spot_img
spot_img

“ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ ” ಅಭಿಯಾನ

Must Read

spot_img

ಮೈಸೂರು – ಕರ್ನಾಟಕದ ಜನ ಕನ್ನಡದ ಪತ್ರಿಕೆ , ಟಿ.ವಿ ಮತ್ತು ರೇಡಿಯೋ ಮಾಧ್ಯಮಗಳನ್ನು ವಸ್ತು ನಿಷ್ಠ ಮಾಹಿತಿಗಾಗಿ ಅವಲಂಬಿಸಿರುತ್ತಾರೆ ತಮ್ಮ ಕನ್ನಡದ ಓದು ಬರಹ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಲು ಕನ್ನಡಿಗರು ಕನ್ನಡ ಮಾಧ್ಯಮಗಳನ್ನು ಅನುಸರಿಸುತ್ತಿದ್ದಾರೆ.

ಜನಸಾಮಾನ್ಯರು-ಭಾಷೆ-ಮಾಧ್ಯಮ ಪರಸ್ಪರ ಬೆಸುಗೆಗಾಗಿ , ಬದುಕಿನ ಕೊಂಡಿಯಾಗಿ ನಾಡನ್ನು ಸಮೃದ್ಧಗೊಳಿಸಬೇಕಿದೆ ಅದಕ್ಕಾಗಿ ಮಾಧ್ಯಮಗಳ ಸಹಕಾರ ಬಹಳ ಮುಖ್ಯವಾಗಿದೆ.

ಕನ್ನಡ ಪತ್ರಿಕೋದ್ಯಮದ ದ್ರುವ ನಕ್ಷತ್ರ

ಆರ್. ಕಲ್ಯಾಣಮ್ಮನವರ ೧೮೯೪ ಮಾರ್ಚ್ ೩೦ ಅವರ ಜನ್ಮದಿನದಂದು ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ ಕುರಿತಂತೆ ( ಅನುಷ್ಠಾನ ಕಾರ್ಯಕ್ರಮ ) ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಈ ಅಭಿಯಾನವನ್ನು ಅದರ ಅಂಗ ಸಂಸ್ಥೆಯಾದ ಕನ್ನಡ ಜಾಗೃತಿ ಸಮಿತಿಯಿಂದ ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಜಿಲ್ಲಾ ಪತ್ರಕರ್ತ ಸಂಘದ ನಗರ ಕಾರ್ಯದರ್ಶಿಗಳಾದ ಪಿ ರಂಗಸ್ವಾಮಿ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ವೈ.ಡಿ.ರಾಜಣ್ಣ,ಜಿಲ್ಲಾಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್,ಡಾ.ವಿನೋದಮ್ಮ,ಮೈಸೂರು ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಎ.ಎಸ್ ನಾಗರಾಜ್ , ಸೌಗಂಧಿಕಾ. ವಿ .ಜೋಯಿಸ್ , ಎನ್.ಜಿ‌.ಗಿರೀಶ್ , ಡಾ . ಮುಳ್ಳೂರು ನಂಜುಂಡಸ್ವಾಮಿ , ಅರವಿಂದ್ ಶರ್ಮ ಉಪಸ್ಥಿತರಿದ್ದರು.

- Advertisement -
- Advertisement -

Latest News

ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು. ತಾಲೂಕಿನ ಮೋರಟಗಿ...
- Advertisement -

More Articles Like This

- Advertisement -
close
error: Content is protected !!