spot_img
spot_img

ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆ ಯಶಸ್ವಿ

Must Read

ಸಿಂದಗಿ: ತಹಶೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕು ದಂಡಾಧಿಕಾರಿ ನಿಂಗಣ್ಣ ಬಿರಾದಾರ ಅಧ್ಯಕ್ಷತೆಯಲ್ಲಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಮಸಂಸ್ಕೃತಿಕನ್ನಡ ರಾಜ್ಯೋತ್ಸವವನ್ನು ಅತೀ ವಿಜೃಂಭಣೆಯಿಂದ ಆಚರಿಸಲು ಹಮ್ಮಿಕೊಂಡ ಪೂರ್ವಭಾವಿ ಸಭೆ ಯಶಸ್ವಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ಹಳೆ ಅಜೆಂಡಾವನ್ನೇ ಮುಂದುವರೆಸದೇ ಎಲ್ಲ ಇಲಾಖೆಗಳಿಗೆ ಜವಾಬ್ದಾರಿಗಳನ್ನು ನೀಡಿ ಎಂದು ತಿಳಿಸಿದ ಅವರು, ಕರ್ನಾಟಕ 8 ಜ್ಞಾನಪೀಠ ಪ್ರಶಸ್ತಿ ಪುರಷ್ಕೃತರ ಮತ್ತು ತಾಯಿ ಭುವನೇಶ್ವರಿಯ ಭಾವಚಿತ್ರದೊಂದಿಗೆ ನಡೆಯುವ ಮೆರವಣಿಗೆಯಲ್ಲಿ ನಾವೆಲ್ಲ ಸ್ವಯಂ ಪ್ರೇರಿತರಾಗಿ ನಾಡ ಹಬ್ಬವನ್ನು ಆಚರಿಸೋಣ ಎಂದರು.

ತಹಶೀಲ್ದಾರ ನಿಂಗಣ್ಣ ಬಿರಾದಾರ ಮಾತನಾಡಿ, ಪ್ರತಿಯೊಬ್ಬ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಬೇಕು ನಮ್ಮ ನಾಡು, ನಮ್ಮ ಭಾಷೆಯನ್ನು ಯಾವತ್ತೂ ನಾವು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಹಕಾರ ಕೋರಿ ಕಾರ್ಯಕ್ರಮದ ಜವಾಬ್ದಾರಿ ತಿಳಿಸುತ್ತ ರಾಜ್ಯೋತ್ಸವವನ್ನು ನಾಡಹಬ್ಬವನ್ನಾಗಿ ಎಲ್ಲ ಇಲಾಖೆಗಳ ಸಿಬ್ಬಂದಿ ಹಾಜರಿದ್ದು ಅತೀ ವಿಜೃಂಭಣೆಯಿಂದ ಆಚರಿಸಿದ್ದು ಇಡೀ ರಾಜ್ಯಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಆಚರಿಸೋಣ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಮತ್ತು ಎಲ್ಲ ಗ್ರಾಪಂ ಗಳಲ್ಲಿ ನಾಡ ಧ್ವಜವನ್ನು ಹಾರಿಸಲು ಸೂಚಿಸಿದರು.

ಭುವನೇಶ್ವರಿ ತಾಯಿ ಮೆರವಣಿಗೆಯು ಭುವನೇಶ್ವರಿ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಸ್ವಾಮಿ ವಿವೇಕಾನಂದ ವೃತ್ತದಿಂದ ತೊಂಟದ ಸಿದ್ಧಲಿಂಗ ಮಹಾಸ್ವಾಮಿಗಳ ರಸ್ತೆಯ ಮಾರ್ಗವಾಗಿ ತೆರಳಿ ಟಿಪ್ಪು ಸುಲ್ತಾನ ವೃತ್ತದಿಂದ ಡಾ. ಅಂಬೇಡ್ಕರ ವೃತ್ತದಿಂದ ಬಸವ ಮಂಟಪದವರೆಗೆ ಮೆರವಣಿಗೆ ಸಾಗುವುದು ನಂತರ ಕಾರ್ಯಕ್ರಮ ಜರುಗುವುದು ಕಾರ್ಯಕ್ರಮದಲ್ಲಿ ಎಚ್.ಜಿ.ಕಾಲೇಜಿ ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.

ರಾಗರಂಜನಿ ಸಂಗೀತ ಅಕಾಡೆಮಿ ಹಾಗೂ ಎಬಿಸಿಡಿ ಡ್ಯಾನ್ಸ ಕೇಂದ್ರದಿಂದ ಕನ್ನಡ ಸಂಸ್ಕೃತಿ ಬಿಂಬಿಸುವ ಗೀತೆಗಳು, ನೃತ್ಯ, ನೀರು ಸರಬರಾಜು ಇಲಾಖೆ ಹಾಗೂ ವಲಯ, ಸಾಮಾಜಿಕ  ಅರಣ್ಯ ಇಲಾಖೆ ವತಿಯಿಂದ ನಾಲ್ಕು ಕಲಾತಂಡಗಳ ವ್ಯವಸ್ಥೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ತಾ.ಪಂ ಕಾರ್ಯ ನಿರ್ವಹಣಾ ಅಧಿಕಾರಿ ಬಾಬು ರಾಠೋಡ, ಕೃಷಿ ಇಲಾಖೆಯ ಉಪನಿರ್ದೇಶಕ ಡಾ. ಎಚ್.ವೈ ಸಿಂಗೆಗೋಳ, ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ, ಸಿಪಿಐ ರವಿ ಉಕ್ಕುಂದ,  ಸಿಡಿಪಿಓ ಬಸವರಾಜ ಜಗಳೂರ, ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ ವೇದಿಕೆ ಮೇಲಿದ್ದರು.

ಶಿರಸ್ತೆದಾರ ಸಿಬಿ.ಬಾಬಾನಗರ, ಸಮಾಜ ಕಲ್ಯಾಣ ಇಲಾಖೆಯ ಬನ್ನೆಟ್ಟಿ, ಬಿಸಿಎಂ ಇಲಾಖೆ,  ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಪಂಡಿತ ಯಂಪೂರೆ, ರಮೇಶ ಪೂಜಾರಿ, ಖಾದರಬಾಷಾ ವಾಲೀಕಾರ, ಶಿವು ಬಡಾನವರ, ರಾಘು ಗಾಯಕವಾಡ, ಕನ್ನಡಪರ ಸಂಘದ ಸತೀಶ ಕವಲಗಿ ಹಾಜರಿದ್ದರು.

ಶಿಕ್ಷಕ ಬಸವರಾಜ ಸೊಂಪೂರ ಸ್ವಾಗತಿಸಿ ಕಾರ್ಯಕ್ರಮದ ಅಜೆಂಡಾ ಓದಿದರು.

- Advertisement -
- Advertisement -

Latest News

ಜಲಜೀವನ ಮಿಷನ್ ಪ್ರಚಾರ ವಾಹನಕ್ಕೆ ಚಾಲನೆ

ಬೈಲಹೊಂಗಲ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಮನೆಗೆ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರು ಜಲಜೀವನ ಮಿಷನ್ ಯೋಜನೆ ಕುರಿತು ಆಟೋ ಪ್ರಚಾರ...
- Advertisement -

More Articles Like This

- Advertisement -
close
error: Content is protected !!