spot_img
spot_img

ಕವನ: ಋಣ

Must Read

- Advertisement -

ಋಣ

ನವಮಾಸದಿ ಗರ್ಭದಿ ಹೊತ್ತು
ಪ್ರೀತಿಯಲಿ ನಮ್ಮನು ಹೆತ್ತು
ಸಾಕಿ ಸಲುಹಿದೆ ಮೂರು ಹೊತ್ತು
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//

ಸುಂದರ ಬದುಕು ನೀಡಿದೆ ತಂದೆ
ಕಷ್ಟವನೆಂದು ತೋರಲಿಲ್ಲವೆಮಗೆ
ನಮಗಾಗಿ ಮುಡುಪಿಟ್ಟೆ ನಿನ್ನನ್ನೇ
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//

ಹಗಲಿರುಳುಗಳ ಲೆಕ್ಕವಿಲ್ಲ
ರಕ್ಷಿಸುವದೊಂದೆ ಮನದಲೆಲ್ಲ
ಓ ಸೈನಿಕರೆ ನಿಮಗೆ ಸಮನಾರಿಲ್ಲ
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//

- Advertisement -

ಅಜ್ಞಾನದ ಕೊಳೆಯ ತೊಳೆದೆ
ಸುಜ್ಞಾನದ ಬೆಳಕ ಬೀರಿದೆ
ಸಮಾಜದಿ ಬಾಳಲು ದಾರಿ ತೋರಿದೆ
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//

ಭರವಸೆಯ ಕಿರಣ ನೀವು
ಮರು ಜನ್ಮಕ್ಕೆ ಕಾರಣ ತಾವು
ವೈದ್ಯೋನಾರಾಯಣ ಹರಿಃ
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//

ದುಡಿಮೆಯನ್ನೇ ನಂಬಿದ ಯೋಗಿ
ಜಗಕೆ ಅನ್ನವ ನೀಡುವ ತ್ಯಾಗಿ
ಅನ್ನದಾತ ಹಸಿರು ಕ್ರಾಂತಿಯ ಹರಿಕಾರ
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//

- Advertisement -

ಭಾರತಾಂಬೆ ನಮ್ಮ ಹೆಮ್ಮೆ
ಯಾವುದಕ್ಕೂ ಕೊರತೆ ಇಲ್ಲ ನೋಡಿರೊಮ್ಮೆ
ಇಲ್ಲಿ ಹುಟ್ಟಿದ ನಾವೇ ಧನ್ಯರಮ್ಮ
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//


ಶ್ರೀಮತಿ ಜ್ಯೋತಿ ಕೋಟಗಿ‌, ಶಿಕ್ಷಕಿ ಸ.ಮಾ.ಪ್ರಾ.ಶಾಲೆ ತಲ್ಲೂರ

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group