spot_img
spot_img

ಮೊಹರಂ ಹಬ್ಬದ ಪ್ರಯುಕ್ತ ಕರ್ಬಲ್ ಮತ್ತು ರಿವಾಯತ್ ಪದಗಳು

Must Read

ಮೂಡಲಗಿ: ತಾಲೂಕಿನ ಪಿ.ಜಿ.ಹುಣಶ್ಯಾಳ ಗ್ರಾಮದಲ್ಲಿ ಮಂಗಳವಾರ ಸಾಯಂಕಾಲ ಮೊಹರಮ್ ಹಬ್ಬದ ಪ್ರಯುಕ್ತ ವಿವಿಧ ಜಾನಪದ ತಂಡಗಳಿಂದ ಕರ್ಬಲ್ ಮತ್ತು ರಿವಾಯತ್ ಪದಗಳ ಹಾಗೂ ಭಜಂತ್ರಿ ಕಲಾವಿದರಿಂದ ಶಹನಾಯಿ ವಾದನ ಕಾರ್ಯಕ್ರಮ ಜರುಗಿತು.

ಪ್ರತಿ ವರ್ಷ ಈ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಮೊಹರಂ ಹಬ್ಬ ಆಚರಿಸುವ ವಾಡಿಕೆ. ಮೊಹರಂ ಕತ್ತಲ ರಾತ್ರಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಲೇಜಿಮ್,ಹಲಗಿ ಕುಣಿತದೊಂದಿಗೆ ಹಾಡುಗಳ ಸ್ಪರ್ಧೆಯಲ್ಲಿ ಮೂಡಲಗಿಯ ಎರಡು ಹಾಗೂ ಹುಣಶ್ಯಾಳ ಗ್ರಾಮದ ಎರಡು ತಂಡಗಳು ಭಾಗವಹಿಸಿ ಬೀಬಿ ಫಾತಿಮಾ,ಹಸೇನ ಹುಸೇನ ಕುರಿತು ಬೀಬಿ ಫಾತಿಮಾನ ಕತಿ ಕೇಳರಿ ಕುಂತ ಎಂಬ ವಿವಿಧ ಕರ್ಬಲ್,ರಿವಾಯತ್ ಪದಗಳನ್ನು ಹಾಡಿದರು. ಹುಣಶ್ಯಾಳ ಪಿ ಜಿ ಗ್ರಾಮದ ನನ್ನುಸಾಬ ನದಾಫ್ ಮತ್ತು ಕಾಲೇಸಾಬ ತಂಡದ ಕಲಾವಿದರು ಹಾಡಿದ ಹಾಡುಗಳು ಜನಮನ ಸೆಳೆದವು ಸಹ ಕಲಾವಿದರಾದ ಮರಮಸಾಬ ಗದ್ಯಾಳ,ಹಗಣುಸಾಬ ಶೇಖ ಗದ್ಯಾಳ,ಕಾಲೆಸಾಬ ಹುಣಶ್ಯಾಳ,ಹಾಜಿಸಾಬ ಹುಣಶ್ಯಾಳ, ಮಹ್ಮದ ಹುಣಶ್ಯಾಳ, ಚುಟುಕುಸಾಬ ಜಾತಗಾರ(ಮಂಟೂರ) ಹುಣಶ್ಯಾಳ ತಂಡದ ನನ್ನುಸಾಬ ನದಾಫ ಶಂಕರ ಸುಣಗಾರ, ಇಸ್ಮಾಯಿಲ್ ನದಾಫ, ಅಪ್ಪಯ್ಯಾ ಸುಂಕದ, ಮಗತುಮಸಾಬ ನದಾಫ, ನಾಗಪ್ಪ ರವಳೋಜಿ, ರಾಮಸಿದ್ದ ಜಂಗಟಿ, ಲಗಪ್ಪ ನನ್ನಾರಿ, ಬಸವರಾಜ ನನ್ನಾರಿ ಇವರು ಹಾಡಿ ಪ್ರೋತ್ಸಾಹಧನ ಪಡೆದರು.

ಈ ಸಮಯದಲ್ಲಿ ಮುಖಂಡರಾದ ಮಹ್ಮದಸಾಬ ಮುಲ್ಲಾ (ಶೇಗುಣಸಿ), ಕಲ್ಲಪ್ಪ ಗೌನಾಳಿ, ಪಾಂಡುರಂಗ ಕಲಾಲ, ವಿಜಯ ಗೋಣಿ ಹಾಗೂ ಗ್ರಾಮದ ಅನೇಕ ಭಕ್ತರು ಇದ್ದರು.

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!