ಬೈಲಹೊಂಗಲ: ಕರ್ನಾಟಕ ಸಂಭ್ರಮ 50 ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಘೋಷಣೆ ನಿಮಿತ್ತವಾಗಿ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ, ಬೈಲಹೊಂಗಲ ಹಾಗೂ ಗ್ಲೋಬಲ್ ವುಮೇನ್ರೈಸ್ ಫೌಂಡೇಶನ್, ಬೆಂಗಳೂರು ಇವರ ಸಹಯೋಗದಲ್ಲಿ ಸೆಪ್ಟೆಂಬರ್ 1 ರಂದು ರವಿವಾರ ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಚನ್ನಮ್ಮ ಸಮಾಧಿ ರಸ್ತೆಯಲ್ಲಿರುವ ಗಣಾಚಾರಿ ಮಹಾವಿದ್ಯಾಲಯದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ವಹಿಸಲಿದ್ದಾರೆ. ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಶಿವಾನಂದ ಟವಳಿ ಕವಿಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ.
ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಆಶಯ ನುಡಿಗಳನ್ನಾಡಲಿದ್ದಾರೆ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾವಿಷಯತ್ ಸದಸ್ಯರಾದ ಡಾ. ಚಂದ್ರಶೇಖರ ಬಿ. ಗಣಾಚಾರಿ, ಬೆಂಗಳೂರಿನ ಗ್ಲೋಬಲ್ ವುಮೇನ್ರೈಸ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಡಾ. ಮನ್ಮತಯ್ಯ ಸ್ವಾಮಿ ಹಾಗೂ ಕಾರ್ಯದರ್ಶಿಗಳಾದ ಮಿಥುನ ಹುಗ್ಗಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಪ್ರೇಮಕ್ಕ ಅಂಗಡಿ, ಡಾ. ನಾಗೇಂದ್ರ ಚಲವಾದಿ, ಡಾ. ಮಲ್ಲಿಕಾರ್ಜುನ ಛಬ್ಬಿ, ಡಾ. ದಿಗಂಬರ ದತ್ತಾತ್ರೇಯ ಕುಲಕರ್ಣಿ, ಡಾ. ಡಿ. ಪ್ರಾನ್ಸಿಸ್ ಕ್ಸೇವಿಯರ್, ಚಂದ್ರಶೇಖರ ಕೊಪ್ಪದ, ಬಸವಣ್ಣೆಪ್ಪ ಕಾದ್ರೊಳ್ಳಿ, ಅನ್ನಪೂರ್ಣ ಆರ್. ಕನೋಜ, ಪ್ರಕಾಶ ಮರಿತಮ್ಮನವರ, ಸುರೇಶ ತಂಗೋಡ, ರಾಜೇಂದ್ರ ಹೆಗಡೆ, ಶಿಶಿರ ರಮೇಶ ಪಾಟೀಲ, ಬಸವರಾಜ ಕಳಕಪ್ಪ ವಾರಿ, ಪುರಂದರ ಮಲಕರಿಮೆಕ್ಕಳಿಕೆ, ವೀಣಾ ಆರ್. ಕಾರಂತ, ಕಿರಣ ಗಣಾಚಾರಿ, ತರುಣ್ ವಿಶ್ವಜಿತ್, ಟಿ.ಜಿ.ಯಂ ಸುಲೋಚನ, ಮುತ್ತುರಾಜು ಚಿನ್ನಹಳ್ಳಿ, ಜವಾಹರ ಧ. ಕನ್ನೂರ, ಮಹಾಂತೇಶ ಮಲ್ಲಪ್ಪ ರಾಜಗೋಳಿ, ಸಿ.ವಾಯ್. ಮೆಣಸಿನಕಾಯಿ, ಗಿರೆಪ್ಪ ಶೆಟ್ಟೆಪ್ಪ ಬೊಂಬ್ರಿ, ಉದಯಚಂದ್ರ ದಿಂಡವಾರ, ಭಾರತಿ ಗುರುಶಿದ್ದಯ್ಯ ಕಿತ್ತೂರಮಠ, ಸಿದ್ದಪ್ಪ ಗೊಡಚಿ, ಶ್ರೀಶೈಲ ಕಂಬಾರ, ಗಿರಿಜಾದೇವಿ ಮ. ಗಂಜಿಹಾಳ, ನಾಗಯ್ಯ ಈಶ್ವರಯ್ಯ ಹುಲೆಪ್ಪನವರಮಠ, ಸಾವಿತ್ರಿ ಮಹೇಶ್ವರ ಹೊತ್ತಿಗಿಮಠ, ಜ್ಯೋತಿ ಸಿ.ಎಂ, ರಮೇಶ ಕೆ.ಎನ್, ವೀರನಗೌಡ ವಿ.ಸರನಾಡಗೌಡ್ರ, ದಾನಮ್ಮ ಅಂಗಡಿ, ಶಿವಾನಂದ ಬಸನಾಯ್ಕ ಪಟ್ಟಿಹಾಳ, ಶ್ರೀಶೈಲ್ ಹೆಬ್ಬಳ್ಳಿ, ನೇಹಾ ಶ್ರೀನಿವಾಸ ಬಡಿಗೇರ, ಶಿವಕುಮಾರ ಕೋಡಿಹಾಳ, ಪುಷ್ಪಾ ದುಂ. ಖನ್ನಿನಾಯ್ಕರ, ಆನಂದ ಹಕ್ಕೆನ್ನವರ, ಬಿ.ವಿ.ಪತ್ತಾರ, ಎ.ಎಸ್.ಗಡದವರ, ವೀರಪ್ಪ ಶೇಖಪ್ಪ ಜಂಗಣ್ಣವರ, ನೀರಜಾ ಗಣಾಚಾರಿ, ಸಂತೋಷ ಬಸವರಾಜ ಸಂಗೊಳ್ಳಿ, ಗೋದಾವರಿ ಎಸ್. ಪಾಟೀಲ, ರೂಪರಾಣಿ ಪಟಗಾರ, ಕಿರಣ ಯಲಿಗಾರ, ಶೈಲಜಾ ಎಂ. ಕೋರಿಶೆಟ್ಟರ, ಮಲ್ಲಿಕಾರ್ಜುನ ಬಿರಾದಾರ, ನವ್ಯಶ್ರೀ ಎನ್.ವಿ, ಕಲ್ಲಪ್ಪ ಬಾ. ಹರಿಜನ, ಸಂತೋಷ ಜಾದವ, ಆಶಾ ಎನ್.ಎಂ, ಕಲ್ಪನಾ ಎಸ್. ಪಾಟೀಲ, ಮೆಹಬೂಬ ಕೆ.ಎಂ, ಗೊಮೆಧಿಕಾ ಎ.ಎಂ, ಸಂಗೀತಾ ಸಕ್ರೆಣ್ಣವರ, ವಾಯ್.ಕೆ. ಕೊಣ್ಣೂರ, ಜಯಶ್ರೀ ವಾಲಿಶೆಟ್ಟರ, ಗಂಗಾದೇವಿ ಚಕ್ರಸಾಲಿ, ಎಸ್.ಎಚ್. ಪಾಟೀಲ, ಮಲ್ಲಿಕಾರ್ಜುನ ಕುರಿ, ದಾನಯ್ಯ ಹಿರೇಮಠ, ಗೌರಿ ವೈ. ಮೆಳೆದ, ಅಮರಗುಂಡಪ್ಪ ಹೂಗಾರ, ಬಸಪ್ಪ ಹೊಳೆಪ್ಪ ಶೀಗಿಹಳ್ಳಿ, ಚನ್ನಬಸಯ್ಯ ಕಟಾಪುರಿಮಠ, ಬಾಹುಬಲಿ ಉಪಾಧ್ಯೆ, ಶೃತಿ ನಾ. ಕುದರಿಮೋತಿ, ಜ್ಯೋತಿ ಎಂ. ಚಿನಗುಂಡಿ, ಶಂಕರಬಾಯಿ ಕ. ನಿಂಬಾಳಕರ, ಶಶಿರೇಖಾ ಬೆಳ್ಳಕ್ಕಿ, ಸವಿತಾ ಕ. ಕೋಟಗಿ, ರವಿ ದಂಡಗಿ, ಆನಂದ ಯಲ್ಲಪ್ಪ ಕೊಂಡಗುರಿ, ಬಸವರಾಜ ಫಕೀರಪ್ಪ ಕುರಿ, ಚನ್ನಬಸಯ್ಯ ಕೋಳಿವಾಡ, ಶಿವಾನಂದ ಉಳ್ಳಿಗೇರಿ ಕವಿ-ಕವಯತ್ರಿಯರು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ. ಪ್ರಕಾಶ ಮೆಳವಂಕಿ, ಮಂಜುಳಾ ಶೆಟ್ಟರ, ಕೋಶಾಧ್ಯಕ್ಷರಾದ ಮಹೇಶ ಕೋಟಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕವಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು, ಎಲ್ಲ ಕನ್ನಡ ಮನಸ್ಸುಗಳು ಕಾರ್ಯಕ್ರಮಕ್ಕೆ ಆಗಮಿಸುವಂತೆ ಪರಿಷತ್ತಿನ ಎಲ್ಲ ಕಾರ್ಯಕಾರಿ ಸದಸ್ಯರು ಕೋರಿದ್ದಾರೆ.