spot_img
spot_img

ಮೂಡಲಗಿ ಪುರಸಭೆಗೆ ಖುರಷಾದ ನದಾಫ ಅಧ್ಯಕ್ಷೆ, ಭೀಮವ್ವ ಪೂಜೇರಿ ಉಪಾಧ್ಯಕ್ಷೆ

Must Read

         ಮೂಡಲಗಿ: ಆ,28 ರಂದು ಪಟ್ಟಣದ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ನಡೆದಿದ್ದು “ಸಾಮಾನ್ಯ ವರ್ಗದ” ಮಹಿಳಾ ಅಧ್ಯಕ್ಷರಾಗಿ ಶ್ರೀಮತಿ ಖುರಶಾದ ಬೇಗಂ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಭೀಮವ್ವ ದುರ್ಗಪ್ಪ ಪೂಜೇರಿ ಆಯ್ಕೆಯಾಗಿದ್ದಾರೆ.
    ಅಧ್ಯಕ್ಷ ಸ್ಥಾನಕ್ಕೆ  ಎರಡು ನಾಮಪತ್ರ ಸಲ್ಲಿಕೆ ಆಗಿದ್ದವು. ಇಬ್ಬರಲ್ಲಿ ಶ್ರೀಮತಿ ಖುರಶಾದಬೇಗಂ ಅನ್ವರ ನದಾಫ ಅವರಿಗೆ ೧೬ ಮತಗಳು ಬಿದ್ದರೆ ಇನ್ನೊಬ್ಬ ಆಕಾಂಕ್ಷಿ ಸತ್ಯವ್ವಾ ಅರಮನಿಯವರಿಗೆ ೨ ಮತಗಳು ಬಿದ್ದವು ಹೀಗಾಗಿ ಖುರಶಾದ ಬೇಗಂ ಅವರಿಗೆ ಅಧ್ಯಕ್ಷ ಪಟ್ಟ ಒಲಿದಂತಾಯಿತು.
       ‘ಎಸ್ಸಿ’ ಮಹಿಳಾ  ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆ ಇಲ್ಲದ ಕಾರಣ ಶ್ರೀಮತಿ ಭೀಮವ್ವ ದುರ್ಗಪ್ಪ.ಪೂಜೇರಿ ಅವಿರೋಧವಾಗಿ ಆಯ್ಕೆಯಾದರು ಎಂದು ತಹಶೀಲ್ದಾರ ಮಹಾದೇವ ಸನಮುರಿಯವರು ಪ್ರಕಟಣೆ ಹೊರಡಿಸಿದರು, ನಂತರ ಅಭಿನಂದಿಸಿ ಶುಭ ಕೋರಿದರು.
  ಹೊಸದಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಸನ್ಮಾನಿಸಲಾಯಿತು. ಅರಭಾವಿ ಮತಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕರಾದ ದಾಸಪ್ಪ ನಾಯಿಕ, ಸಿ.ಪಿ.ಯಕ್ಸಂಬಿ ಹಾಗೂ ಪುರಸಭೆಯ ಸದಸ್ಯರು ಉಪಸ್ಥಿತರಿದ್ದರು.
- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮನ ಸೆಳೆದ ಶಾಂತಲಾ ಆರ್ಟ್ ಗ್ರೂಪ್ ಶೋ

ಕಲಾವಿದನು ಮೂಲತಃ ಸೌಂದರ್ಯ ಆರಾಧಕ ಹಾಗೂ ಸೌಂದರ್ಯವನ್ನು ಪ್ರೀತಿಸುವವನು. ಪ್ರಕೃತಿ ಸೌಂದರ್ಯಮಯ ಕಲೆ ಆನಂದಮಯ ಅನ್ನುವಂತೆ ಕಲಾವಿದನು ದೃಶ್ಯಗಳ ನಕಲನ್ನು ಮಾಡಲಾರ ಹಾಗೂ ತನ್ನೊಳಗಿನ ವಿಚಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group