ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದ ಆವರಣದ ನಯನ ಸಭಾಂಗಣದಲ್ಲಿ ನಡೆದ ವೈಭವದ ವಿಶಿಷ್ಟ ವರ್ಣರಂಜಿತ ಸಮಾರಂಭದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಸಂಶೋಧನೆ, ಸಾಹಿತ್ಯ ಹಾಗೂ ಸಾಮಾಜಿಕವಾಗಿ ಗಣನೀಯ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಡಾ. ಕೆ.ಜಿ ಲಕ್ಷ್ಮಿ ನಾರಾಯಣಪ್ಪನವರಿಗೆ ಅವರಿಗೆ ಚಿನ್ನದ ಪದಕದೊಂದಿಗೆ ‘ಕರ್ನಾಟಕ ಭೂಷಣ ‘ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಡಾ. ಗುಣವಂತ ಮಂಜು , ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಡಾ.ಮನು ಬಳಿಗಾರ, ಡಾ. ಆರೂಢ ಭಾರತೀ ಸ್ವಾಮೀಜಿಗಳು, ವಿಶೇಷ ಅತಿಥಿಗಳಾಗಿ , ಚಿತ್ರನಟಿ ಕುಮಾರಿ ಸಿರಿ ಅವರು ಹಾಗೂ ಅನೇಕ ಗಣ್ಯ ವ್ಯಕ್ತಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.