ಬೀದರ: ರಾಜ್ಯ ವಿಧಾನ ಸಭಾ ಚುನಾವಣೆಯ ಪ್ರಚಾರ ಕಾರ್ಯ ಚುರುಕುಗೊಂಡಿದ್ದು ಪ್ರಧಾನಿ ನರೇಂದ್ರ ಮೋದಿಯವರ ಬೀದರ ಭೇಟಿಯ ಬೆನ್ನಲ್ಲೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೀದರ್ ಭೇಟಿ ನಿಗದಿಯಾಗಿದೆ.
ಬಸವನಾಡು ಬೀದರ್ ನ ಮೂರು ಕ್ಷೇತ್ರಗಳಿಗೆ ಖರ್ಗೆ ಭೇಟಿ ನೀಡಲಿದ್ದು ಮೂರೂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳು ಹದಿನೈದು ವರ್ಷಗಳ ಆಳಿದ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ ವಿಶೇಷತೆ ಏನೆಂದರೆ ಈ ಸಲ ಎದುರಾಳಿ ತಂಡಕ್ಕೆ ಮೂವರು ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿನ ಭಯ ಹುಟ್ಟಿದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸಮಾವೇಶ ನಡೆಸಲು ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಜಿಲ್ಲೆಯ ಔರಾದ, ಬಸವಕಲ್ಯಾಣ, ಬೀದರ್ ದಕ್ಷಿಣ ಕ್ಷೇತ್ರ ಮರೆತು ಬಿಟ್ಟು ಉಳಿದ ಕ್ಷೇತ್ರದ ಕಡೆ ಖರ್ಗೆ ಪ್ರಚಾರ ಸಮಾವೇಶ ನಿಗದಿ ಮಾಡಲಾಗಿದೆ.ಆದರೆ ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಭಾಲ್ಕಿಯ ರಾಜಶೇಖರ ಪಾಟೀಲ ಹುಮನಾಬಾದ ಬೀದರ್ ಉತ್ತರ ರಹಿಮ್ ಖಾನ್ ಈ ಮೂರು ಕಡೆ ಮಲ್ಲಿಕಾರ್ಜುನ ಖರ್ಗೆಯವರ ಸಮಾವೇಶ ನಡೆಸಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.
ಮೇ.2 ರಂದು ಬೀದರ್ ಜಿಲ್ಲೆಗೆ ಮಲ್ಲಿಕಾರ್ಜುನ ಖರ್ಗೆ ದಿನಾಂಕ ನಿಗದಿ ಬೆಳಿಗ್ಗೆ 11:10, ಬೀದರ್ ಉತ್ತರ ಕ್ಷೇತ್ರದ ರಹಿಮ್ ಖಾನ್ ಪರವಾಗಿ ಸಮಾವೇಶ ನಡೆಸಿ, ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತವರೂರು ಭಾಲ್ಕಿ ಸಮಾವೇಶ ನಡೆಯಲಿದೆ.
ಇದು ಅಣ್ಣ ತಮ್ಮರ ಜಿದ್ದಾಜಿದ್ದಿ ಕ್ಷೇತ್ರ ಖಂಡ್ರೆ ವರ್ಸಸ್ ಖಂಡ್ರೆ ಕಣದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಬಲ ಪೈಪೋಟಿ ನೀಡುತ್ತಿದ್ದಾರೆಂದು ತಿಳಿದು ಬಂದಿದೆ. ಹುಮನಾಬಾದಲ್ಲಿ ಪಾಟೀಲ ವರ್ಸಸ್ ಪಾಟೀಲ ಕುಟುಂಬ ಇಡೀ ರಾಜ್ಯಾದ್ಯಂತ ಚರ್ಚೆ ಗ್ರಾಸವಾಗಿದ್ದು, ರಾಜಶೇಖರ ಪಾಟೀಲ ಕಾಂಗ್ರೆಸ್ ಅಭ್ಯರ್ಥಿ ಹಾಗು ಬಿಜೆಪಿ ಅಭ್ಯರ್ಥಿ ಸಿದ್ದು ಪಾಟೀಲ ಇಬ್ಬರು ಅಣ್ಣ ತಮ್ಮ ನಡುವೆ ಹಾವು ಏಣಿ ಆಟದ ಹಾಗೆ ಜಿದ್ದಾಜಿದ್ದಿ ಕ್ಷೇತ್ರ ಆಗಿದೆ.
ಹುಮನಾಬಾದ ನಲ್ಲಿ ಮೊನ್ನೆ ನರೇಂದ್ರ ಮೋದಿಯವರು ಸಮಾವೇಶ ನಡೆಸಿದರು ರಾಜಶೇಖರ ಪಾಟೀಲಗೆ ಈ ಸಲ ಕಹಿ ನೀಡಲು ಬಿಜೆಪಿ ಪಕ್ಷದ ನಾಯಕರು ನರೇಂದ್ರ ಮೋದಿ ಸಮಾವೇಶ ನಡೆಸಿದರು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದವರು ನರೇಂದ್ರ ಮೋದಿಯವರಿಗೆ ಟಕ್ಕರ ಕೊಡಲು ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಮಾವೇಶ ಹಮ್ಮಿಕೊಂಡಿದ್ದಾರೆಂಬುದಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ.
ಮತದಾರರ ಪ್ರಭು ಯಾರಿಗೆ ಸಿಹಿ ಅಥವಾ ಯಾರಿಗೆ ಕಹಿ ನೀಡುತ್ತಾರೆ ಎಂಬುದನ್ನು ಮೇ ೧೩ರವರೆಗೆ ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ