ಶ್ರಾವಣ
- Advertisement -
ಭೂಮಿಯನ್ನೆಲ್ಲ ಬಿತ್ತಿ ಹಸಿರುಗೊಳಿಸಿ
ಬಾನನ್ನೆಲ್ಲ ಮೋಡಗಳಿಂದ ಶೃಂಗರಿಸಿ
ಕೇದಿಗೆ ಸೇವಂತಿಗೆಗಳನ್ನೆಲ್ಲ ಅರಳಿಸಿ
ಶ್ರಾವಣ ಮಾಸ ಬಂತು ಸಂಭ್ರಮಿಸಿ
ಜಿಟಿ ಜಿಟಿ ಮಳೆಯ ತಂಪಿನಲಿ
ಚಿಗುರಿನಿಂತ ಬಳ್ಳಿಗಳ ಕಂಪಿನಲಿ
ಚಿಟ್ಟೆ ದುಂಬೆಗಳಾಟದ ನರ್ತನದಲಿ
ಶ್ರಾವಣಮಾಸ ಬಲು ಹಿಗ್ಗು ಬದುಕಿನಲಿ
ಕೇದಿಗೆ ,ಸಸಿಗಳ ಶೃಂಗಾರ ನಾರಿಯರಲಿ
ಜನಪದ ಕ್ರೀಡೆಗಳ ರಂಗು ಪುರುಷರಲಿ
ಜೋಕಾಲಿ ಜೀಕುವ ಹರುಷ ಮಕ್ಕಳಲಿ
ಸಂಭ್ರಮವೋ ಸಂಭ್ರಮ ಶ್ರಾವಣದ ಹಸಿರಿನಲಿ
- Advertisement -
ಹೊಸ ಉಡುಗೆ ತೊಟ್ಟ ಆನಂದದಲಿ
ಹಾಲೆರೆಯಲು ಹೋಗುವರು ಹೊಲದಲಿ
ದಾರಿಯುದ್ದ ಹಸಿರು ಕಣ್ತುಂಬಿಕೊಳ್ಳುತಲಿ
ನಡೆವರು ಶ್ರಾವಣದ ಸಡಗರವ ಸಂಭ್ರಮಿಸುತಲಿ
ಕಲ್ಲಪ್ಪ ಕವಳಿಕೆರೆ, ಮಂಗಳೂರು