ಫೋಟೋ – ಪಟ್ಟಣದ ಖಾಸಗಿ ಹೊಟೇಲೊಂದರಲ್ಲಿ ಕನ್ನಡ ಸಾಹಿತ್ಯ ಪರಿಸತ್ತಿನ ಪದಾಧಿಕಾರಿಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಾಹಿತಿ ಅಶೋಕ ಗಾಯಕವಾಡ ಮಾತನಾಡಿದರು.
ಸಿಂದಗಿ: ಕನ್ನಡ ಸಾಹಿತ್ಯ ಪರಿಷತ್ತು ಎಂದರೆ ಯಾವುದೇ ಜಾತಿಯ ಬೆಳವಣಿಗೆಗಳಿಗೆ ಸಮ್ಮಂದಪಟ್ಟ ಮತ್ತು ಕೆಲವು ಜಾತಿಗಳಿಗೆ ಸೀಮಿತವಾದ ಸಂಸ್ಥೆಯಲ್ಲ. ಅದು ಕನ್ನಡದ ಅಭಿವೃದ್ಧಿಗೆ ಹುಟ್ಟಿಕೊಂಡ ಸಂಸ್ಥೆಯಾಗಿದೆ ಎಂದು ಹಿರಿಯ ಸಾಹಿತಿ ಅಶೋಕ ಗಾಯಕವಾಡ ವಕೀಲರು ಸ್ಪಷ್ಟಪಡಿಸಿದರು.
ಪಟ್ಟಣದ ಖಾಸಗಿ ಹೊಟೇಲೊಂದರಲ್ಲಿ ಕನ್ನಡ ಸಾಹಿತ್ಯ ಪರಿಸತ್ತಿನ ಪದಾಧಿಕಾರಿಗಳು ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ. ಎಲ್ಲ ಕನ್ನಡಿಗರಲ್ಲಿ ಕನ್ನತನ ಬೆಳೆಸುವಂಥ ಕಾರ್ಯ ನಡೆಯಬೇಕಾಗಿದೆ ಯಾವುದೇ ದ್ವೇಷದ ವಾತಾವರಣಕ್ಕೆ ಇಲ್ಲ ಬೆಲೆಯಿಲ್ಲ. ನಾವೆಲ್ಲರು ಕನ್ನಡ ಜಾತಿಯವರು ಎಂದು ಕೊಂಡಾಗ ಮಾತ್ರ ಕನ್ನಡ ಬೆಳೆಯಲು ಸಾಧ್ಯ ಎಂದರು.
ಕಸಾಪ ನೂತನ ಅಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಸಮತೋಲಿತ ಸಾಹಿತಿಗಳ ಕೂಟವಾಗಿದೆ ಕಾರಣ ಎಲೆಮರೆ ಕಾಯಿಯಂತೆ ಗ್ರಾಮೀಣ ಮಟ್ಟದಲ್ಲಿ ತಮ್ಮದೇಯಾದ ದಾಖಲೆಗಳನ್ನು ಸೃಷ್ಟಿಸಿಕೊಂಡು ವೇದಿಕೆ ಸಿಗದೇ ವಂಚಿತರಾದ ಕಲಾವಿದರಿಗೆ., ಸಾಹಿತಿಗಳನ್ನು ಗುರುತಿಸಿ ಎಲ್ಲ ಪ್ರಕಾಶನಗಳ ಮೂಲಕ ಅನೇಕ ಬರಹಗಾರರನ್ನು ಹೊರತೆಗೆಯುವ ಸಮಾಜಮುಖಿ ಕಾರ್ಯಕ್ಕೆ ಅಣಿಯಾಗುತ್ತ ರಚನಾತ್ಮಕ ಕಾರ್ಯುಕ್ರಮಗಳನ್ನು ಹಮ್ಮಿಕೊಳ್ಲುವ ಮಹದಾಸೆ ಹೊಂದಲಾಗಿದೆ ಎಲ್ಲ ಸಾಹಿತಾಸಕ್ತರ, ಪದಾದಿಕಾರಿಗಳ, ಹಿರಿಯ, ಕಿರಿಯ ಸಾಹಿತಿಗಳ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡವನ್ನು ಬೆಳೆಸೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗ ಚೌಧರಿ, ಮಹಿಳಾ ಕಾರ್ಯದರ್ಶಿ ಶಿಲ್ಪಾ ಕುದರಗೊಂಡ, ರಮೇಶ ಪೂಜಾರಿ, ಎಂ.ಎ.ಖತೀಬ, ಪಿ.ಜಿ.ಲೋಣಿ, ಸಾಯಬಣ್ಣಾ ಪುರದಾಳ ಮಾತನಾಡಿದರು.
ಈ ಪತ್ರಿಕಾ ಗೋಷ್ಠಿಯಲ್ಲಿ ಶಿವಕುಮಾರ ಕಲ್ಲೂರ, ಜಯಶ್ರೀ ಕುಲಕರ್ಣಿ, ಸಿದ್ದಾರೂಢ ಕಟ್ಟಿಮನಿ, ಎನ್.ಎಂ.ಚಪ್ಪರಬಂದ, ಮಹೇಶ ಬಸರಕೋಡ, ಖಾದರ ಬಂದಾಳ, ಮಹಾವೀರ ಸುಲ್ಪಿ, ಶ್ರೀಶೈಲ ಕುದರಗೊಂಡ, ರಮೇಶ ನಡುವಿನಕೇರಿ, ಶಾಂತೂ ರಾಣಾಗೋಳ ಸೇರಿದಂತೆ ಹಲವರು ಇದ್ದರು.