spot_img
spot_img

ಪ್ರೊ. ಕರ್ಜಗಿಯವರ ಅಭಿನಂದನಾ ಸಮಾರಂಭ ಏ.10 ರಂದು

Must Read

spot_img
- Advertisement -

ಸಿಂದಗಿ: ಸುಧಿರ್ಘ 28 ವರ್ಷಗಳ ಕಾಲ ಪಟ್ಟಣದ ಆರ್.ಡಿ.ಪಾಟೀಲ ಕಾಲೇಜಿನಲ್ಲಿ 6 ವರ್ಷ ಉಪನ್ಯಾಸಕರಾಗಿ 22 ವರ್ಷ ಪ್ರಾಚಾರ್ಯರಾಗಿ ಶಿಕ್ಷಣ ಕ್ಷೇತ್ರವನ್ನು ಬೆಳೆಸಿ ಉತ್ತಮ ಸಂಸ್ಥೆ ಕಟ್ಟುವಲ್ಲಿ ಅವಿರತ ಸೇವೆ ಸಲ್ಲಿಸಿದ ಬಿ.ಪಿ.ಕರ್ಜಗಿಯವರ ಅಭಿನಂದನಾ ಸಮಾರಂಭ ಹಾಗೂ ಮದುವೆಯ 50ರ ಸುವರ್ಣ ಮಹೋತ್ಸವ ಮತ್ತು 75 ವರ್ಷದ ಅಮೃತ ಮಹೋತ್ಸವನ್ನು ಏ.10 ರಂದು ಬೆಳಿಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.

ಪಟ್ಟಣದ ಪಿಇಎಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸತತ 28 ವರ್ಷಗಳ ಕಾಲ ಶಿಕ್ಷಣ ಸಂಸ್ಥೆಯನ್ನು ಬೆಳೆಸಿ ನಿವೃತ್ತಿಯಾದರೂ ಕೂಡಾ ಕರ್ಜಗಿಯವರು ತಮ್ಮದೆಯಾದ ಪಿಇಎಸ್ ಶಿಕ್ಷಣ ಸಂಸ್ಥೆಯನ್ನು ತೆರೆದು ಶಿಕ್ಷಣ ದಾಸೋಹವನ್ನು ನೀಡುವ ಮೂಲಕ ಅವಿಶ್ರಾಂತವಾಗಿ ಶಿಕ್ಷಣವನ್ನು ಬೆಳೆಸುತ್ತಿದ್ದಾರೆ ಎಂದರು.

ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ವಹಿಸಲಿದ್ದು. ಶಾಸಕ ರಮೇಶ ಭೂಸನೂರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಉಪಸಭಾಪತಿ ಯು.ಟಿ.ಖಾದರ, ಮಾಜಿ ಸಿ.ಎಂ.ಜಗದೀಶ ಶೆಟ್ಟರ, ಎಂಎಲ್ಸಿ ಹಣಮಂತ ನಿರಾಣಿ ಸೇರಿದಂತೆ ಹಲವು ಗಣ್ಯಮಾನ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

- Advertisement -

ಪಿಇಎಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಐ.ಬಿ.ಬಿರಾದಾರ ಮಾತನಾಡಿ, ನಿವೃತ್ತ ಪ್ರಾಚಾರ್ಯ ಬಿ.ಪಿ.ಕರ್ಜಗಿಯವರ 50 ವರ್ಷದ ಮದುವೆಯ ಸುವರ್ಣ ಮಹೋತ್ಸವ 75 ವರ್ಷದ ಅಮೃತ ಮಹೋತ್ಸವ ಅಚರಿಸುವ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಬಳಗವು ಸುಮಾರು 40 ಲೇಖಕರಿಂದ ಸಂಗ್ರಹಿಸಿದ 700 ಪುಟಗಳ ಅಭಿನಂದನಾ ಗ್ರಂಥವು 2 ವರ್ಷಗಳ ಹಿಂದೆ ಬಿಡುಗಡೆಗೊಳ್ಳಬೇಕಾಗಿತ್ತು ಸತತ 2 ವರ್ಷಗಳಿಂದ ಕೋವಿಡ್ ಆವರಿಸಿದ ಕಾರಣ ಅಭಿನಂದಾನಾ ಸಮಾರಂಭ ವಿಳಂಬವಾಗಿದ್ದು ಇದೇ 10 ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಕಾರಣ ಅವರ ಸೇವಾವಧಿಯಲ್ಲಿ ಕಲಿತ ವಿದ್ಯಾರ್ಥಿ ಬಳಗ ಹಾಗೂ ಅಭಿಮಾನಿ ಬಳಗ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕು ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಡಾ. ಎಂ.ಎಂ.ಪಡಶೆಟ್ಟಿ, ಡಾ. ಸಿ.ಕೆ ಕಟ್ಟಿ, ನೆಹರೂ ಪೋರವಾಲ, ಕೆ.ಎಚ್.ಸೋಮಾಪುರ, ಆರ್.ಡಿ.ಕುಲಕರ್ಣಿ, ಅಪ್ಪು ತಾರಾಪುರ, ಪ್ರಾಚಾರ್ಯ ಕಣ್ಣಿ ಸೇರಿದಂತೆ ಅನೇಕರಿದ್ದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group