spot_img
spot_img

ಬಿಜೆಪಿ ವಿರುದ್ಧ ಗರಂ ಆದ ಖರ್ಗೆ

Must Read

- Advertisement -

ಬೀದರ – ಬಿಜೆಪಿ ಸರ್ಕಾರದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ ಗುತ್ತಿಗೆದಾರರ ಬಳಿ ೪೦% ಕಮಿಷನ್, ಸ್ವಾಮಿಗಳಿಗೆ ೩೦% ಕಮಿಷನ್ ಹೊಡೆಯೋರು ಇವರೆ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ಬೀದರನ ಭಾಲ್ಕಿಯಲ್ಲಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಬಿಜೆಪಿ ನಾಯಕರು ಹಾಗೂ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

- Advertisement -

ಸಿಎಂ ಆಗಬೇಕು ಅಂದ್ರೆ ೨೫೦೦ ಕೋಟಿ ರೂ. ಕೊಡಬೇಕಂತೆ ಎಂದು ಅವರದೇ ಪಕ್ಷದ ಮಂತ್ರಿ ಹೇಳುತ್ತಿದ್ದಾರೆ. ಕೋವಿಡ್ ಸಾವಿನ ಲೆಕ್ಕ ಕೊಡುವುದರಲ್ಲಿಯೂ ಕೇಂದ್ರ ಸರ್ಕಾರ ಎಡವಿದೆ. ಸಾವಿನ ಸಂಖ್ಯೆಯಲ್ಲಿ ಸರ್ಕಾರ ತಪ್ಪು ಲೆಕ್ಕ ಕೊಟ್ಟಿದೆ ೪ ಲಕ್ಷ ೭೫ ಸಾವಿರ ಜನ ಮಾತ್ರ ಸಾವನಪ್ಪಿದ್ದಾರೆಂದು ಸರ್ಕಾರ ಲೆಕ್ಕ ಕೊಟ್ಟಿದೆ. ನಾನು ಅಂದೇ ೫0 ಲಕ್ಷ ಜನ ಕೊವಿಡ್ ನಿಂದ ಮೃತಪಟ್ಟಿದ್ದಾರೆಂದು ರಾಜ್ಯಸಭೆಯಲ್ಲಿ ಹೇಳಿದ್ದೆ ನನ್ನ ಹೇಳಿಕೆಗೆ ಅಂದು ಬಿಜೆಪಿ ನಾಯಕರು ವ್ಯಂಗ್ಯ ಮಾಡಿದ್ದರು. ಆದರೆ ಭಾರತದಲ್ಲಿ 47 ಲಕ್ಷ ಜನ ಸಾವನಪ್ಪಿದ್ದಾರೆಂದು ಇಂದು ಸ್ವತ ಡಬ್ಲ್ಯೂಎಚ್ಒ ಹೇಳುತ್ತಿದೆ ದೇಶದ ಜನರಿಗೆ ಸುಳ್ಳು ಹೇಳಿ, ಮೋಸ ಮಾಡಿ ಮತವನ್ನು ಗಳಿಸಿ ಇವರು ಅಧಿಕಾರಕ್ಕೆ ಬಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಇದೇ ರೀತಿಯಾಗಿ ದೇಶದಲ್ಲಿ ವಾತಾವರಣವಿದ್ದರೆ ದೇಶದ ಸಂವಿಧಾನ ಅಪಾಯದಲ್ಲಿ ಇರುವುದು ನಾವು ಎಲ್ಲರೂ ಎಚ್ಚರಿಕೆ ವಹಿಸಬೇಕಾಗುತ್ತದೆ. ಬಿಜೆಪಿಯವರು ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸುವುದಿಲ್ಲ. ಇನ್ನೂ ನೀವು ಎದ್ದೇಳದೆ ಹೋದರೆ ಅದು ನಿಮ್ಮ ತಪ್ಪು ಎಂದು ಖರ್ಗೆ ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಸೌರ ವಿದ್ಯುತ್ ಉತ್ಪಾದನೆ ಮಾಹಿತಿ ಕಾರ್ಯಾಗಾರ

ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಶಕ್ತಿನಗರದ ಅಭಿಯಂತರುಗಳಿಗೆ ಹಾಗೂ, ರಾಯಚೂರು ಜಿಲ್ಲೆಯ ವಿವಿಧ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ "ಸುಸ್ಥಿರ ಹಸಿರು ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಶಕ್ತಿ ಬಳಕೆ"...
- Advertisement -

More Articles Like This

- Advertisement -
close
error: Content is protected !!
Join WhatsApp Group