದಿ ಗೆಲುವು ನಮ್ಮದಾಗಿಸೋಣ
ಕನಸಿನ ಗೋಪುರವ ನನಸಾಗಿಸೋಣ


- Advertisement -

ಶ್ರೀಮತಿ. ಜ್ಯೋತಿ .ಸಿ. ಕೋಟಗಿ

- Advertisement -
- Advertisement -

Latest News

ವಿಶ್ವ ಶಾಂತಿಗೆ ಕುವೆಂಪು ಚಿಂತನೆಗಳೇ ದಾರಿದೀಪ : ಡಾ. ಭೇರ್ಯ ರಾಮಕುಮಾರ್

ಇಂದು ವಿಶ್ವವನ್ನು ಕಾಡುತ್ತಿರುವ ಹಿಂಸೆ, ಭಯೋತ್ಪಾದನೆ, ಯುದ್ಧಗಳ ನಿವಾರಣೆಗೆ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವೊಂದೇ ಪರಿಹಾರ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group