ಮೂಡಲಗಿ:-ತಾಲೂಕಿನ ಶಿವಾಪೂರ(ಹ) ಗ್ರಾಮದ ಪ್ರೌಢ ಶಾಲೆಯಲ್ಲಿ ಮೂಡಲಗಿ ತಾಲೂಕಾ ಮಟ್ಟದ ಖೋ ಖೋ ಪಂದ್ಯಾವಳಿಗಳು ನಡೆದವು.
ಈ ಕ್ರೀಡಾಕೂಟದಲ್ಲಿ ಬಾಲಕಿಯರ ಖೋ ಖೋ ತಂಡ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಬಾಲಕರ ವಿಭಾಗದಲ್ಲಿ ಕೌಜಲಗಿ ಶಾಲೆಯ ವಿದ್ಯಾರ್ಥಿಗಳು ವಿಜೇತ ರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಮುಂಚೆ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಮೂಡಲಗಿಯ ಮಂಜುನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ನ್ಯಾಯವಾದಿ ಎಲ್. ವಾಯ್. ಅಡಿಹುಡಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಆಟ ಪಾಠಗಳಲ್ಲಿ ಪಾಲ್ಗೊಂಡು ತಮ್ಮ ಜೀವನ ರೂಪಿಸಿ ಕೊಳ್ಳ ಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜಿತ ಮನ್ನಿಕೇರಿ, ಅತಿಥಿಗಳಾಗಿ ಜೆ ಜೆ ಆಸ್ಪತ್ರೆ ನಿರ್ದೇಶಕರಾದ ಎಸ್.ಎಸ್. ಪಾಟೀಲ, ಎಸ್ ಡಿ ಎಂ ಸಿ ಅಧ್ಯಕ್ಷ ಎಸ್. ಬಿ. ರಡ್ಡೇರಟ್ಟಿ, ಮುಖ್ಯೋಪಾಧ್ಯಾಯ ಜೆ. ಜೆ. ಭಷ್ಮೆ , ಎಸ್.ವಾಯ್. ಜುಂಜರವಾಡ,ಕೆ.ಬಿ. ಮುಧೋಳ, ಕೆ. ಜಿ. ಮುಧೋಳ, ಎಸ್.ಡಿ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಮನವ್ವ ಗಿಡ್ಡವ್ವಗೋಳ ಹಾಗೂ ಎಲ್ಲ ಎಸ್ ಡಿ ಎಂ ಸಿ ಸದಸ್ಯರು, ಶಾಲಾ ಶಿಕ್ಷಕರು ಸಿಬ್ಬಂದಿ ವರ್ಗದವರು, ಕ್ರೀಡಾಭಿಮಾನಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಕ್ರೀಡಾಪಟುಗಳು ಉಪಸ್ಥಿತರಿದ್ದರು. ಸ್ವಾಗತ ಭಾಷಣವನ್ನು ಎಸ್. ಸಿ. ಆರಗಿ, ವಂದನಾರ್ಪಣೆ ಸಂತೋಷ ಪಾಟೀಲ, ನಿರೂಪಣೆ ಎಚ್.ಬಿ ಸುಳ್ಳನವರ,ಪ್ರತಿಜ್ಞೆ ವಿಧಿ ಬೋಧನೆಯನ್ನು ಕೆ. ಎಚ್. ಪಾಟೀಲ ಮಾಡಿದರು.