ಮುನವಳ್ಳಿ – ಪಟ್ಟಣದ ಯೋಗ ಪ್ರವೀಣ ಕಾರ್ತಿಕ ಮಹಾಂತೇಶ ಬೆಲ್ಲದ ಅವರನ್ನು ಕರ್ನಾಟಕ ಸಾಹಿತ್ಯ ಅಕಾಡಮಿಯವರು ಶಿವಯೋಗ ಮಂದಿರದಲ್ಲಿ ದಿನಾಂಕ ೨೮-೭-೨೦೨೨ ರಿಂದ ೧-೮-೨೦೨೨ ರ ವರೆಗೆ ಜರುಗುವ “ಸಂತ ಸಾಹಿತ್ಯ ಅಧ್ಯಯನ ಶಿಬಿರ” ದಲ್ಲಿ ಶಿಬಿರಾರ್ಥಿಗಳಿಗೆ ಪ್ರತಿದಿನ ಬೆಳಿಗ್ಗೆ ೬.೩೦ ಜರುಗುವ “ಯೋಗ ಮತ್ತು ಧ್ಯಾನ” ಕುರಿತು ಕಾರ್ಯಾಗಾರದಲ್ಲಿ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆ ಮಾಡಿರುವರು.
ಕಾರ್ತಿಕ ಇತ್ತೀಚಿಗಷ್ಟೇ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರ ಮಟ್ಟದಲ್ಲಿ ಜರುಗಿದ ರಾಷ್ಟ್ರೀಯ ಆಯುಷ್ ಇಲಾಖೆ ಕಂಟಿನ್ಯೂವಿಂಗ್ ಮೆಡಿಕಲ್ ಎಜುಕೇಶನ್ ಯೋಗ ಚಿಕಿತ್ಸಕರಿಗೆ ಹಾಗೂ ಯೋಗ ಶಿಕ್ಷಕರಿಗಾಗಿ ಸಂಯೋಜಿಸಿದ ಯೋಗ ಕುರಿತು ತರಬೇತಿಯಲ್ಲಿ ಭಾಗವಹಿಸುವ ಮೂಲಕ ರಾಷ್ಟ್ರಮಟ್ಟದ ಕಾರ್ಯಾಗಾರದಲ್ಲಿ ಕೂಡ ತರಬೇತಿ ಹೊಂದಿರುವರು. ಜೊತೆಗೆ ವಿವಿಧ ರಾಜ್ಯಗಳಲ್ಲಿ ಜರಗುವ ಯೋಗ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿಯೂ ಕೂಡ ಭಾಗವಹಿಸಿರುವರು.ಇವರ ಈ ಆಯ್ಕೆಯನ್ನು ಸವದತ್ತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಯ.ಮಾ.ಯಾಕೊಳ್ಳಿ ಗೌರವ ಕಾರ್ಯದರ್ಶಿಗಳಾದ ಬಿ.ಎನ್.ಹೊಸೂರ. ವೈ.ಬಿ.ಕಡಕೋಳ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಜಿ.ವೈ.ಕರಮಲ್ಲಪ್ಪನವರ, ಮುನವಳ್ಳಿ ಹೋಬಳಿ ಘಟಕದ ಅಧ್ಯಕ್ಷರಾದ ಮೋಹನ್ ಸರ್ವಿ, ಕಾರ್ಯದರ್ಶಿಗಳಾದ ಜಿ.ಪಿ.ಪತ್ತಾರ,ಸುಧೀರ ವಾಘೇರಿ,ಕರ್ನಾಟಕ ಸಾಂಸ್ಕೃತಿಕ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಅನುರಾಧ ಬೆಟಗೇರಿ ಮೊದಲಾದವರು ಅಭಿನಂದಿಸಿ ಶುಭ ಹಾರೈಸಿರುವರು.