ಕವನ: ಪುಣ್ಯ ಧನ್ಯ

Must Read

ಪುಣ್ಯ ಧನ್ಯ

ಭಾರತಾಂಬೆಯ ಮಡಿಲಲ್ಲಿ ಹುಟ್ಟಿದ ಪುಣ್ಯ.
ಏಳೇಳು ಜನುಮದಲಿ ಇರಲೆ ನಗೆ.

ಭಾರತಾಂಬೆಯ ಸೇವೆಯ ಮಾಡುವೆ ಚೆನ್ನ.
ಅದೇ ಭಾಗ್ಯ ಬೇಡುವೆ ಪ್ರತಿದಿನ.
ಇಲ್ಲಿ ಕಂಡೆ ಉತ್ತಮ ನಡೆ, ನುಡಿ.

ವಿಶ್ವಕೆ ಮಾದರಿ ಭಾರತಾಂಬೆ.
ಕಲೆ, ಸಾಹಿತ್ಯ ಅಭಿವೃದ್ಧಿಗೆ ತವರೂರು.
ಹಂಪೆ, ಬೇಲೂರು,ಮಧುರೆ ಹಲವಾರು ದೇವಾಲಯಗಳು ಮೆರೆದಿವೆ ಮಾದರಿಯಾಗಿವೆ

ಅದ್ಭುತ ಕಲೆಗಳಿಂದ.
ತೋರುತಿವೆ ಮಿಂಚುತಿವೆ
ಕುಶಲ ಕಲಾಕಾರರ ಕುಶಾಲಮತಿಯಿಂದ.

ವಿವೇಕ, ರಾಮಕೃಷ್ಣ್ಣ ಹತ್ತು, ಹಲವು ಸಾಹಿತಿ, ಗುರು ಶಿಷ್ಯರ ಜ್ಞಾನಿ, ವಿಜ್ಞಾನಿಗಳ ಸಂತ, ದಾಸರ ಮಡಿಲಿದು.

ಭಾರತಾಂಬೆಯ ಕೀರ್ತಿಯನು ಶಿಖರಕ್ಕೆ ಏರಿಸಿ ತಮ್ಮ ಪ್ರತಿಭೆ ಮೆರೆದರು.
ಭಾಷೆ, ವೇಷ, ದೇವನೊಬ್ಬ ನಾಮ ಹಲವು.

ಹೀಗಿದ್ದರೂ ಭೇದ, ಭಾವ ತೋರದೆ.
ಒಮ್ಮನದಿ ಬಾಳುವ ಪರಿ ಮಾದರಿ.

ಭಾರತಾಂಬೆಯ ಪುತ್ರರೆಲ್ಲರೂ ಒಂದೆನುತಾ ಬನ್ನಿರಿ ಸೇವೆ ಮಾಡುವೆ ಅವಳ ಚರಣ ಕಮಲಗಳನ್ನು ಪೂಜಿಸುತ


ಉಮಾದೇವಿ ಯು ತೋಟಗಿ
ಸ. ಶಿ. ಸ. ಕ. ಹಿ. ಪ್ರಾ. ಶಾಲೆ. ರಾಮಾಪುರ ತಾ. ಸವದತ್ತಿ. ಜಿ. ಬೆಳಗಾವಿ

Latest News

ಕುಳಲಿಯಲ್ಲಿ ರಾಜ್ಯಮಟ್ಟದ ಸಂಗೀತೋತ್ಸವ

ಸಾಧಕ ಕಲಾವಿದರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮುಧೋಳ - ತಾಲೂಕಿನ ಸುಕ್ಷೇತ್ರ ಕುಳಲಿ ಗ್ರಾಮದ ಸದ್ಗುರು ಗುರುನಾಥಾರೂಢರ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ರಾಜ್ಯಮಟ್ಟದ...

More Articles Like This

error: Content is protected !!
Join WhatsApp Group