ಪುರಾತತ್ವ ಇಲಾಖೆಗೆ ಹೆಚ್ಚಿನ ಹುದ್ದೆ ಗಳ ನೇಮಕಕ್ಕೆ ಕನ್ನಡ ಜಾಗೃತಿ ಸಮಿತಿಯಿಂದ ಹಕ್ಕೊತ್ತಾಯ

Must Read

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...

ನದಿ ಸ್ವಚ್ಛತೆಗೆ ಚಾಲನೆ ನೀಡಿದ ಈರಣ್ಣ ಕಡಾಡಿ

ಗೋಕಾಕ: ಪ್ರಕೃತಿ ಉಚಿತವಾಗಿ ಕೊಟ್ಟಿರುವ ನೀರನ್ನು, ಗಿಡ ಮರಗಳು ಉಚಿತವಾಗಿ ಕೊಟ್ಟಿರುವ ಆಮ್ಲಜನಕವನ್ನು ನಾಶ ಮಾಡುವ ಮೂಲಕ ಸ್ವಯಂಕೃತ ಅಪರಾಧಗೈದ ನಾವೆಲ್ಲ ನದಿ ಸ್ವಚ್ಛತೆ ಮಾಡುವ...

ಮುಷ್ಕರ ಮತ್ತು ಆರ್ಥಿಕ ಪರಿಸ್ಥಿತಿ

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ಒಂದು ವಿದ್ಯಮಾನಗಳಲ್ಲಿ ಮುಷ್ಕರ ಕೂಡ ಒಂದು. ಬಂದ್ ಬಂದ್ ಬಂದ್.ಏನಿದು?ಏಕೆ ಮಾಡಬೇಕು? ಇದರಿಂದ ಆಗುವ ಬದಲಾವಣೆಗಳೇನು? ಯಾರಿಗೆ ಲಾಭ?...

ಮೈಸೂರು – ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಲ್ಲಿನ ಕನ್ನಡ ಶಾಸನಗಳ ಅಧ್ಯಯನ ತಜ್ಞರು ಇಡೀ ದೇಶದಲ್ಲಿ ಕೇವಲ ಮೂರು ಜನ ಮಾತ್ರ ಇದ್ದು ಹೆಚ್ಚು ಹುದ್ದೆಗಳನ್ನು ನೇಮಕ ಮಾಡಲು ಕನ್ನಡ ಜಾಗೃತಿ ಸಮಿತಿಯಿಂದ ಹಕ್ಕೊತ್ತಾಯ ಮಂಡಿಸಲಾಗಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಸಮಿತಿಯವರು, ಮೈಸೂರಿನಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಕಚೇರಿ ಇದ್ದು, ಇದು ಕೇಂದ್ರ ಸರ್ಕಾರದ ಸಂಸ್ಕೃತಿ ಮಂತ್ರಾಲಯದ ಅಧೀನದಲ್ಲಿದ್ದು, ಇಡೀ ದೇಶದಲ್ಲಿ ಇಂಹತ ಮೂರು ಕಚೇರಿಗಳಿವೆ (ಚೆನ್ನೈ , ಕಲ್ಕತ್ತಾ ಹಾಗೂ ಮೈಸೂರು) ಭಾರತದ ವಿವಿಧ ರಾಜ್ಯಗಳಲ್ಲಿನ ಶಾಸನಗಳ ಪಡಿಯಚ್ಚು ತೆಗೆದು ಅವುಗಳನ್ನು ಅಧ್ಯಯನ ನಡೆಸಿ ಪ್ರಕಟಿಸುವುದು ಈ ಇಲಾಖೆಯ ಮುಖ್ಯ ಕೆಲಸ .೧೮೮೬ ರಲ್ಲಿ ಆರಂಭಗೊಂಡ ೧೩೮ ವರ್ಷಗಳಷ್ಟು ಪ್ರಾಚೀನ ಇತಿಹಾಸ ಹೊಂದಿದ ಈ ಕಚೇರಿಯು ಶಾಸನ ಅಧ್ಯಯನ ತಜ್ಞ ಸಿಬ್ಬಂದಿಯ ತೀವ್ರಕೊರತೆಯಿಂದ ಬಳಲುತ್ತಿದ್ದು ಇತ್ತೀಚೆಗೆ ಕೇಂದ್ರ ಸರ್ಕಾರ ಈ ಇಲಾಖೆಯ ೭೫೮ ನೂತನ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಸಿದೆ ಇದರಲ್ಲಿ ಇತಿಹಾಸ ಮತ್ತು ಪರಂಪರೆ ಉಳಿಸುವಂಥ ಶಾಸನ ಅಧ್ಯಯನ ತಜ್ಞರ

ಇದಕ್ಕೆ ಸಂಬಂಧಿಸಿದ ಹೊಸ ಹುದ್ದೆಗಳನ್ನು ಸೃಷ್ಟಿಸಿಲ್ಲ ಹಾಗೂ ಶಾಸನ ಅಧ್ಯಯನಕ್ಕೆ ಇರುವ ೩೧ ಹುದ್ದೆಗಳಲ್ಲಿ ೨೧ ಹುದ್ದೆಗಳು ಭರ್ತಿಯಾಗಿದ್ದು ೧೦ ಹುದ್ದೆಗಳಿಗೆ ನೇಮಕಾತಿ ಬಗ್ಗೆ ಗಮನ ಹರಿಸಿಲ್ಲ ಹಾಗೂ ಕನ್ನಡ ಶಾಸನದ ಅಧ್ಯಯನ ಕುರಿತಂತೆ ದೇಶದ ಇವತ್ತಿನ ಏಕೀಕೃತ ಕರ್ನಾಟಕದ ವ್ಯಾಪ್ತಿ ಹೊರತುಪಡಿಸಿ ಕೂಡ ತಮಿಳು ನಾಡಿನಿಂದ ಕಾಶ್ಮೀರದವರೆಗೂ ಕನ್ನಡ ಶಾಸನಗಳು ದೊರಕಿದಂಥ ಉದಾಹರಣೆಗಳು ಇದ್ದು ಕನ್ನಡ ಶಾಸನಗಳ ಅಧ್ಯಯನಕ್ಕೆ ಇಡೀ ಕರ್ನಾಟಕಕ್ಕೆ ೩ ಜನ ಮಾತ್ರ ತಜ್ಞರಿದ್ದಾರೆ.

- Advertisement -

ಇಲ್ಲಿಯವರೆಗೂ ದೇಶದಲ್ಲಿನ ಶೇಕಡ ೩೦ ರಷ್ಟು ಶಾಸನಗಳು ಮಾತ್ರ ಅಧ್ಯಯನ ಮಾಡಲ್ಪಟ್ಟಿದ್ದು ಇನ್ನೂ ಬಾಕಿ ಇರುವ ಶಾಸನಗಳ ಅಧ್ಯಯನ ಮಾಡಲು ಅತಿ ಹೆಚ್ಚು ಹುದ್ದೆಗಳ ಅಗತ್ಯವಿದೆ ಎಂದು ಕನ್ನಡ ಜಾಗೃತಿ ಸಮಿತಿ ಮೈಸೂರು ಜಿಲ್ಲೆ ಮತ್ತು ನಗರ ಸದಸ್ಯರು ಭೇಟಿ ಕೊಟ್ಟಾಗ ತಿಳಿದು ಬಂದಿದ್ದು,ಅವರು ಇದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ‌‌.ಗುಬ್ಬಿಗೂಡು ರಮೇಶ್ ಅವರ ಗಮನಕ್ಕೆ ಜಾಗೃತಿ ಸಮಿತಿ ಇಂದ ತಂದಿದ್ದು ಇದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಗಮನಕ್ಕೂ ಕೂಡ ಬಂದಿದೆ .ಈ ಹಿನ್ನೆಲೆಯಲ್ಲಿ ಅಧ್ಯಕ್ಷರು ಈ ಸಮಸ್ಯೆ ಕುರಿತು ಕೇಂದ್ರ ಸರ್ಕಾರದ ಸಂಸ್ಕೃತಿ ಮಂತ್ರಾಲಯದ ಗಮನಕ್ಕೆ ತರುವುದಾಗಿ ತಿಳಿಸಿರುತ್ತಾರೆ.

ನಗರದ ಹೆಬ್ಬಾಳಿನ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಕಚೇರಿಗೆ ಇಂದು ಭೇಟಿ ನೀಡಿ ಈ ಬಗ್ಗೆ ಚರ್ಚಿಸಲಾಯಿತು. ಅಲ್ಲಿನ‌ ಎಸ್ ‌.ನಾಗರಾಜಪ್ಪ ಸಹಾಯಕ ಅಧೀಕ್ಷಕರು ಹಾಗೂ ಶಾಸನ ತಜ್ಞರು ವಿಭಾಗ ಇವರನ್ನು ಕನ್ನಡ ಜಾಗೃತಿ ಸಮಿತಿ ಮೈಸೂರು ಸದಸ್ಯರಾದ ಡಾ.ಭೇರ್ಯ ರಾಮಕುಮಾರ್, ಎ.ಎಸ್ ನಾಗರಾಜ್ , ಅರವಿಂದ್ ಶರ್ಮ , ಎನ್.ಜಿ ಗಿರೀಶ್ ,ಸೌಗಂಧಿಕಾ ಜೋಯಿಸ್ , ವಿನೋದಮ್ಮ ಈ ಸಂದರ್ಭದಲ್ಲಿ ಇದ್ದರು.

- Advertisement -
- Advertisement -

Latest News

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...
- Advertisement -

More Articles Like This

- Advertisement -
close
error: Content is protected !!