spot_img
spot_img

ನಿಪ್ಪಾಣಿಯಲ್ಲಿ ಕಸಾಪ ಸಂಸ್ಥಾಪನಾ ದಿನಾಚರಣೆ

Must Read

- Advertisement -

ನಿಪ್ಪಾಣಿ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ನಿಪ್ಪಾಣಿ ವತಿಯಿಂದ ಸ್ಥಳೀಯ ಶಿವಶರಣೆ ಶ್ರೀ ದಾನಮ್ಮದೇವಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆ ಅದ್ದೂರಿಯಾಗಿ ಜರುಗಿತು.

ಕಾರ್ಯ ಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ ಡಾ.ಪ. ಪೂ.ಶ್ರೀ ಶ್ರದ್ದಾನಂದ ಮಹಾಸ್ವಾಮಿಗಳು, ಪ. ಪೂ. ಶ್ರೀ ಪ್ರಾಣಲಿಂಗ ಮಹಾಸ್ವಾಮಿಗಳು ಹಾಗೂ ಪ. ಪೂ. ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಕನ್ನಡ ಉಳಿಸಿ ಬೆಳೆಸಲು ಸಹಕಾರಿ ಎಂದು ಹೇಳಿದರು.

ವಿದ್ಯಾ ಸಂವರ್ಧಕ ಮಂಡಳದ ನಿರ್ದೇಶಕರಾದ ಸಂಜಯ ಮೊಳವಾಡೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. 

- Advertisement -

ಅತಿಥಿ ಉಪನ್ಯಾಸಕ ಪ್ರೊ. ಮಾರುತಿ ಕೊಣ್ಣೂರಿ ಮಾತನಾಡಿ ಕ. ಸಾ. ಪ. ಸ್ಥಾಪನೆ, ನಡೆದು ಬಂದ ದಾರಿ,ಉದ್ದೇಶ, ಮಹತ್ವ ಹಾಗೂ ಕನ್ನಡ ನಾಡು ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ ರಕ್ಷಣೆ ಬಗ್ಗೆ ಸೊಗಸಾಗಿ ವಿವರಿಸಿದರು.

ಮುಖ್ಯ ಅತಿಥಿ ವಿ. ಎಸ್. ಎಮ್. ಸಿ. ಇ. ಓ. ಡಾ. ಸಿದಗೌಡ ಪಾಟೀಲ ಹಾಗೂ ಗಡಿನಾಡು ಕನ್ನಡ ಬಳಗದ ಅಧ್ಯಕ್ಷರಾದ  ಮಹಾದೇವ ಬರಗಾಲೆ ಅವರು ಮಾತನಾಡಿ ಗಡಿಯಲ್ಲಿ ಕನ್ನಡ ಬೆಳಸುವ ಬಗೆ ವಿವರಿಸಿದರು.

ಅಧ್ಯಕ್ಷತೆ ವಹಿಸಿದ ಕ. ಸಾ. ಪ.ಘಟಕದ ತಾಲೂಕು ಅಧ್ಯಕ್ಷರಾದ ಈರಣ್ಣ ಶಿರಗಾವಿ ಅವರು ಮಾತನಾಡಿ ಕ. ಸಾ. ಪ. ಸ್ಥಾಪನೆ, ಬೆಳವಣಿಗೆಯಲ್ಲಿ ಹಿರಿಯರ ಪರಿಶ್ರಮ ಹಾಗೂ ಕನ್ನಡ ಕನ್ನಡಿಗ ಕರ್ನಾಟಕ ಹಿರಿಮೆ ಬಗ್ಗೆ ತಿಳಿಸಿದರು.

- Advertisement -

ಕನ್ನಡ ಪರ ಚಿಂತಕರಾದ ಡಾ. ಎಸ್. ಆರ್. ಪಾಟೀಲ, ರವೀಂದ್ರ ಶೆಟ್ಟಿ, ಅನಿಲ ನೇಷ್ಟಿ, ಡಾ. ಎಸ್. ಕೆ. ಖಜ್ಜಣ್ಣವರ, ವೀರಣ್ಣ ಗಿರಿಮಲ್ಲನವರ, ಜ್ಯೋತಿರಾಮ ಜನವಾಡೆ,ನಿರ್ಮಲಾ ಕೊಣ್ಣೂರಿ, ಉಮಾ ಶಿರಗಾವಿ, ಜಯಶ್ರೀ ಅಕ್ಕಿ, ವರ್ಷಾ ಭೋಪಳೆ, ಯಲ್ಲಪ್ಪ ಹಂಡಿ ಹಾಗೂ ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.

ಆರಂಭದಲ್ಲಿ ಸೌ. ಉಜ್ವಲಾ ಕೊಳಕಿ ವಚನ ಗಾಯನ ಮಾಡಿದರು. ಕು. ದಿವ್ಯಾ ಹಸುರೆ ಹಾಗೂ ಸಂಗಡಿಗರು ನಾಡ ಗೀತೆ ಹಾಡಿದರು. ಪ್ರಾಸ್ತವಿಕ ವಾಗಿ ಮಾತನಾಡಿದ ಕ. ಸಾ. ಪ.  ಕಾರ್ಯದರ್ಶಿ ಪ್ರೊ. ಮಿಥುನ ಅಂಕಲಿ ಕ. ಸಾ. ಪ. ಕಟ್ಟಿ ಬೆಳಸಿದ ಮಹನೀಯರ ಕಾರ್ಯಗಳು ಅವಿಸ್ಮರಣಿಯ ಎಂದು ಹೇಳಿದರು. ಸಚೀನ ಕಾಂಬಳೆ ಸರ್ವರನ್ನು ಸ್ವಾಗತಿಸಿದರು. ಸೌ.ಶೃತಿ ಶಿರಗಾವಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಸೌ. ಶಕುಂತಲಾ ಕಮತೆ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು

ಮೂಡಲಗಿ: ‘ಜನಪದರು ಸೇರಿ ದೈವೀಆರಾಧನೆಯೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಭೇದ ಬಿಟ್ಟು ಸಾಮರಸ್ಯವನ್ನು ಬೆಳೆಸುವುದೇ ಜಾತ್ರೆಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group