spot_img
spot_img

ಕುಮಾರ ತಳವಾರ ಅವರಿಗೆ ಕನ್ನಡ ವಿಭೂಷಣ ರಾಜ್ಯ ಪ್ರಶಸ್ತಿ ಪ್ರದಾನ

Must Read

spot_img

ಸಂಕೇಶ್ವರ: ಇಲ್ಲಿಗೆ ಸಮೀಪದ ಸೋಲಾಪುರ ಗ್ರಾಮದ ವಿಶ್ವಕನ್ನಡ ರಕ್ಷಕ ದಳದ ರಾಜ್ಯಾಧ್ಯಕ್ಷ ಕುಮಾರ ತಳವಾರ ಅವರ ನಿರಂತರ ಕನ್ನಡ ಸೇವೆಗೆ ಧಾರವಾಡದ ಯುವ ಪತ್ರಕರ್ತರ ಸಂಘ ಹಾಗೂ ನಾಡಿನ ಸಮಾಚಾರ ಪತ್ರಿಕಾ ಬಳಗ ಗೋಕಾಕ ಅವರ ಸಹಯೋಗದಲ್ಲಿ ಇತ್ತೀಚೆಗೆ ಧಾರವಾಡದ ರಂಗಾಯಣ ಸಭಾಭವನದಲ್ಲಿ ಜರುಗಿದ ಕನ್ನಡ ವಿಭೂಷಣ ೨೦೨೨ ರಾಜ್ಯಮಟ್ಟದ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸುಪುತ್ರ ಸಂಕಲ್ಪ ಶೆಟ್ಟರ, ವಿದ್ಯಾನಂದ ಸ್ವಾಮೀಜಿ, ನಾಡಿನ ಸಮಾಚಾರ ಪತ್ರಿಕೆಯ ಸಂಪಾದಕ ಬಸವರಾಜ ಉಪ್ಪಾರಟ್ಟಿ, ಡಾ. ಕೊಳ್ಚಪ್ಪೆ ಗೋವಿಂದ ಭಟ್ಟ ಸೇರಿದಂತೆ ನಾಡಿನ ನಾನಾ ಕಡೆಯಿಂದ ಆಗಮಿಸಿದ್ದ ಕವಿ, ಸಾಹಿತಿಗಳು ಉಪಸ್ಥಿತರಿದ್ದರು.

ಇವರು ತಮ್ಮ ವಿಶ್ವಕನ್ನಡ ರಕ್ಷಕ ದಳ ಸಂಘಟನೆಯ ೧೫ ಜಿಲ್ಲಾ ಶಾಖೆಗಳನ್ನು ನಾಡಿನಾದ್ಯಂತ ವಿಸ್ತರಿಸಿದ್ದಾರೆ. ಇವರು ನಿಪ್ಪಾಣಿಯಲ್ಲಿ ಗಡಿನಾಡು ಕನ್ನಡ ಬಳಗವನ್ನು ಸ್ಥಾಪಿಸಿದ್ದಾರಲ್ಲದೇ ಗಡಿಭಾಗದಲ್ಲಿ ಕಳೆದೊಂದು ದಶಕದಿಂದ ನಿರಂತರ ಚಟುವಟಿಕೆಗಳ ಮೂಲಕ ಕನ್ನಡದ ಕಂಪು ಕಮರದಂತೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕೆಎಲ್‌ಇ ಸಂಸ್ಥೆಯ ನಿಪ್ಪಾಣಿಯ ಜಿ.ಆಯ್.ಬಾಗೇವಾಡಿ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಅಲ್ಲಿಯೂ ತಮ್ಮ ವಿದ್ಯಾರ್ಥಿಗಳಿಗೆ ಕನ್ನಡದ ದೀಕ್ಷೆಯನ್ನು ನೀಡಿದ್ದಾರೆ. ರಾಜ್ಯದಲ್ಲಿಯೇ ಪ್ರಥಮ ಎಂಬಂತೆ ತಮ್ಮ ಕನ್ನಡಮಯ ಮದುವೆಯನ್ನು ಮಾಡಿಕೊಂಡಿದ್ದು, ಇದು ಇಂದು ಅನೇಕರಿಗೆ ಸ್ಫೂರ್ತಿ ನೀಡಿದೆ. ಕುಮಾರ ತಳವಾರ ಅವರ ನಿಸ್ವಾರ್ಥ ಕನ್ನಡ ಸೇವೆಗೆ ಪ್ರಶಸ್ತಿ ಲಭಿಸಿದ್ದಕ್ಕೆ ಸಂಕೇಶ್ವರ, ನಿಪ್ಪಾಣಿ ಭಾಗದ ಸಂಘ-ಸಂಸ್ಥೆಗಳು ಸೇರಿದಂತೆ ನಾನಾ ಕವಿ, ಸಾಹಿತಿ, ಕನ್ನಡಾಭಿಮಾನಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!