spot_img
spot_img

ಜೂನ 5 ವಿಶ್ವ ಪರಿಸರ ದಿನದ ಕವನ

Must Read

- Advertisement -

ಪ್ರಕೃತಿ ಮಾತೆ

ಪ್ರಕೃತಿ ಮಾತೆ
ಜೀವ ಜಲದ ದಾತೆ
ಇರುವಿಕೆಗೆ ಮೂಲ
ತೊರೆದರೆ ಕ್ಷಾಮದ ಶೂಲ

ಹಸಿರುಡುಗೆಯ ತೊಟ್ಟು
ವನಸಿರಿಯ ಬೊಟ್ಟು
ಜುಳು ಜುಳು ನಾದದ ವನಪು
ಸುಳಿಗಾಳಿಯ ತಂಪು

ಹಸನಾದ ಗಾಳಿ
ಮಳೆ ಮೋಡದ ಬಳುವಳಿ
ಶುಭ್ರತೆಯ ವಾತಾವರಣ
ಕಳೆಗಟ್ಟಿದೆ ನಿನ್ನ ಆವರಣ

- Advertisement -

ಮಾನವನ ಅತ್ಯಾಸೆ
ಈಡು ಮಾಡುತಿದೆ ನಶೆ
ಕಂಕಣ ಕಟ್ಟಬೇಕು
ನಿನ್ನೊಲವ ವರಿಸಬೇಕು

ಕಾರ್ಖಾನೆಗಳ ಹುಟ್ಟು
ಕಲುಷಿತ ಹವಾಮಾನದ ಗುಟ್ಟು
ಪ್ಲಾಸ್ಟಿಕ ಮಯವಾಗಿ
ನಿರ್ನಾಮಕೆ ಗುರಿಯಾಗಿ

ಉಳಿಸುವ ಪಣ ತೊಡೋಣ
ಗಿಡವ ನೆಡುವ ಸಂಕಲ್ಪ ಮಾಡೋಣ
ಮಣ್ಣಿನ ಸವಕಳಿಯ ತಪ್ಪಿಸಿ
ನಮ್ಮೊಡನಾಡಿಯ ಜಪಿಸಿ

- Advertisement -

ಬದುಕುವ ಭರವಸೆ ವನದೇವಿ
ಶುಭ್ರ ಭೂಮಿಯ ಸಿರಿದೇವಿ
ಭೇದವಿಲ್ಲದ ತಾಯಿ
ಒಂದನೇ ಪ್ರಕೃತಿ ಮಹಾದೇವಿ.

ರೇಷ್ಮಾ ಕಂದಕೂರ.

- Advertisement -
- Advertisement -

Latest News

ಬಡವರ ಮನೆ ಊಟ ಚಂದ ಸ್ಥಿತಿವಂತರ ಮನೇಲಿ ಆಟ ಚಂದ ಆದರೂ ಯಾರ ನೆಮ್ಮದಿ ಎಲ್ಲಿ ಅಡಗಿದೆಯೋ ಬಲ್ಲವರಾರು?

ಅಮ್ಮ ನಿನಗ್ ಎಷ್ಟ ಸಲ ಹೇಳಿದಿನಿ ಪಕ್ಕದ ಮನೆಗೆ ಹೋಗಬೇಡಾ ಅಂತ.ನಿನಗೆ ಬೇಜಾರಾದ್ರೆ ಟಿವಿ ನೋಡು,ನಿದ್ದೆ ಮಾಡು, ಬೇಕಿದ್ರೆ ಮನೇಲೆ ಭಜನೆ, ದೇವರ ನಾಮಸ್ಮರಣೆ ಇಂತದ್ದೇನೋ...
- Advertisement -

More Articles Like This

- Advertisement -
close
error: Content is protected !!
Join WhatsApp Group