ಬೀದರ – ಚುನಾವಣೆ ಹತ್ತಿರ ಬರುತ್ತಿದಂತೆ ರಾಜಕೀಯ ನಾಯಕರ ಆಟ ಶುರುವಾದಂತಾಗಿದೆ. ಈವರೆಗೆ ನೆನೆಗುದಿಗೆ ಬಿದ್ದಿದ್ದ ಕಾರಂಜಾ ಮುಳುಗಡೆ ಸಂತ್ರಸ್ತರ ಹೋರಾಟಕ್ಕೆ ಮತ್ತೆ ಜೀವ ಸಿಕ್ಕಿದ್ದು ಈಗ ಪಾದಯಾತ್ರೆ ಆರಂಭವಾಗಿದೆ.
ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದಂತೆ ರಾಜಕೀಯ ಪಕ್ಷಗಳು ಒಂದಲ್ಲ ಒಂದು ಹಳೆಯ ವಿಷಯಗಳನ್ನು ಕೆದಕಿ ಹೋರಾಟ ಆರಂಭಿಸುತ್ತವೆ. ಈಗ ಗಡಿ ಜಿಲ್ಲೆಯ ಜೆಡಿಎಸ್ ನಾಯಕರು ಕಾರಂಜಾ ನದಿ ಮುಳುಗಡೆ ಸಂತ್ರಸ್ತರನ್ನ ಮುಂದಿಟ್ಟುಕೊಂಡು ರಾಜಕೀಯ ಆಟ ಶುರು ಮಾಡುತ್ತಿದ್ದಾರೆ ಎಂದು ಹೇಳಬಹುದು.
ಕಾರಾಂಜಾ ಮುಳುಗಡೆ ಸಂತ್ರಸ್ತರ ಪಾದಯಾತ್ರೆಗೆ ಚಾಲನೆ ನೀಡಿದ ಜೆಡಿಎಸ್ ಪಕ್ಷದ ಮುಖಂಡ ನಸಿಮ್ ಪಟೇಲ್ ಬೀದರ ಜಿಲ್ಲೆಯ ರೆಕುಳಗಿ ಗ್ರಾಮದ ಪವಾಡ ಪುರುಷ ಶಂಭುಲಿಂಗೇಶ್ವರ ದೇವಸ್ಥಾನ ದಿಂದ ಬೀದರ ಜಿಲ್ಲೆಯ ಕಾರಾಂಜಾ ಮುಳುಗಡೆ ಸಂತ್ರಸ್ತರ ರೈತರ ಜೊತೆ ಜಿಲ್ಲಾಧಿಕಾರಿ ಗಳ ಕಚೇರಿ ವರೆಗೆ ಹಮ್ಮಿ ಕೊಂಡ ಪಾದಯಾತ್ರೆ ನಡೆಸಿದರು. ರಾಜ್ಯ ಸರ್ಕಾರವು ಕಾರಂಜಾ ಜಲಾಶಯದಲ್ಲಿ ಭೂಮಿಯನ್ನು ಕಳೆದುಕೊಂಡ ರೈತರನ್ನು ಒಗ್ಗೂಡಿಸಿಕೊಂಡು ಅವರಿಗಾದ ಅನ್ಯಾಯವನ್ನು ಖಂಡಿಸಿ ಪಾದಯಾತ್ರೆ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ನಾಯಕ, ಕಾರಂಜಾ ಸಂತ್ರಸ್ತರಿಗೆ ನಮ್ಮ ಜೆಡಿಎಸ್ ಪಕ್ಷದ ಸಂಪೂರ್ಣ ಬೆಂಬಲವಿದ್ದು ರೈತರಿಗೆ ನ್ಯಾಯ ಒದಗಿಸುವ ತನಕ ಅವರ ಪ್ರತಿಯೊಂದು ಹೋರಾಟ ದಲ್ಲಿ ನಮ್ಮ ಪಕ್ಷ ನಿಲ್ಲುವದಾಗಿ ಹೇಳಿದರು.
ಕಾರಾಂಜಾ ಮುಳುಗಡೆ ಸಂತ್ರಸ್ತರ ಸಮಿತಿಯ ಅಧ್ಯಕ್ಷ ರಾದ ಚಂದ್ರಶೇಖರ ಪಾಟೀಲ ಹಾಗೂ ಸಮಿತಿಯ ಸಮಸ್ತ ರೈತರು ಈ ಪಾದಯಾತ್ರೆ ಯಲ್ಲಿ ಭಾಗವಹಿಸಿದ್ದರು.