spot_img
spot_img

ಕನ್ನಡ ಬಳಸುವುದರ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಬೇಕು – ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು

Must Read

- Advertisement -

ಮುನವಳ್ಳಿ: ಕರ್ನಾಟಕ ಹಾಗೂ ಕನ್ನಡ ಭಾಷೆ ಹಲವಾರು ಸಮಸ್ಯೆಗಳನ್ನು ಎದುರಿಸಿದರೂ ಮತ್ತಷ್ಟು ಸಮರ್ಥವಾಗಿ ಬೆಳೆಯಬಲ್ಲದು. ಕನ್ನಡ ಬಳಸುವುದರ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಬೇಕು  ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ತಲ್ಲೂರು ರಾಯನಗೌಡರ ಕೊಡುಗೆಯನ್ಮು ಸ್ಮರಿಸುತ್ತ. ಮುನವಳ್ಳಿಯ ಯುವ ಪ್ರತಿಭೆಗಳು ನಾಟ್ಯಂ ನೃತ್ಯ ಶಾಲೆಯ ಮೂಲಕ ಮುನವಳ್ಳಿಯ ಮಹತ್ವವನ್ನು ಸಾರುವ ಆಲ್ಬಂ ಗೀತೆ ಮಾಡುವ ಮೂಲಕ ಮುನವಳ್ಳಿಯ ಹಿರಿಮೆಯನ್ನು ನಾಡಿಗೆ ಸಾರಿರುವುದು ಶ್ಲಾಘನೀಯ ಎಂದು ಶ್ರೀ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಹೇಳಿದರು.

ಅವರು ಶ್ರೀ ಸೋಮಶೇಖರ ಮಠದಲ್ಲಿ ಆಯೋಜನೆಗೊಂಡ ಕರ್ನಾಟಕ ರಾಜ್ಯೋತ್ಸವ ಹಾಗೂ ನಾಟ್ಯ ಅಕಾಡೆಮಿಯ ವಿಡಿಯೋ ಆಲ್ಬಂ ಬಿಡುಗಡೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಮುನವಳ್ಳಿ ಹೋಬಳಿ ಘಟಕ ಹಾಗೂ ಶ್ರೀ ಸೋಮಶೇಖರ ಮಠದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

- Advertisement -

ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಪನ್ಯಾಸಕ ಆನಂದ ಯಲಿಗಾರ ಮಾತನಾಡಿ ಕನ್ನಡ ಭಾಷೆ ಶ್ರೀಮಂತವಾಗಿದ್ದು ಉಚ್ಛಾರಣೆಯು ವೈಜ್ಞಾನಿಕವಾಗಿದೆ. ಕನ್ನಡ ಬಾಷೆಯ ಉಚ್ಚಾರಣೆಯಿಂದ ದೇಹದಲ್ಲಿ ಹಲವಾರು ಬದಲಾವಣೆಗಳುಂಟಾಗುವವು ಈ ವ್ಯವಸ್ಥೆ ಬೇರೆ ಭಾಷೆಗಳಲ್ಲಿ ಇಲ್ಲ ಶಾಸ್ತ್ರೀಯ ಭಾಷೆಯಾಗಿ ಕನ್ನಡದ ಮಹತ್ವವನ್ನು ಎಳೆಎಳೆಯಾಗಿ ತಿಳಿಸುವ ಮೂಲಕ ನಾವೆಲ್ಲರೂ ಕನ್ನಡ ಮಾತನಾಡುವ ಮೂಲಕ ನಮ್ಮ ಭಾಷೆ ಉಳಿಸಬೇಕು ಎಂದರು.

ಕಸಾಪ ಹೋಬಳಿ ಘಟಕದ ಅಧ್ಯಕ್ಷ ಮೋಹನ ಸರ್ವಿ ಅಧ್ಯಕ್ಷತೆ ವಹಿಸಿ “ಕನ್ನಡ ಭಾಷೆಯ ಮಹತ್ವವನ್ನು ತಿಳಿಸುತ್ತ ಕನ್ನಡದ ಹಲವು ಪ್ರಥಮಗಳನ್ನು ತಿಳಿಸಿ ಇಂಥಹ ಕನ್ನಡ ನಾಡಿನಲ್ಲಿ ಜನಿಸಿದ ನಾವು ಧನ್ಯರು ಎಂದು ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸುಧೀರ ವಾಘೇರಿ “ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಇನ್ನೂ ಹತ್ತು ಹಲವು ರಚನಾತ್ಮಕ ಚಟುವಟಿಕೆಗಳನ್ನು ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳುತ್ತಿದ್ದು ಅದಕ್ಕಿಂತ ಪೂರ್ವದಲ್ಲಿ ಮಹಿಳಾ ಘಟಕ.ಯುವ ಘಟಕ ಮ ಕ್ಕಳ ಸಾಹಿತ್ಯ ಘಟಕ ಹೀಗೆ ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಘಟಕಗಳನ್ನು ರಚಿಸಿ ಎಲ್ಲರನ್ನೂ ಈ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿಭಿನ್ನ ನೆಲೆಯಲ್ಲಿ ಹೋಬಳಿ ಘಟಕದ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದು ಮುಂದಿನ ರೂಪರೇಷೆಗಳ ಕುರಿತು ತಿಳಿಸಿದರು. ಗುರುನಾಥ ಪತ್ತಾರ ವೇದಿಕೆಯ ಗಣ್ಯರನ್ನು ಸ್ವಾಗತಿಸುವ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕಕ್ಕೆ ಸೋಮಶೇಖರ ಮಠದ ಪೂಜ್ಯರ ಕೊಡುಗೆಯನ್ನು ತಿಳಿಸುತ್ತ ಮುನವಳ್ಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಯಾವುದೇ ಚಟುವಟಿಕೆಗಳಿಗೆ ಸದಾ ಆಶೀರ್ವಾದ ನೀಡುವ ಜೊತೆಗೆ ಬೆನ್ನೆಲುಬಾಗಿ ಪರಮಪೂಜ್ಯರು ಪ್ರೋತ್ಸಾಹಿಸುತ್ತಿರುವುದನ್ನು ಮರೆಯಲಾಗದು. ಇಂತಹ ಪೂಜ್ಯರು ನಮಗೆ ದೊರಕಿದ್ದು ನಮ್ಮೆಲ್ಲರ ಭಾಗ್ಯ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಾಟ್ಯ ಡ್ಯಾನ್ಸ್ ಅಕಾಡೆಮಿ ವತಿಯಿಂದ ವಿಡಿಯೋ ಆಲ್ಬಂ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಿ.ಬಿ.ನಾವಲಗಟ್ಟಿ, ಆರ್.ವೈ.ಅಡಿಭಟ್ಟಿ. ಎಂ.ಬಿ.ಮಲಗೌಡರ. ಬಿ.ಬಿ.ಹುಲಿಗೊಪ್ಪ, ಗುರುನಾಥ ಪತ್ತಾರ, ವೈ.ಬಿ.ಕಡಕೋಳ, ವೀರಣ್ಣ ಕೊಳಕಿ, ಪ್ರಶಾಂತ ತುಳಜಣ್ಣವರ, ಬಾಳು ಹೊಸಮನಿ, ಅರುಣಗೌಡ ಪಾಟೀಲ, ಶಂಕರ ಗಯ್ಯಾಳಿ, ರಮೇಶ ಮುರಂಕರ, ಸುಧೀರ ವಾಘೇರಿ, ಟಿ.ಎನ್.ಮುರಂಕರ,  ಸುರೇಶ ಜಾವೂರ, ಮಂಜುನಾಥ ಭಂಡಾರಿ, ಮನೋಹರ ನಾಯ್ಕ, ಶಾರದಾ ದ್ಯಾಮನಗೌಡರ, ರಾಜೇಶ್ವರಿ ಬಾಳಿ, ಅನುರಾಧಾ ಬೆಟಗೇರಿ, ವಿಜಯಲಕ್ಷ್ಮೀ ಮುರಂಕರ, ಅಶೋಕ ಸಂಕಣ್ಣವರ, ಸಂತೋಷ ನಲಗೆ, ಶಂಕರ ಅಪ್ಪೋಜಿ, ರುದ್ರಮ್ಮ ಶಿರಸಂಗಿ, ವೈ.ಎಫ್.ಶಾನಭೋಗ, ಗಂಗಾಧರ ಗೊರಾಬಾಳ, ಎಂ.ಎಚ್.ಪಾಟೀಲ, ಮುಕ್ತಾ ಪಶುಪತಿಮಠ, ವಿಜಯ ಸತ್ತಿಗೇರಿ, ಪ್ರೇಮ ಕಲಾಲ, ವೀರೂ ಕಳಸಣ್ಣವರ, ಸಂತೋಷ ಕಳ್ಳಿಮಠ, ರಾಜು ನವಲಗುಂದ, ಶಿವು ಕಾಟಿ, ಮಹೇಶ ಕಳಸಣ್ಣವರ, ಸಚಿನ ಹಳ್ಳೂರ,ಸೇರಿದಂತೆ ಕಸಾಪದ ಪದಾಧಿಕಾರಿಗಳು ಇತರರು ಇದ್ದರು. ಕನ್ನಡ ಸಾಹಿತ್ಯ ಪರಿಷತ್ತು ಮುನವಳ್ಳಿ ಹೋಬಳಿ ಘಟಕ ಹಾಗೂ ಶ್ರೀ ಸೋಮಶೇಖರ ಮಠದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

- Advertisement -

ಕಾರ್ಯಕ್ರಮದ ಪ್ರಾರಂಭದಲ್ಲಿ ಅಗಲಿದ ಗಣ್ಯರಿಗೆ ಮೌನ ಆಚರಿಸುವ ಮೂಲಕ ಶೃದಾಂಜಲಿಯನ್ನು ಮಾಡಲಾಯಿತು. ಬಾಳು ಹೊಸಮನಿ ಕಾರ್ಯಕ್ರಮ ನಿರೂಪಿಸಿದರು. ಗುರುನಾಥ ಪತ್ತಾರ ವಂದಿಸಿದರು.

- Advertisement -
- Advertisement -

Latest News

ಕವನ: ಹೆಮ್ಮೆ ಪಡು ಭಾರತೀಯ ಮನವೆ

  ಹೆಮ್ಮೆ ಪಡು ಭಾರತೀಯ ಮನವೆ ಹೆಮ್ಮೆ ಪಡು ಭಾರತೀಯ ಮನವೆ ಸ್ವಾಭಿಮಾನದ ಸೌಧ  ತಲೆಯೆತ್ತಿದೆಯೆಂದು ! ಕರ್ತವ್ಯ ಪಥದಲ್ಲಿಂದು ಭಾರತ ಮುನ್ನಡೆಯುತ್ತಿದೆಯೆಂದು ! ತಳ್ಳಿ ಬಿಡು  ಒಣ ಪೂರ್ವಗ್ರಹವ ಜೋತು ಬಿದ್ದ ಆ 'ಮನು' ಮನದ ಬಿಳಲಿನಿಂದ ಕೆಳಗಿಳಿ ಹೆಮ್ಮೆ...
- Advertisement -

More Articles Like This

- Advertisement -
close
error: Content is protected !!
Join WhatsApp Group