spot_img
spot_img

ತಾಯಿಯ ಬಗ್ಗೆ ಕವನಗಳು ಮತ್ತು ನುಡಿಮುತ್ತುಗಳು in Kannada

Must Read

- Advertisement -

ಅಮ್ಮ

ತಾಯಿಯ ಗರ್ಭದಿಂದ
ಮಗಳಾಗಿ ಬಂದು
ಅತ್ತೆಯ ರೂಪದಲ್ಲಿ
ತಾಯಿಯನ್ನು ನೋಡಿ
ತನ್ನ ಮಕ್ಕಳಿಗೆ ತಾನು
ತಾಯಿ ಮಡಿಲ ನೀಡಿ
ತನ್ನ ಕುಟುಂಬಕ್ಕಾಗಿ
ಜೀವ ಮುಡಿಪು ಮಾಡಿ
ಬದುಕಿನ ಪಯಣದಿ
ಎಲ್ಲರ ಜೊತೆಗೂಡಿ
ಕಷ್ಟ ಕಾರ್ಪಣ್ಯಗಳ
ಮುರಿದು ಮುಟ್ಟಿಗೆ ಮಾಡಿ
ಪರಿವಾರದೊಳಿತಿಗೆ ತನ್ನ
ಸುಖ ತ್ಯಾಗ ಮಾಡಿ
ಬದುಕಿನ ಬಂಡಿ ಎಳೆವ
ಪತಿಯ ಒಡನಾಡಿ
ಅಮ್ಮ ಎಂಬ ಹೆಸರಲ್ಲಿ
ಉಸಿರು ಮೀಸಲು ಮಾಡಿ
ತಾಯಿ ತಾನೆಂದು ಬರೀ
ಮಕ್ಕಳ ಭವಿಷ್ಯ ನೋಡಿ
ತನ್ನ ಮುಪ್ಪಿನಲಿ ತನಗೆ
ಒಮ್ಮೊಮ್ಮೆ ಯಾರಿಲ್ಲದ್ದನ್ನೂ
ನುಂಗಿ ಅರಗಿಸಿಕೊಂಡು
ಮಕ್ಕಳನ್ನು ಹರಸುವ
ಓ ತ್ಯಾಗಮಯಿ
ಮಾತೆ ತಾಯಿ ನೀನು
ಪ್ರತ್ಯಕ್ಷ ದೈವವೇ ಸರಿ.
ಸರ್ವ ಅಮ್ಮಂದಿರಿಗೆ

ಎಂ.ಸಂಗಪ್ಪ.ಬಳ್ಳಾರಿ


ನನ್ನಮ್ಮ

ಅಮ್ಮನಾಗುವ ಆಸೆಯಲ್ಲಿ
ನವಮಾಸ ಹೊತ್ತಳು
ಜನ್ಮ ನೀಡುವಾಗ ಸಂತಸದಿ ಅತ್ತಳು ನನ್ನಮ್ಮ.

- Advertisement -

ತನ್ನ ಜೀವ ತೇದು ಜೀವ ಬೆಳೆಸಿದಳು
ತನಗಾಗಿ ಏನು ಬಯಸದೆ ವನವಾಸ ಅನುಭವಿಸಿದಳು
ನನಗಾಗಿ ಸುಖವನ್ನು ಬಯಸಿದಳು ನನ್ನಮ್ಮ.

ಅತ್ತಾಗ ನಗಿಸಿ ಉಣ್ಣಿಸಿದವಳು
ನಿದ್ದೆ ಬಂದಾಗ ಮಲಗಿಸಿ ನಕ್ಕವಳು
ಭರವಸೆಯ ಅಕ್ಕರೆಯ ಮುತ್ತು ಇಟ್ಟವಳು ನನ್ನಮ್ಮ.

ತನ್ನ ಆಸೆಗಳು ಬದಿಗಿಟ್ಟು
ನನ್ನಾಸೆಯ ಜೊತೆಗಿದ್ದು
ಸದಾ ವಿಜಯೋತ್ಸವ ಆಚರಿಸಿದವಳು ನನ್ನಮ್ಮ.

- Advertisement -

ನನಗಿಲ್ಲವೆಂದು ಕೊರಗಿದವಳಲ್ಲ
ನನಗಾಗಿ ಏನು ಮರೆತವಳಲ್ಲ ನನ್ನ ಜೊತೆಗಿದ್ದು ಖುಷಿ ಪಟ್ಟವಳು ನನ್ನಮ್ಮ.

ತನಗಾಗಿ ಏನು ಬಯಸದವಳು
ನನಗಾಗಿ ಜೀವ ಸವಿಸಿದಳು
ಸದಾ ನನ್ನ ಜೊತೆಗೆ ಇದ್ದವಳು ನನ್ನಮ್ಮ.

ಕನಕಪ್ಪ ದಂಡಿನ್


ಉಸಿರು ಕೊಟ್ಟಾಕೆ
ಜೀವಕೆ ಹಸಿರು ತುಂಬಿದಾಕೆ
ಬಸಿರು ಹೊತ್ತು
ನಡೆದರು ಕ್ಷಣವು
ಬೇಸರಿಸದ ಜೀವದ ಜೀವ
ನನ್ನವ್ವ
ಈ ಒಂದು ದಿನಮಾತ್ರವಲ್ಲಾ
ಅವಳ ನೆನೆಯಲು
ಈ ಜನ್ಮವು ಸಾಲದು
ಅವಳ ಋಣ ತಿರಿಸದ
ನಿತ್ಯ ಸಾಲಗಾರರು ನಾವು
ಅವ್ವ ಕೊಡುಗೈ ದಾನಿ
ಕೊಟ್ಟಾಕೆ ಆಕೆ ಎಲ್ಲವನು
ಬಯಸದೆ ಮರಳಿ ಏನನು
ನನ್ನವ್ವು ಮಹಾದಾನಿ.

ಆಶಾ ಯಮಕನಮರಡಿ


ಸಿಂಧುವಿನಂತಹ ಅಮ್ಮನನ್ನು ಅಕ್ಷರ ಬಿಂದುಗಳಲ್ಲಿ ಅಭಿವ್ಯಕ್ತಿಸುವ ವ್ಯರ್ಥ ಪ್ರಯತ್ನದ ಹನಿಗವಿತೆಗಳು ಒಪ್ಪಿಸಿಕೊಳ್ಳಿ.. ಪದಗಳನ್ನು ಮೀರಿದವಳಿಗೆ ಪದ್ಯದಾರತಿ. ಬದುಕನ್ನೇ ಬೆಳಗುವವಳಿಗೆ ಭಾವದೀಪ್ತಿ..”

– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ


ನಾಕ..!

ಬುವಿಯ ಮೇಲೆ
ಅತ್ಯಂತ ಸುರಕ್ಷಿತ
ನಿಶ್ಚಿಂತ ಸುಭದ್ರ
ಸಂಪ್ರೀತಿಯ ಜಾಗ
ತಾಯಗರ್ಭ.!


ಅಮ್ಮ..!

ಸುಂದರ ಬೊಟ್ಟಿರಿಸಿ
ಮೆಲ್ಲನೆ ಮುತ್ತಿಟ್ಟವಳು.!
ಚಂದಿರನ ತೋರಿಸಿ
ಸಣ್ಣನೆ ತುತ್ತಿಟ್ಟವಳು.!
ಪ್ರತಿಕ್ಷಣ ಆದರಿಸಿ
ಜೀವವ ಒತ್ತೆಯಿಟ್ಟವಳು.!


ಅನ್ವರ್ಥ..!

ಅಮ್ಮನೆಂದರೆ..
ಚಂದಿರ ಮತ್ತು
ಅನ್ನದ ಬಟ್ಟಲು.!

ಜೋಗುಳ ಮತ್ತು
ತೂಗುವ ತೊಟ್ಟಿಲು.!

ಸೆರಗು ಮತ್ತು
ಬೆಚ್ಚನೆ ಮಡಿಲು.!

ಅಕ್ಕರೆ ಮತ್ತು
ಮಮತೆ ಕಡಲು.!

ಕಕ್ಕುಲತೆ ಮತ್ತು
ವಾತ್ಸಲ್ಯ ಹೊನಲು.!

ಮುಗಿಲಿಗೂ
ಅವಳೆಂದು ಮಿಗಿಲು.!
ಸಕಲ ಭಾಗ್ಯಕೂ
ಅವಳೇ ಬಾಗಿಲು.!

ಎ.ಎನ್.ರಮೇಶ್. ಗುಬ್ಬಿ.


ಅಮ್ಮನ ಮಡಿಲು

ಅಮ್ಮನ ಮಡಿಲೇ
ನನಗೆ ಸ್ವಗ೯ಕ್ಕೆ ಸಮಾನ.
ಅಮ್ಮನು ತೋರಿದ ಪ್ರೀತಿಯೇ
ನನಗೆ ಸಾವಿರ ದೇವರು
ನೀಡುವ ವರಕ್ಕೆ ಸಮಾನ.

ಅವಳು ನಕ್ಕರೇ ನನ್ನ
ಬದುಕಿನ ಸಾವಿರ ಹೊಸ
ಕನಸುಗಳ ಉದಯ ತಾಣ.
ಆ ತಾಣದಲ್ಲೇ ನನ್ನ ಬದುಕಿನ
ಮುಂಬರುವ ದಿನಗಳ ಒಂದು
ಸುಂದರವಾದ ನೆನಪುಗಳ
ತಂಗುದಾಣ.

ಅವಳಿಂದಲೇ ಈ ಬದುಕು
ಸದಾ ಬೆಳಗುವ ಜ್ಯೋತಿಯಂತೆ.
ಅವಳಿಂದಲೇ ನನ್ನ ಬದುಕಿನ
ಎಲ್ಲಾ ಕನಸುಗಳು ಸಾಧನೆಯ
ಶೀಖರದ ಮಡಿಲನ್ನೇರಿ ಅವಳ
ಆಸೆ ಕನಸುಗಳಿಗೆ ಹೇಗಲು ಕೊಟ್ಟಂತೆ.

ಅವಳ ಪಾದದ ಅಡಿಯಲ್ಲಿ
ಅಡಗಿರುವುದು ಮುಕ್ಕೋಟಿ
ದೇವತೆಗಳ ಪ್ರೀತಿಯ ಆಶಿವಾ೯ದ,
ಆ ಆಶಿವಾ೯ದ ಅಡಿಯಲ್ಲಿ
ಅಡಗಿರುವುದು ಪ್ರತಿಯೊಬ್ಬ
ಮಗನ ಬದುಕಿನ ಆಶಾಕಿರಣ.

ನಿಜಗುಣಿ ಎಸ್ ಕೆಂಗನಾಳ


ಅಮ್ಮನ ಋಣ

ಹೆತ್ತ ತಾಯಿಯ ಜನ್ಮ ತೀರಿಸಲು
ಈ ಒಂದು ಜನ್ಮ ಸಾಲದು
ಮತ್ತೆ ಮತ್ತೆ ಬರುವೆ ನಿನ್ನ ಉದರದಲ್ಲಿ
ನಿನ್ನ ಕರುಳಿನ ಕುಡಿಯಾಗಿ ಬರುವೆ ಅಮ್ಮ

ಗರ್ಭವೆಂಬ ಗುಬ್ಬಚ್ಚಿ ಗೂಡಿನಲ್ಲಿ
ನನ್ನ ಜನ್ಮಕ್ಕೆ ಅಣಿ ಮಾಡಿ
ಸಂಸ್ಕಾರ ಸಂಸ್ಕೃತಿಯ ಪಾಠ
ನಿತ್ಯವೂ ಹೇಳಿದ ಗುರುತಾಯಿ ನೀನಮ್ಮ

ತನ್ನೊಳಗೆ ತಾನಿಲ್ಲವಾಗಿ ಎಲ್ಲರಿಗೂ ಬೇಕಾಗಿ
ಕಷ್ಟಗಳು ಎದೆಯೊಳಗೆ ಇಟ್ಟು
ನಗೆಯ ಮುಖವಾಡ ಧರಿಸಿದೆ ಅಮ್ಮ

ಕಣ್ಣೀರು ಕಡಲಾಗಿ ಇಳಿದರು
ಕಾಣದಂತೆ ಕಣ್ಣರೆಪ್ಪೆಯಲ್ಲಿ ಬಂಧಿಮಾಡಿ
ಮೇಲ್ನೋಟಕ್ಕೆ ಕುಗ್ಗದಿದ್ದರೂ
ಒಳಗೊಳಗೆ ನೀ ನಿಲ್ಲವಾಗಿ ಬದುಕಿರುವೆ ಅಮ್ಮ

ಹಣ ಆಸ್ತಿ ಅಂತಸ್ತುಗಳ ನೀನಗಿಲ್ಲ ಚಿಂತೆ
ಮಕ್ಕಳೇ ಆಸ್ತಿಯನ್ನುವುದೇ ಮನದಿಚ್ಛೆ
ಬೇಡುವೆ ಸದಾ ದೇವರಲ್ಲಿ
ನನ್ನ ಮಕ್ಕಳನ್ನು ಸದಾ ಕಾಪಾಡೆಂದು

ನಿಮ್ಮ ತ್ಯಾಗ ಬಲಿದಾನದ ಬದುಕು
ನಮ್ಮ ಬದುಕಿನ ಉಸಿರು
ವರ್ಣಿಸಲು ಪದಗಳೇ ಇಲ್ಲ ಅಮ್ಮ
ಜನ್ಮ ಜನ್ಮ ಎತ್ತಿದರು ತೀರಿಸಲು ಆಗದು ನಿನ್ನ ಋಣ.

ಶ್ರೀಮತಿ ಅಮರಾವತಿ ಹಿರೇಮಠ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group