ಕರ್ನಾಟಕ ಸಂಭ್ರಮ-50: ಬೈಲಹೊಂಗಲ ಕಸಾಪ ವತಿಯಿಂದ ಜೂನ 27 ರಂದು ಕಾವ್ಯೋತ್ಸವ

0
200

ಬೈಲಹೊಂಗಲ: ಕರ್ನಾಟಕ ಸಂಭ್ರಮ-50 ನಿಮಿತ್ತವಾಗಿ ಕನ್ನಡ ಸಾಹಿತ್ಯ ಪರಿಷತ್ತು ಬೈಲಹೊಂಗಲ ತಾಲೂಕು ಘಟಕ ಹಾಗೂ ನೇಸರಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಗುರುವಾರ ಜೂನ 27 ರಂದು ಬೆಳಿಗ್ಗೆ 10 ಗಂಟೆಗೆ ‘ರಾಷ್ಟ್ರಕವಿ ಕುವೆಂಪು ಅವರ ಜೀವನ-ಸಾಹಿತ್ಯ’ ಎಂಬ ವಿಷಯದ ಕುರಿತು ಉಪನ್ಯಾಸ ಹಾಗೂ ಕಾವ್ಯೋತ್ಸವ ಕಾರ್ಯಕ್ರಮವನ್ನು ನೇಸರಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಹಿರಿಯ ಸಾಹಿತಿಗಳಾದ ಸಿ.ವಿ. ಕಟ್ಟಿಮನಿ ಕಾರ್ಯಕ್ರಮ ಉದ್ಘಾಟಿಸುವರು. ಚಿಕ್ಕಬಾಗೇವಾಡಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಡಾ. ಷಣ್ಮುಖ ಗಣಾಚಾರಿ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಪತ್ರಕರ್ತರು, ಸಾಹಿತಿಗಳಾದ ಚ.ಯ. ಮೆಣಸಿನಕಾಯಿ ಹಾಗೂ ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ. ಮರಿಗೌಡ ಚೋಬಾರಿ ಆಗಮಿಸುವರು.

ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಪ್ರಾಸ್ತಾವಿಕ ನುಡಿಗಳನ್ನಾಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೇಸರಗಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಫಕ್ಕೀರನಾಯ್ಕ ಡಿ. ಗಡ್ಡಿಗೌಡರ ವಹಿಸುವರು. ಬೈಲಹೊಂಗಲ ಕಸಾಪ ಗೌರವ ಕಾರ್ಯದರ್ಶಿಗಳಾದ ಮಂಜುಳಾ ಶೆಟ್ಟರ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಂತೋಷ ಪಾಟೀಲ, ಪದಬಂಧ ಪರಿಣಿತರಾದ ಅಕ್ಬರ ಮೋಕಾಶಿ ಉಪಸ್ಥಿತರಿರುವರು.

ಪ್ರೊ ಮಹಾದೇವಪ್ಪ ಕೊಪ್ಪದ, ಚಂದ್ರಶೇಖರ ಪೂಜಾರ, ಶ್ವೇತಾ ಪಾಟೀಲ, ಸುರೇಶ ಇಂಚಲ, ಅಡಿವೆಪ್ಪ ಗಡದವರ, ಆನಂದ ವಡರಟ್ಟಿ ಕವನ ವಾಚಿಸಲಿದ್ದಾರೆ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ. ಪ್ರಕಾಶ ಮೆಳವಂಕಿ ಹಾಗೂ ಗೌರವ ಕೋಶಾಧ್ಯಕ್ಷರಾದ ಮಹೇಶ ಕೋಟಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು, ಎಲ್ಲ ಕನ್ನಡ ಮನಸ್ಸುಗಳು ಕಾರ್ಯಕ್ರಮಕ್ಕೆ ಆಗಮಿಸುವಂತೆ ಪರಿಷತ್ತಿನ ಎಲ್ಲ ಕಾರ್ಯಕಾರಿ ಸದಸ್ಯರು ಕೋರಿದ್ದಾರೆ.