ಮೈಸೂರು -ನಗರದ ಕೆ.ಜಿ.ಕೊಪ್ಪಲಿನ ನ್ಯೂ ಕಾಂತರಾಜ ರಸ್ತೆಯ ಕನ್ನಡ ಗೆಳೆಯರ ಬಳಗದ ವತಿಯಿಂದ ನ.೧ರಂದು ಶುಕ್ರವಾರ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿದ ಬಳಗದ ಅಧ್ಯಕ್ಷರಾದ ಬಿ.ಭೈರಪ್ಪರವರು ಮಾತನಾಡಿ, ಕನ್ನಡ ನುಡಿ, ನೆಲ, ಜಲ, ನೈಪುಣ್ಯತೆ ಇಂದು ನಶಿಸುತ್ತಿದೆ. ಇದನ್ನು ಉಳಿಸಿ, ಬೆಳೆಸಬೇಕಾಗಿದೆ. ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾದರೆ, ಕನ್ನಡಕ್ಕೆ ಇನ್ನೂ ಹೆಚ್ಚಿನ ಗೌರವ, ಸ್ಥಾನಮಾನ ಲಭಿಸುತ್ತದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಮಾಜ ಸೇವಕ ಚಾಮರಾಜು ಅವರು ಮಾತನಾಡಿ, ಕನ್ನಡ ಭಾಷೆ ಶಾಶ್ವತವಾಗಿ ಉಳಿಯಬೇಕಾದರೆ, ಸರ್ಕಾರಿ ಸಂಸ್ಥೆಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಮಾತನಾಡಬೇಕು ಮತ್ತು ಬರೆಯಲು ಪ್ರೋತ್ಸಾಹಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಾತೃಭಾಷೆಯನ್ನು ಉಳಿಸುವುದೇ ಒಂದು ಸವಾಲಿನ ಕೆಲಸವಾಗುತ್ತದೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಎಸ್.ನಿಂಗರಾಜು ನಗರತಳ್ಳಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ತುಂಬಾ ಸಂತೋಷದ ಸಂಗತಿ. ಅದು ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿ ದಿನವೂ ಕನ್ನಡವನ್ನು ಬಳಸಬೇಕು. ಕನ್ನಡ ಮಾಧ್ಯಮದ ಶಾಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ಪೋಷಕರು ನೀಡಬೇಕೆಂದು ತಿಳಿಸಿದರು. ವೇದಿಕೆಯಲ್ಲಿ ಕನ್ನಡ ಗೆಳೆಯರ ಬಳಗದ ಪದಾಧಿಕಾರಿಗಳು, ಬೇಡನ್ ಪೊವೆಲ್ ಶಾಲೆಯ ವರುಣ್, ನರ್ತನಂ ನೃತ್ಯ ಶಾಲೆಯ ಕನಸು, ಸಾತಗಳ್ಳಿ ಲೇಔಟ್ ಸೆಂಟ್ ಅರ್ನಾಲ್ಡ್ ಶಾಲೆಯ ಯಾಲಿನಿ ಕೃಷ್ಣ ಪಿ., ಮಾನಿಶಾ, ನೈಪುಣ್ಯ ನೃತ್ಯಶಾಲೆಯ ಪ್ರಣವ್, ಸಮಾಜ ಸೇವಕ ಮೋಹನ್ ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.