spot_img
spot_img

ಮೂಡಲಗಿಗೆ ಕಿತ್ತೂರ ಚನ್ನಮ್ಮ ಜ್ಯೋತಿ ಆಗಮನ ; ಭವ್ಯ ಸ್ವಾಗತ

Must Read

- Advertisement -

ಮೂಡಲಗಿ: ಕಿತ್ತೂರ ಉತ್ಸವದ ಅಂಗವಾಗಿ ಜಿಲ್ಲೆಯಲ್ಲಿ ಆರಂಭವಾಗಿರುವ ವೀರರಾಣಿ ಕಿತ್ತೂರ ಚನ್ನಮ್ಮಾಜಿ ವಿಜಯಜ್ಯೋತಿಯು ಗುರುವಾರದಂದು ಮೂಡಲಗಿ ಪಟ್ಟಣಕ್ಕೆ ಆಗಮಿಸಿದಾಗ ಸಂಭ್ರಮದಿಂದ ಸ್ವಾಗತ ನೀಡಲಾಯಿತು.

ಮಧ್ಯಾಹ್ನ ವೀರಜ್ಯೋತಿಯು ಗುರ್ಲಾಪೂರಕ್ಕೆ ಆಗಮಿಸಿದಾಗ ಪ್ರವಾಸಿ ಮಂದಿರದಲ್ಲಿ ಮೂಡಲಗಿ ತಾಲೂಕಾ ಆಡಳಿತ ಮತ್ತು ಪಂಚಮಸಾಲಿ ಸಮಾಜ ಸಂಘಟಕರು ಪೂಜೆ ಸಲ್ಲಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಂದ ಕುಂಭಮೇಳ ಮತ್ತು ಆರತಿಯೊಂದಿಗೆ ಭವ್ಯ ಸ್ವಾಗತ ಕೋರಿದರು.

ಪ್ರವಾಸಿ ಮಂದಿರದಲ್ಲಿ ಜರುಗಿದ ಸಮಾರಂಭದಲ್ಲಿ ತಹಶೀಲ್ದಾರ ಡಿ.ಜಿ.ಮಹಾತ ಮಾತನಾಡಿ, ಸ್ವಾತಂತ್ರ್ಯದ ಕಹಳೆಯನ್ನು ಮೊಳಗಿಸುವುದರಲ್ಲಿ ಮೊದಲಿಗರಾಗಿ ಹೋರಾಟ ಮಾಡಿರುವ ಮಹಾನ್ ಚೇತನ, ವ್ಯಕ್ತಿತ್ವ ಹೊಂದಿರುವ ವೀರರಾಣಿ ಚನ್ನಮ್ಮಾಜಿ ಅವರ ವೀರ ವಿಜಯಜ್ಯೋತಿಯನ್ನು ನಾವು ಇಂದು ಸ್ವಾಗತ ಮಾಡಿಕೊಳ್ಳುವುದು ಬಹಳ ಅಭಿಮಾನದ ಸಂಗತಿ ಎಂದರು.

- Advertisement -

ಬಿಇಒ ಅಜೀತ ಮನ್ನಿಕೇರಿ ಮಾತನಾಡಿದರು. ಕಿತ್ತೂರ ರಾಣಿ ಚನ್ನಮ್ಮಾಜಿ ಇತಿಹಾಸವನ್ನು ವಿವರಿಸಿ ಅವರು ನಾಡಿನ ಎಲ್ಲ ಮಹಿಳಾ ಶಕ್ತಿಯಾಗಿ ಗೋಚರಿಸಲಿ ಎಂದು ಆಶಿಸಿದರು, ಕಿತ್ತೂರಿನ ನಾಡಿನ, ಸಾಮ್ರಾಜ್ಯವನ್ನು, ಕಿತ್ತೂರಿನ ಇತಿಹಾಸವನ್ನು ನಾವೆಲ್ಲರೂ ಮರೆಯಬಾರದೆಂದು ಕರ್ನಾಟಕ ಸರಕಾರ ಪ್ರತಿ ವರ್ಷ ಕಿತ್ತೂರ ಉತ್ಸವ ಮಾಡುತ್ತಾ ಉತ್ಸವದ ಮೂಲಕ ಚನ್ನಮ್ಮಾಜಿ ಸಾಮ್ರಾಜ್ಯದ ಎಲ್ಲ ಮಗ್ಗಲುಗಳನ್ನು ಜನರಿಗೆ ಪರಿಚಯ ಮಾಡಿಕೊಂಡು ಬೆಳಗಾವಿ ಜಿಲ್ಲೆಗೆ ಚನ್ನಮ್ಮ ಬಹಳ ದೊಡ್ಡ ಆಸ್ತಿ ಅನ್ನುವುದನ್ನು ಬಿಂಬಿಸುವ ಕಾರಣಕ್ಕಾಗಿ ಸರಕಾರ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಇವತ್ತಿಗೂ ಕೂಡಾ ಚನ್ನಮ್ಮಾ ನಮ್ಮ ನಡುವೇ ಇದ್ದಾರೆ ಅವರ ಕಿಚ್ಚು, ಇಚ್ಚೆ, ಸಂಕಲ್ಪ ಇನ್ನೂ ಕೂಡಾ ಮುಂದುವರಿಯಲಿ ಎಂದರು.

ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮ ಭಾವಚಿತ್ರಕ್ಕೆ ಮತ್ತು ವಿಜಯಜ್ಯೋತಿಗೆ ಚನ್ನಮ್ಮ ಸಮಿತಿ ಮತ್ತು ಪಂಚಮಸಾಲಿ ಸಮಾಜ ಸಮಿತಿ ವತಿಯಿಂದ ಪೂಜೆ ಸಲ್ಲಿಸಿದರು ನಂತರ ಕಲ್ಮೇಶ್ವರ ವೃತ್ತದಲ್ಲಿಯೂ ಸಹ ಪೂಜೆಸಲ್ಲಿಸಿ ಬೀಳ್ಕೊಡಲಾಯಿತು.

ಈ ಸಮಯದಲ್ಲಿ ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ ಮುಖ್ಯಾಧಿಕಾರಿ ದೀಪಕ ಹರ್ದಿ, ಸಿಡಿಪಿಒ ವಾಯ್.ಎಂ.ಗುಜನಟ್ಟಿ, ಪಿಎಸ್‍ಐ ಎಚ್.ವಾಯ್.ಬಾಲದಂಡಿ, ಪಂಚಮಸಾಲಿ ಜಿಲ್ಲಾಕಾರ್ಯಧ್ಯಕ್ಷ ನಿಂಗಪ್ಪ ಪಿರೋಜಿ, ಮೂಡಲಗಿ ತಾಲೂಕಾ ಘಟಕ ಅಧ್ಯಕ್ಷ ಬಸವರಾಜ ಪಾಟೀಲ, ಬಿ.ಸಿ.ಮುಗಳಖೋಡ, ವೀರುಪಾಕ್ಷ ಮುಗಳಖೋಡ, ಅಂಗನವಾಡಿ ಮೇಲ್ವಿಚಾರಕಿ ಕೆ.ಸಿ.ಕನಶೆಟ್ಟಿ, ಮೂಡಲಗಿ ಕಿತ್ತೂರರಾಣಿ ಚನ್ನಮ್ಮ ಸಮಿತಿ ಅಧ್ಯಕ್ಷ ಕೇದಾರಿ ಭಸ್ಮೇ, ಪುರಸಭೆ ಸದಸ್ಯ ಗಪಾರ್ ಡಾಂಗೆ, ಅನ್ವರ ನದಾಫ್, ಪ್ರಕಾಶ ಮುಗಳಖೋಡ, ಬಿಜೆಪಿ ಅರಭಾಂವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಪಂಚಮಸಾಲಿ ಸಮಾಜ ಸಂಘದ ಮತ್ತು ಬಿಜೆಪಿ ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತಿತರರಿದ್ದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group