ಆತ್ಮವನ್ನು ಹತ್ಯೆ ಮಾಡುವುದು ಅಧರ್ಮ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ವಾದ ವಿವಾದಕ್ಕೆ ದಾರಿಮಾಡಿಕೊಡದ ಸತ್ಯವೇ ದೇವರು. ದೇವರನ್ನು ಎಲ್ಲರಲ್ಲಿಯೂ ಕಾಣುವುದೇ ಅದ್ವೈತ. ಅದ್ವೈತ ಎಂದರೆ ಒಂದೇ ತತ್ವ. ಒಮ್ಮತ, ಒಗ್ಗಟ್ಟು, ಏಕತೆ ಸಮಾನತೆ.

ಇದರ ಬಗ್ಗೆ ತಿಳಿಸುವುದಕ್ಕಿಂತ ಅನುಭವಿಸಿ ಮರೆಯಾದವರೆ ಹೆಚ್ಚು. ಮರೆಯಾದವರ ಹೆಸರಿನಲ್ಲಿ ಪ್ರಚಾರಕಾರ್ಯ ನಡೆಸುತ್ತಾ ಮುಂದೆ ಬಂದ ಮಧ್ಯವರ್ತಿಗಳಿಗೆ ಅವರ ಅನುಭವವಾಗದ ಕಾರಣ ಹಿಂದಿನವರು ಹೇಳಿದ್ದಷ್ಟೇ ಸತ್ಯವೆಂದು ವಾದ ವಿವಾದ ಹೆಚ್ಚಾಗಿ ದ್ವೈತ ಬೆಳೆಯಿತು.

ದ್ವೈತ ವೂ ಸತ್ಯವೇ ಆಗಿದ್ದು ಅದ್ವೈತ ದೊಳಗೇ ಅಡಗಿದೆ ಎನ್ನಬಹುದು. ಪರಮಾತ್ಮ ನ ಕಾಣಲು ಜೀವಾತ್ಮನಿಗಷ್ಟೆ ಸಾಧ್ಯ.ಹೀಗಾಗಿ ಮಾನವ ಜೀವವಿರುವಾಗಲೇ ಪರಮಾತ್ಮನ ಸತ್ಯದ ಕಡೆಗೆ ನಡೆಯಬೇಕು. ಸತ್ಯ ಒಂದೇ. ಧರ್ಮ ಒಂದೇ, ಜಾತಿ ಒಂದೇ, ಕುಲ ಒಂದೆ, ದೇಶ,ರಾಜ್ಯ, ಜಿಲ್ಲೆ, ಗ್ರಾಮ,ಮನೆ ಎಲ್ಲವನ್ನೂ ಒಂದೆ ಎನ್ನುವುದಕ್ಕೆ ಮನಸ್ಸು ಒಂದಾಗಬೇಕು.

- Advertisement -

ಮನಸ್ಸಿನಲ್ಲಿಯೇ ಅಸಂಖ್ಯಾತ ದೇವರು ಧರ್ಮ, …ಇರೋವಾಗ ಹೊರಗಿನ ಸತ್ಯದಿಂದ ದೂರ ಹೋಗಲಾಗದು. ಎಲ್ಲಿಯವರೆಗೆ ಮಾನವನು ತನ್ನ ತಾನರಿತು ನಡೆಯುವುದಿಲ್ಲವೋ ಅಲ್ಲಿಯವರೆಗೆ ಮಧ್ಯೆ ನಿಂತು ನಡೆಸೋ ಮಧ್ಯವರ್ತಿಗಳು ಹೆಚ್ಚಾಗುತ್ತಾರೆ. ಈ ಅರ್ಧಸತ್ಯದ ವಿಚಾರಗಳಲ್ಲಿ ವಾದ ವಿವಾದಗಳಿರುತ್ತದೆ ಇದನ್ನು ಕೇಳಿ ತಿಳಿದ ಜನರಲ್ಲಿ ದ್ವಂದ್ವ ವಿರುತ್ತದೆ.

ದ್ವಂದ್ವ ರಾಜಕೀಯಕ್ಕೆ ಇಳಿಯುತ್ತದೆ. ರಾಜಕೀಯವೆ ಮಾನವನ ಶತ್ರುವಾಗುತ್ತದೆ. ಜೀವನದ ಕೆಲವು ಸತ್ಯಾಂಶವನ್ನು ತಿಳಿದ ಮೇಲೆ ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲಾ ನಾಟಕಗಳು ಬಟ್ಟ ಬಯಲಾಗಿರುತ್ತದೆ.

ಆದರೆ, ಜೀವನದಲ್ಲಿ ನಾಟಕವೆ ಮಾಡಿಕೊಂಡವರಿಗೆ ಇದು ಕಹಿಯಾಗಿ ತಮ್ಮ ನಾಟಕವನ್ನು ಇನ್ನಷ್ಟು ಹೆಚ್ಚಿಸಿಕೊಂಡು ಅಸತ್ಯದಲ್ಲಿ ಬದುಕನ್ನು ಮುಳುಗಿಸಿಕೊಂಡು ಪರರನ್ನು ತಮ್ಮ ಬಲೆಯಲ್ಲಿ ಎಳೆದು ತಾವೂ ಬಂಧಿಗಳಾಗಿ ಎಲ್ಲರನ್ನೂ ಬಂಧಿಸುವಲ್ಲಿ ಯಶಸ್ಸು ಪಡೆದರೂ,ಒಮ್ಮೆ ಜೀವ ಹೋದ ಮೇಲೆ ಬಂಧನದಿಂದ ಹೊರ ಬಂದವರಿಗೆ ತಿರುಗಿ ಬರಲಾಗದಷ್ಟು ಸಂಕಟ, ದು:ಖ ಹೆಚ್ಚಾದಾಗ ಯಾರೂ ಇರೋದಿಲ್ಲ.

ಹೀಗಾಗಿ ಸತ್ಯವೇ ದೇವರು ಎಂದಿರೋದು. ಸತ್ಯವು ಧರ್ಮದ ಪರವಾಗಿದ್ದರೆ ಶಾಂತಿ,ಸಮಾಧಾನ, ತೃಪ್ತಿ, ಮುಕ್ತಿ. ಕಲಿಪ್ರಭಾವದಿಂದಾಗಿರುವ ಅಸತ್ಯದ ರಾಜಕೀಯ ಬೆಳವಣಿಗೆ ಧಾರ್ಮಿಕ ಕ್ಷೇತ್ರಗಳಲ್ಲಿ ಆವರಿಸಿದಂತೆ ಭೂಮಿಯ ಸತ್ವ ನಾಶವಾಗುತ್ತಾ ಜೀವ ಭ್ರಷ್ಟಾಚಾರಕ್ಕೆ ಸಹಕರಿಸಿ ಆತ್ಮಹತ್ಯೆಯ ಕಡೆಗೆ ನಡೆಯುವುದು.

ಸತ್ಯಕ್ಕೆ ಸಾವಿಲ್ಲ. ಆತ್ಮಕ್ಕೆ ಸಾವಿಲ್ಲ. ಆತ್ಮಹತ್ಯೆ ಮಹಾಪಾಪ.ಆತ್ಮವನ್ನು ಹತ್ಯೆಮಾಡೋದೆಂದರೆ ಸತ್ಯಕ್ಕೆ, ಧರ್ಮಕ್ಕೆ ವಿರುದ್ದ ನಡೆಯೋದೆಂದರ್ಥ. ದೇಶದೊಳಗಿದ್ದು ದೇಶದ ವಿರುದ್ದ ನಡೆಯೋದು, ಸತ್ಯ ತಿಳಿದೂ ಸತ್ಯಕ್ಕೆn ವಿರುದ್ದ ನಿಲ್ಲುವುದು.

ಶಿಷ್ಟಾಚಾರದ ಹೆಸರಲ್ಲಿ ಭ್ರಷ್ಟಾಚಾರ ಬೆಳೆಸೋದು. ಧರ್ಮದ ಹೆಸರಲ್ಲಿ ಅಧರ್ಮದ ರಾಜಕೀಯದಿಂದ ಜನರನ್ನು ಆಳೋದು…..ಹೀಗೇ ಬೌತಿಕದಲ್ಲಿ ಮುಂದೆ ಮುಂದೆ ನಡೆದ ಜೀವ ತಿರುಗಿ ಬರೋದಕ್ಕೆ ಕಷ್ಟ.  “ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ”


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!