ಕಿಲ್ಲಾರಿ ಭೂಕಂಪದ ಕರಾಳ ರಾತ್ರಿಯ ಕಥೆ ಮುಂದುವರೆದದ್ದು…

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಲಯನ್ಸ್ ಕ್ಲಬ್ ತಂಡದ ಜೊತೆಗೆ ಸಾಹಿತಿ ಶ್ರೀ ಸಿದ್ಧರಾಜ ಪೂಜಾರಿ ಅವರೂ ಇದ್ದರು. ಅವರು ತಮ್ಮ ಟ್ರ್ಯಾಕ್ಸನಲ್ಲಿ ಬಂದಿದ್ದರು.

ಅಕ್ಟೋಬರ್ ನಾಲ್ಕರಂದು ಲಾತೂರ್ ಮತ್ತು ಉಸ್ಮಾನಾಬಾದ್ ಎರಡೂ ಜಿಲ್ಲೆಯ ಸುಮಾರು 56 ಹಳ್ಳಿಗಳಲ್ಲಿ ಭೀಭತ್ಸ ದೃಶ್ಯವಿತ್ತು. ಆಗ ಹೈದರಾಬಾದ್ ನಿಂದ ಸೇನಾಪಡೆಯ 48 ಟ್ರಕ್ ಗಳಲ್ಲಿ ಸೇರಿ ಸುಮಾರು ಒಂದು ಸಾವಿರ ಜನ ಸೈನಿಕರು ಬಂದಿದ್ದರು. ಅವರು ಬಂದ ಮೇಲೆಯೇ ಎಲ್ಲಾ ಕೆಲಸಗಳು ಚುರುಕಿನಿಂದ ಮತ್ತು ಶಿಸ್ತು ಬದ್ಧವಾಗಿ ಜರುಗತೊಡಗಿದವು. ನನಗೆ ಉಸ್ಮಾನಾಬಾದನ ಇಸ್ಮಾಯಿಲ್ ಶೇಖ ಎಂಬ ಫೋಟೋಗ್ರಾಫರ್ ನ ಪರಿಚಯವಾಯಿತು. ಅವನೊಂದಿಗೆ ನಾನು ಅಲ್ಲಿಯ ಭೀಕರ ಘಟನಾವಳಿಗಳಿಗೆ ಸಾಕ್ಷಿಯಾದೆ.

ಏಕೊಂಡಿ ಗ್ರಾಮದಲ್ಲಿ ಬಹುತೇಕ ಮನೆಗಳು ಕುಸಿದಿದ್ದವು. ಕಲ್ಲು ಮಣ್ಣಿನ ಕೆಳಗೆ ಜನ ಸಿಲುಕಿದ್ದರು. ಮಿಲಿಟರಿ ಯೋಧರು ಸಮರೋಪಾದಿಯಲ್ಲಿ ಸತ್ತವರ ಶವಗಳನ್ನು ಅಂತ್ಯ ಸಂಸ್ಕಾರಕ್ಕಾಗಿ ಮೇಲೆ ತೆಗೆಯುತ್ತಿದ್ದರು. ಅಂಥದರಲ್ಲಿಯೇ ‘ಬರಗಾಲದಲ್ಲಿ ಅಧಿಕ ತಿಂಗಳು ‘ ಎಂಬಂತೆ ಆಕಾಶ ಹರಿದು ಹೋದಂತೆ ರಭಸದಿಂದ ಬೀಳುವ ಮಳೆ. ಹೆಣಗಳನ್ನು ಸುಡಲು ಕಟ್ಟಿಗೆಯ ಕೊರತೆ ಇತ್ತು. ಮೇಲೆ ಮಳೆಯೂ ಸುರಿಯುತಿತ್ತು. ಶ್ವಾನ ದಳವನ್ನು ಅಲ್ಲಿ ತರಿಸಲಾಗಿತ್ತು.

- Advertisement -

ಒಂದು ನಾಯಿ ಏಕೊಂಡಿ ಗ್ರಾಮದಲ್ಲಿ ನೆಲಸಮವಾದ ಒಂದು ಮನೆಯ ಅವಶೇಷಗಳ ಹತ್ತಿರ ನೆಲವನ್ನು ಅಗೆದಂತೆ ಮಾಡತೊಡಗಿದಾಗ , ತಕ್ಷಣ ಸೈನಿಕರು ಅಲ್ಲಿಯ ಎಲ್ಲಾ ಭಾಗವನ್ನು ಮೆತ್ತಗೆ ಅಲ್ಲಿಯ ಕುಸಿದು ಬಿದ್ದಿದ್ದ ಕಲ್ಲು ಮಣ್ಣು ಬದಿಗೆ ಸರಿಸತೊಡಗಿದರು. ಅಲ್ಲಿ ಏಳು ಜನರ ಹೆಣಗಳು ಸಿಕ್ಕವು. ರಕ್ತವೆಲ್ಲ ಹೆಪ್ಪುಗಟ್ಟಿದಂತಾಗಿ , ಅವೆಲ್ಲ ಕಾಣಲು ಭೀಕರವಾಗಿದ್ದವು. ಅದೇ ಸಮಯದಲ್ಲಿ ಪಲ್ಲಂಗದ ಕೆಳಗಡೆ ಅಂದಾಜು ಎರಡು ವರ್ಷದ ಒಂದು ಹೆಣ್ಣು ಮಗು ಅಲ್ಲಿ ಸೈನಿಕರಿಗೆ ಕಾಣಿಸಿತು. ಅದರ ಮುಖದ ಮೇಲೆ ಸ್ವಲ್ಪ ಮಣ್ಣು ಬಿದ್ದಿದ್ದು ಬಿಟ್ಟರೆ ಅದಕ್ಕೆ ಯಾವುದೇ ಗಾಯವಾಗಲಿ ಆಗಿರಲಿಲ್ಲ. ಐದು ದಿನಗಳ ನಂತರ ಕೂಡ ಅದು ಬದುಕಿತ್ತು. ಓರ್ವ ಸೈನಿಕ ಅದನ್ನು ತನ್ನ ಕೈಗಳಲ್ಲಿ ಎತ್ತಿಕೊಂಡಾಗ ಅದು ಕ್ಷೀಣ ಧ್ವನಿಯಲ್ಲಿ ‘ ಮಾಮಾ ‘ ಎಂದು ಕರೆಯಿತಂತೆ ! ನಂತರ ಅದನ್ನು ಉಸ್ಮಾನಾಬಾದಕ್ಕೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕಳಿಸಲಾಯಿತು. ಆ ಹೆಣ್ಣು ಮಗುವಿನ ಹೆಸರು ಪ್ರಿಯಾ ಎಂದೂ , ಅದರ ಅಜ್ಜನನ್ನು ಹೊರತುಪಡಿಸಿ ಉಳಿದ ಎಲ್ಲರೂ ಅಂದರೆ ತಂದೆ ತಾಯಿ , ಕಾಕಾ ಕಾಕಿ ,ಅಜ್ಜಿ ಹೀಗೆ ಯಾರೂ ಉಳಿದಿರಲಿಲ್ಲ. ನಾಗಪುರದಿಂದ ಡಾಕ್ಟರ್ ಜಯಶ್ರೀ ಚೌಗುಲೆ ಎಂಬ ಹೆಣ್ಣು ಮಗಳು ಅಲ್ಲಿನ ಜನರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ವಿಮಾನದ ಮೂಲಕ ಹೈದರಾಬಾದಗೆ ಬಂದು , ಅಲ್ಲಿಂದ ಅವರು ಕಿಲ್ಲಾರಿ ಭಾಗದಲ್ಲಿ ಬಂದಿದ್ದರು. ಅವರು ಪಾದರಸದಂತೆ ಸಳಸಳನೆ ಎಲ್ಲಾ ಕಡೆಗೆ ಧಾವಿಸುತ್ತಿದ್ದರು.

ಲಾತೂರ್ – ಉಸ್ಮಾನಾಬಾದ ಎರಡೂ ಜಿಲ್ಲೆಯಲ್ಲಿ ಸೇರಿ 56 ಗ್ರಾಮಗಳ ಪೈಕಿ ಸುಮಾರು 30 ಸಾವಿರಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಕುಸಿದಿದ್ದವು. ಏಳು ಸಾವಿರಕ್ಕೂ ಹೆಚ್ಚು ಜನ ಅಸು ನೀಗಿದರು. ಸುಮಾರು ಹದಿನಾರು ಸಾವಿರಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಜನರು ಗಾಯಗೊಂಡರು. ಹದಿನೈದು ಸಾವಿರಕ್ಕೂ ಹೆಚ್ಚು ಜಾನುವಾರಗಳು ಸತ್ತವು.

ಆ ಸಮಯದಲ್ಲಿ ಇಡೀ ದೇಶದಿಂದ ಸಹಾಯ ಹರಿದುಬಂತು. ಶರದ ಪವಾರ್ , ವಿಲಾಸರಾವ್ ದೇಶಮುಖ , ಶಿವರಾಜ್ ಪಾಟೀಲ್ ಮೊದಲಾದವರು ಅಲ್ಲಿನ ಜನರಿಗೆ ಮುಖ್ಯವಾಗಿ ಧೈರ್ಯ ತುಂಬಿದರು.ಅವರು ಮಾನಸಿಕವಾಗಿ ಸದೃಢ ರಾಗುವಂತೆ ಮಾಡಿದರು.

ಬರುವ 2021 ಸಪ್ಟೆಂಬರ್ 30 ಕ್ಕೆ ಕಿಲ್ಲಾರಿ ಘಟನೆ ಜರುಗಿ 28 ವರ್ಷ ಆಗುತ್ತವೆ. ಕೊರೊನಾ ಸಂಕಷ್ಟ ದೂರವಾದರೆ , ಇದೀಗ ಕಿಲ್ಲಾರಿ ಭಾಗ ಹೇಗೆ ಇದೆ ಎಂದು ನೋಡಿ ಬರೋಣವಂತೆ !


ನೀಲಕಂಠ ದಾತಾರ

- Advertisement -
- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!