ಕಪ್ಪತಗುಡ್ಡದ ಶ್ರೀ ನಂದಿವೇರಿ ಮಠದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ದಿನಾಂಕ: 10-11-2024 ನವಂಬರ ತಿಂಗಳ ಎರಡನೆಯ ರವಿವಾರದಂದು ಜರುಗುವ ಕಾವ್ಯ-ಚಾರಣದಲ್ಲಿ ನೆಲ ಜಲ ಅರಣ್ಯ ಜೀವಿ ವೈವಿಧ್ಯ ಹಾಗೂ ಕನ್ನಡ ಭಾಷೆ ರಕ್ಷಣೆಗಾಗಿ ರಾಜ್ಯಮಟ್ಟದ ವಿಶೇಷ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ಕವಿಗಳು ಹಾಗೂ ಕವಯಿತ್ರಿಯರುಗಳು ಕಪ್ಪತಗುಡ್ಡದ ವಿಶೇಷತೆಗಳ ವೈಶಿಷ್ಟ್ಯ ಕುರಿತು ಅಧ್ಯಯನ, ಸಂಶೋಧನಾಧಾರಿತ ಸ್ವರಚಿತ ಕವಿತೆಗಳನ್ನು ಅಥವಾ ಜಾನಪದರ ಬಾಯಲ್ಲಿ ನಲಿದಾಡುವ ಕಪ್ಪತಗುಡ್ಡದ ಹಿರಿಮೆ-ಗರಿಮೆಯನ್ನು ಸಾರುವ ಜನಪದ ನುಡಿಗಟ್ಟುಗಳು, ಪದ್ಯಗಳು ಇತ್ಯಾದಿಗಳನ್ನು ವಾಚಿಸಬಹುದಾಗಿದೆ.
ಯಾವುದೇ ಅಧ್ಯಯನ ಅಥವಾ ಸಂಶೋಧನೆಯಲ್ಲಿ ತೊಡಗಿರದ ಆಸಕ್ತರು, ಕಪ್ಪತಗುಡ್ಡದ ಪರಿಸರ ಪ್ರೇಮಿಗಳು, ಸಾರ್ವಜನಿಕರು ಕೂಡ ಭಾಗವಹಿಸಬಹುದಾಗಿದೆ.
ಪ್ರತಿ ಕವಿತೆ 20 ಸಾಲುಗಳನ್ನು ಮೀರದಿರಲಿ.
ಕವನಗಳನ್ನು “ನುಡಿ” ಯಲ್ಲಿ ಟೈಪ್ ಮಾಡಿ ಸಾಫ್ಟ್ ಕಾಪಿಯನ್ನು ಈ-ಮೇಲ್ ಮೂಲಕ ಈ ಕೆಳಗಿನ ಈ-ಮೇಲ್ ಐಡಿಗೆ ದಿನಾಂಕ 20-9-2024 ರೊಳಗಾಗಿ ರವಾನಿಸುವುದು:
bhalchandr.jabshetti3@gmail.com
ಮುದ್ರಿತ ಪ್ರತಿಯನ್ನು ದಿನಾಂಕ: 30-9-2024 ರೊಳಗಾಗಿ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ತಲುಪಿಸುವುದು:
ಶ್ರೀ ಭಾಲಚಂದ್ರ ಜಾಬಶೆಟ್ಟಿ
# ದಾಕ್ಷಾಯಿಣಿ, ನಂ. 1158/53, ಆರ್.ಎಸ್.ನಂ 42,
ವೀರಭದ್ರೇಶ್ವರ ನಗರ ರಾಮದುರ್ಗ 591123 ಜಿಲ್ಲೆ: ಬೆಳಗಾವಿ ಈ ವಿಳಾಸಕ್ಕೆ ತಲುಪಿಸುವುದು.
ನಂತರ ಬಂದ ಕವಿತೆಗಳನ್ನು ಪರಿಗಣಿಸುವುದಿಲ್ಲ.
ಈ ಕೆಳಗೆ ಹಲವು ಉದಾಹರಣೆಗಳನ್ನು ನೀಡಲಾಗಿದೆ, ಅವುಗಳ ಆಶಯಕ್ಕೆ ಪೂರಕವಾದವುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
1. ಜಾನಪದರ ಪದಗಳಲ್ಲಿ ಕಪ್ಪತಗುಡ್ಡದ ಐಸಿರಿ
2. ಪರಿಸರದ ಮಧ್ಯದಲ್ಲಿ ಪದ್ಯಗಳ ರಸಾನುಭವ
ಸ್ವರಚಿತ ಕವನವಾದರೂ ಸರಿ, ಶತ-ಶತಮಾನಗಳಿಂದ, ತಲೆತಲಾಂತರಗಳಿಂದ ಜನಪದರ ಮುಖದಿಂದುದ್ಭವಿಸಿ ಗುನುಗುನಿಲ್ಪಡುತ್ತಿರುವ, ಕೇಳಲ್ಪಡುತ್ತಿರುವ ಕಪ್ಪತಗುಡ್ಡದ ವಿವರಣೆ ಸಂಬಂಧದ ನಾಣ್ನುಡಿ, ಒಳ್ನುಡಿ, ನುಡಿಗಟ್ಟು, ಕಥೆ ಕವನ ಆಧಾರಿತವಾಗಿದ್ದರೂ ಸರಿ ಅಥವಾ ಕಪ್ಪತಗುಡ್ಡವನ್ನು ಸಮುದಾಯದೊಂದಿಗೆ ಭಾವಬಂಧ ಬೆಸೆಯುವ ಪ್ರೇರಣಾತ್ಮಕವಾದ ಕವನಗಳಾದರೂ ಸರಿ, ಕಾನನದ ಮಡಿಲಿನಲ್ಲಿ ಜರುಗುವ ಕಾವ್ಯವಾಚನದಲ್ಲಿ ಭಾಗವಹಿಸಬಹುದು.
ಕವನ ಆಯ್ಕೆ ಸಮಿತಿಯಿಂದ ಆಯ್ಕೆಯಾಗುವ ಸೂಕ್ತ ಕವನಗಳ ವಾಚನಕ್ಕೆ ಮಾತ್ರ ಅವಕಾಶವಿದೆ.
ವಾಚಿಸಲ್ಪಟ್ಟ ಕವನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಗುರಿ ಹೊಂದಲಾಗಿದೆ.
ಕವನ ವಾಚನದಲ್ಲಿ ಭಾಗವಹಿಸುವ ಕವಿಗಳು ಬಂದು ಹೋಗುವ ಮತ್ತು ವಸತಿ ವ್ಯವಸ್ಥೆಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿಕೊಳ್ಳುವುದು
ಮೊದಲು ಪ್ರತಿಕ್ರಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಕವಿಗಳಿಗೆ ವೈಯಕ್ತಿಕವಾಗಿ ವ್ಯಾಟ್ಸಪ್ ಮೂಲಕ ಮಾಹಿತಿ ನೀಡಲಾಗುವುದು. ನಾಡಿನ ಹೆಸರಾಂತ ಮತ್ತು ಉದಯೋನ್ಮುಖ ಕವಿಗಳು ಭಾಗವಹಿಸಲು ಅವಕಾಶವಿದೆ.
ಸೆಪ್ಟೆಂಬರ್ 20 ರೊಳಗಾಗಿ ಈ-ಮೇಲ್ ಮೂಲಕ ಹಾಗೂ ಸೆಪ್ಟೆಂಬರ 30 ರೊಳಗಾಗಿ ಮುದ್ರಿತ ಪ್ರತಿಯನ್ನು ರವಾನಿಸಿ ನಿಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಿ.
ಹೆಚ್ಚಿನ ವಿವರಗಳಿಗೆ
ಶ್ರೀ ಭಾಲಚಂದ್ರ ಜಾಬಶೆಟ್ಟಿಯವರನ್ನು ಮೋಬೈಲ್ ಸಂಖ್ಯೆ: 9741888365 ಗೆ ಸಂಪರ್ಕಿಸಬಹುದಾಗಿದೆ.