spot_img
spot_img

ಹೂಗಾರ ಅವರಿಗೆ ಒಲಿದ ‘ಕರ್ನಾಟಕ ಶಿಕ್ಷಣ ಸಿರಿ’ ಪ್ರಶಸ್ತಿ

Must Read

spot_img
 ಮೂಡಲಗಿ: ತಾಲೂಕಿನ ಶಿವಾಪೂರ(ಹ) ಗ್ರಾಮದ ಶಿಕ್ಷಕ,ಸಾಹಿತಿ ಚಿದಾನಂದ ಹೂಗಾರ ಅವರಿಗೆ “ಕರ್ನಾಟಕ ಶಿಕ್ಷಣ ಸಿರಿ” ಪ್ರಶಸ್ತಿ ಒಲಿದಿದೆ.
       ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ, ಬ್ಯಾಕೂಡ ತಾllರಾಯಬಾಗ ಜಿllಬೆಳಗಾವಿ ಇವರು ಅಕ್ಷರ ದಾಸೋಹ -2024 ಕಾರ್ಯಕ್ರಮದಲ್ಲಿ ಶಿಕ್ಷಕ ದಿನಾಚರಣೆ ನಿಮಿತ್ತವಾಗಿ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಡಿನ ಹಲವು ಶಿಕ್ಷಕರಿಗೆ ಈ ಪ್ರಶಸ್ತಿ ಕೊಡಮಾಡುತ್ತಾರೆ.
    ಕನ್ನಡ ಸಾಹಿತ್ಯ ಪರಿಷತ್ತು ಭವನ ಮುಧೋಳದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೂಡಲಗಿ ತಾಲೂಕಿನ ಶಿವಾಪೂರ (ಹ) ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ  ಚಿದಾನಂದ ಹೂಗಾರ ರವರಿಗೆ “ಕರ್ನಾಟಕ ಶಿಕ್ಷಣ ಸಿರಿ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
    ಸಂಸ್ಥೆಯ ಅಧ್ಯಕ್ಷರಾದ ಸಿದ್ರಾಮ ನಿಲಜಗಿ,ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಕಾಶ ವಸ್ತ್ರದ, ಖ್ಯಾತ ವೈದ್ಯರಾದ ಶಿವಾನಂದ ಕುಬಸದ,ಎಂ.ಜಿ.ದಾಸರ,ಸಿದ್ದಣ್ಣ ಬೆಡಗಿ, ಕ. ಸಾ. ಪ ಅಧ್ಯಕ್ಷರಾದ ಆನಂದ ಪೂಜಾರಿ ಹಾಗೂ ಇನ್ನು ಅನೇಕ ಗಣ್ಯರು ಉಪಸ್ಥಿತರಿದ್ದರು
- Advertisement -
- Advertisement -

Latest News

ಕಿಟದಾಳದಲ್ಲಿ ಜರುಗಿದ ಕಲಿಕಾ ಹಬ್ಬ

ಸೀರೆ ತೊಟ್ಟುಕೊಂಡು ಬಂದ ಬಾಲಕಿಯರು, ಮದುವಣಗಿತ್ತಿಯಂತೆ ಕಂಗೊಳಿಸಿದ ಶಾಲಾ ಆವರಣ. ಎಲ್ಲರ ತಲೆ ಮೇಲೊಂದು ಕಲರ್ ಕಲರ್ ಪೇಪರ್ ಟೋಪಿ. ಹೌದು, ಹೀಗೆ ಶಾಲೆಯಲ್ಲೊಂಥರಾ ಹಬ್ಬದ...
- Advertisement -

More Articles Like This

- Advertisement -
close
error: Content is protected !!
Join WhatsApp Group