ಬೀದರ:ಅಂಗಡಿ ಹತ್ತಿರ ಕುಳಿತು ಗಾಂಜಾ ಸೇವನೆ ಮಾಡಬೇಡಿ ಎಂದು ಬುದ್ದಿ ಹೇಳಿದ ಅಂಗಡಿ ಮಾಲೀಕ ಬೆಳಿಗ್ಗೆ ಬಂದು ನೋಡಿದರೆ ಅಂಗಡಿಯೇ ಸುಟ್ಟು ಹೋಗಿದೆ !
ಈ ಘಟನೆ ನಡೆದಿದ್ದು ಚಿಟಗುಪ್ಪಾ ಪಟ್ಟಣದಲ್ಲಿ.
ಘಟನೆಯ ವಿವರ:
ದರ್ಗಾದ ಪಕ್ಕದಲ್ಲಿ ಕುಳಿತು ಗಾಂಜಾ ಸೇದಬಾರದು ಎಂದು ಬುದ್ದಿ ವಾದ ಹೇಳಿದ ಹಣ್ಣಿನ ವ್ಯಾಪಾರಿಯ ಅಂಗಡಿಗೇ ಬೆಂಕಿಇಟ್ಟು ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಯನ್ನು ಕಿಡಿಗೇಡಿಗಳು ಹಾಳು ಮಾಡಿದ್ದಾರೆ.
ಬೀದರ ಜಿಲ್ಲೆಯ ಚಿಟಗುಪ್ಪಾ ಪಟ್ಟಣದ ಹಳೆ ಬಸ್ ನಿಲ್ದಾಣ ಹತ್ತಿರ ಹಣ್ಣಿನ ಅಂಗಡಿ ಇಟ್ಟು ವ್ಯಾಪಾರ ಮಾಡುತಿರುವ ಮಹಮ್ಮದ್ ರಫಿಕ್ ಅಹಮ್ಮದ್ ತಂದೆ ಬಸಿರ್ ಅಹಮದ್ ಅವರು ಕಳೆದ ರಾತ್ರಿ ಅಂಗಡಿ ಪಕ್ಕದ ದರ್ಗಾದ ಕಟ್ಟೆ ಮೇಲೆ ಕುಳಿತು ಯುವಕರು ಗಾಂಜಾ ಸೇವನೆ ಮಾಡುತಿರುವದನ್ನು ಕಂಡು ಧಾರ್ಮಿಕ ಸ್ಥಳವಾದ ಪವಿತ್ರ ದರ್ಗಾದ ದಲ್ಲಿ ಗಾಂಜಾ ಸೇವನೆ ಮಾಡುವದು ತಪ್ಪು ಎಂದು ಹೇಳಿದಕ್ಕೆ ರೊಚ್ಚಿಗೆದ್ದ ಯುವಕರು ನನ್ನ ಅಂಗಡಿಗೆ ಬೆಂಕಿ ಹಚ್ಚಿ ದ್ವಿ ಚಕ್ರ ವಾಹನ ಸೇರಿದಂತೆ ಸುಮಾರು ಮೂರು ಲಕ್ಷ ಐವತ್ತು ಸಾವಿರ ರೂಪಾಯಿ ಮೌಲ್ಯ ವಸ್ತುಗಳನ್ನು ಬೆಂಕಿಗೆ ಆಹುತಿಮಾಡಿದ್ದಾರೆ ಎಂದು ಕಣ್ಣೀರಿಡುತ್ತ ಅಂಗಡಿ ಮಾಲಿಕ ದೂರು ನೀಡಿದ್ದು ಮಾಧ್ಯಮದವರ ಮುಂದೆಯೂ ತಮ್ಮ ಅಳಲು ತೋಡಿಕೊಂಡರು.
ಚಿಟ್ಟಗುಪ್ಪಾ ಪೋಲಿಸ್ ಅಧಿಕಾರಿಗಳು ಈ ಘಟನೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ವಶಪಡಿಸಿಕೊಂಡಿದ್ದಾಗಿ ತಿಳಿದು ಬಂದಿದೆ.
ವರದಿ: ನಂದಕುಮಾರ ಕರಂಜೆ, ಬೀದರ