spot_img
spot_img

ಸುರಕ್ಷತೆಗಾಗಿ ವಾಹನ ದಾಖಲಾತಿಗಾಗಿ ಸರಿಯಾಗಿ ಇಡಿ – ಸುನಿಲಕುಮಾರ

Must Read

ಸಿಂದಗಿ: ನಿಮ್ಮ ವಾಹನದಲ್ಲಿ ಇರಬೇಕಾದ ದಾಖಲಾತಿಗಳ ಮಾಹಿತಿ ನೀವು ಅರಿತಿರಬೇಕು . ನೀವು ವಾಹನ ಚಾಲನೆ ಮಾಡಬೇಕಾದರೆ ಚಾಲನಾ ಪರವಾನಗಿ ಕಡ್ಡಾಯವಾಗಿ ಹೊಂದಿರಲೇಬೇಕು ಅದು ನಿಮ್ಮ ಸುರಕ್ಷತೆಗಾಗಿ ನಿಮ್ಮ ಕುಟುಂಬದ ಸುರಕ್ಷತೆಗಾಗಿ ಇದರ ಜೊತೆಗೆ ವಾಹನದ ವಿಮೆ ಕೂಡಾ ಕಡ್ಡಾಯವಾಗಿ ಇರಲೇಬೇಕು ಎಂದು ರಾಮು ಡ್ರೈವಿಂಗ್ ತರಬೇತಿ ಸಂಸ್ಥೆಯ ಸಂಸ್ಥಾಪಕ ಸುನೀಲಕುಮಾರ ಆಸಂಗಿ ಹೇಳಿದರು.

ಪಟ್ಟಣದ ಸಂಗಮ ಸಂಸ್ಥೆಯಲ್ಲಿ ಕಟ್ಟಡ ಕಾರ್ಮಿಕರಿಗೆ ವಾಹನ ಚಾಲನಾ ಪರವಾನಿಗೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿಮೆ ಮಾಡಿಸುವುದರಿಂದ ಅಪಘಾತವಾದರೆ ನಿಮಗೆ ಪರಿಹಾರ ಸಿಗುತ್ತದೆ ಇಲ್ಲವಾದಲ್ಲಿ ಯಾವುದೆ ಸಂದರ್ಭದಲ್ಲಿ ನಿಮಗೆ ಪರಿಹಾರದ ಮೊತ್ತ ಬರುವುದಿಲ್ಲ ಲೈಸನ್ಸ್ ಇದ್ದು ವಿಮೆ ಇಲ್ಲದಿದ್ದರೆ ಅಥವಾ ವಿಮೆ ಇದ್ದು ಲೈಸನ್ಸ್ ಇಲ್ಲದಿದ್ದರೆ ನಿಮಗೆ ಯಾವುದೆ ತರಹದ ಪರಿಹಾರ ಸಿಗುವುದಿಲ್ಲ ಆದ್ದರಿಂದ ನೀವು ಕಡ್ಡಾಯವಾಗಿ ವಿಮೆ ಹಾಗೂ ಲೈಸನ್ಸ್ ಮಾಡಿಸಿಕೊಳ್ಳಬೇಕು.

ವಾಹನ ಚಾಲನಾ ಪರವಾನಿಗೆ ಮಾಡಿಸಿಕೊಳ್ಳಲು ಯಾವುದೆ ಶಾಲಾ ದಾಖಲಾತಿ ಬೇಕಾಗಿರುವುದಿಲ್ಲ ಕೇವಲ ಆಧಾರ್ ಕಾರ್ಡ ಹೊಂದಿದ್ದರೆ ಸಾಕು ನಿಮಗೆ ಲೈಸನ್ಸ್ ಮಾಡಿಸಿ ಕೊಡುತ್ತೇವೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಕರೆ ನೀಡಿದರು. 

ಅಧ್ಯಕ್ಷತೆ ವಹಿಸಿದ್ದ ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಆಲ್ವಿನ್ ಡಿಸೋಜಾ ಮಾತನಾಡಿ, ಪ್ರತಿಯೊಬ್ಬರು ವಾಹನ ಚಾಲನಾ ಪರವಾನಿಗೆಯನ್ನು ಮಾಡಿಸಿಕೊಳ್ಳಿ. ಪೋಲಿಸರಿಂದ ತಪ್ಪಿಸಿಕೊಳ್ಳಲು ನಾವು ಶಾರ್ಟ್‍ ಕಟ್ ದಾರಿಯನ್ನು ಹುಡುಕುತ್ತೆವೆ.

ಈ ರೀತಿ ಅಡ್ಡ ಮಾರ್ಗಹಿಡಿದು ನಾವು ಅಪಘಾತ ಮಾಡಿಕೊಂಡು ನಮ್ಮ ಜೀವನವೆ ಶಾರ್ಟ್‍ ಕಟ್ ಆಗಿ ಹೊಗುತ್ತೇವೆ .ಹಿಗಾಗಿ ಸುರಕ್ಷತೆಯ ಬಗ್ಗೆ ನಮಗೆ ಯಾವತ್ತು ಕಾಳಜಿ ಇರಬೇಕು.

ಸುರಕ್ಷತೆಯ ನಿಯಮಗಳು ಪಾಲಿಸಿ ನಿಮಗೋಸ್ಕರ ಹಾಗೂ ನಿಮ್ಮ ಕುಟುಂಬದವರಿಗೊಸ್ಕರ ನೀವು ಲೈಸನ್ಸ್ ಮಾಡಿಸಿಕೊಳ್ಳಿ ಹಾಗೂ ಕಡ್ಡಾಯವಾಗಿ ಹೆಲ್ಮೆಟ್ಟನ್ನು ಧರಿಸಿ ಜೀವ ಉಳಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊ ಮಾತನಾಡಿ, ಪ್ರತಿಯೊಬ್ಬರು ಕಟ್ಟಡ ಕಾರ್ಮಿಕರು ಇದರ ಸದುಪಯೊಗ ಪಡೆದುಕೊಳ್ಳಿ ಮತ್ತು ನೀವು ವಾಹನ  ಚಲಾಯಿಸುವಾಗ ನಿಮ್ಮ ಕುಟುಂಬದವರ ನೆನಪಿರಲಿ ಹಾಗೂ ಕುಡಿದ ಮತ್ತಿನಲ್ಲಿ ಯಾವತ್ತು ವಾಹನ ಚಲಾಯಿಸಬೇಡಿ ಯಾಕೆಂದರೆ ಇತ್ತೀಚೆಗೆ ಅಪಘಾತಗಳು ಹೆಚ್ಚಾಗುತ್ತಿವೆ ಕಾರಣ ಕುಡಿತ ಹಾಗೂ ಮುಂದೆ ಹೋಗುವ ವಾಹನ ಹಿಂದಿಕ್ಕಿ ಹೋಗಬೇಕು ಎನ್ನುವ ಅವಸರದಿಂದ ಅಪಘಾತ ಹೆಚ್ಚಾಗುತ್ತದೆ ಅದ್ದರಿಂದ ನೀವೆಲ್ಲರು ರಸ್ಥೆ ಸುರಕ್ಷತೆಯನ್ನು ಪಾಲಿಸಿ ಎಂದರು.

ಈ ಸಂದರ್ಭದಲ್ಲಿ ಸಂಗಮ ಸಂಸ್ಥೆಯ ಕಾರ್ಯಕರ್ತ ರಾಜೀವ ಕುರಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯ ಬಂಟನೂರ ನಿರೂಪಿಸಿದರು, ಶ್ರೀಧರ್ ಕಡಕೊಳ ಸ್ವಾಗತಿಸಿದರು. ಕುಮಾರಿ ಬಸಮ್ಮ ಸಂವಿಧಾನದ ಪ್ರಸ್ಥಾವನೆಯನ್ನು ಓದಿದರು. ತೇಜಸ್ವಿನಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!