spot_img
spot_img

ವಿದ್ಯಾರ್ಥಿಗಳಿಗೆ ಗ್ರಾಮೀಣ ಕಲೆ, ಸಂಪ್ರದಾಯ ಹಾಗೂ ಸಂಸ್ಕೃತಿಗಳ ತಿಳಿವಳಿಕೆ ಅಗತ್ಯ – ಸದಾಶಿವ ಮಾದರ

Must Read

spot_img
- Advertisement -

ಮೂಡಲಗಿ : ವಿದ್ಯಾರ್ಥಿಗಳಿಗೆ ಗ್ರಾಮೀಣ ಕಲೆ, ಸಂಪ್ರದಾಯ ಹಾಗೂ ಸಂಸ್ಕೃತಿಗಳ ತಿಳಿವಳಿಕೆ ಅಗತ್ಯವಾಗಿದೆ ಇಂದು ಗ್ರಾಮೀಣ ಸಂಪ್ರದಾಯಗಳು ನಶಿಸಿ ಹೋಗುತ್ತಿದ್ದು ತಾಯಿಯ ಮಮತೆ ತಂದೆಯ ವಾತ್ಸಲ್ಯ ಹಾಗೂ ಬಂಧುಗಳು ಆತ್ಮೀಯತೆ ಮಾಯವಾಗುತ್ತಿದ್ದು ಕುಟುಂಬ ಪದ್ದತಿ ಮರೀಚಿಕೆಯಾಗುತ್ತಿದ್ದು ನಿಜವಾದ ನಮ್ಮ ದೇಶದ ಗ್ರಾಮೀಣ ಜನರ ಬದುಕು ವಿಶಿಷ್ಟ ವೈವಿಧ್ಯಮಯವಾದ ಆಚರಣೆ ಸಂಪ್ರದಾಯ ಹಾಗೂ ಸಾಮಾಜಿಕ ಕಳಕಳಿಯ ಸಿದ್ದಾಂತಗಳನ್ನು ಒಳಗೊಂಡಿದ್ದು ಅದರ ಮೌಲ್ಯಗಳನ್ನು ಇಂದಿನ ವಿದ್ಯಾರ್ಥಿಗಳಲ್ಲಿ ತಿಳಿಸಿಕೊಡುವುದು ಅವಶ್ಯಕವಿದೆ ಎಂದು ಮೂಡಲಗಿಯ ಕೆ.ಎಚ್. ಸೋನವಾಲ್ಕರ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕರಾದ ಸದಾಶಿವ ಮಾದರ ಹೇಳಿದರು.

ಪಟ್ಟಣದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಕಲಾ ವಾಣಿಜ್ಯ ವಿಜ್ಞಾನ ಸಮಾಜಕಾರ್ಯ ಪದವಿ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಹಮ್ಮಿ ಕೊಂಡಿರುವ ಹಳ್ಳಿಗರ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾರತದ ಸಂಸ್ಕೃತಿಯ ರೂವಾರಿ ಸ್ವಾಮಿ ವಿವೇಕಾನಂದರು ಭಾರತವನ್ನು ವಿಶ್ವಕ್ಕೆ ಪರಿಚಯ ಮಾಡಿದರು ಅಂತಹ ಮಹಾತ್ಮರು ನಮ್ಮ ಸಂಸ್ಕೃತಿ ಉಳಿವಿಗಾಗಿ ಹೋರಾಡಿದರು ಅಲ್ಲದೇ ಹಳ್ಳಿಯ ಸೊಗಡು ಹೆಣ್ಣುಮಕ್ಕಳ ವಸ್ತ್ರಾಲಂಕಾರ, ಅವರು ಹೇಳುವ ಒಗಟು ಒಡಪು ಜೀವನಾಮೃತವನ್ನು ನೀಡುತ್ತವೆ ಅಂತಹ ತಾಯಂದಿರನ್ನು ನೆನೆಸಿಕೊಳ್ಳುವ ಅವರ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕವಿದೆ ಎಂದರು.

ಅತಿಥಿಯಾಗಿ ಆಗಮಿಸಿದ್ಮ ಮೂಡಲಗಿ ವಕೀಲರು ಮತ್ತು ಮಂಜುನಾಥ ಸೈನಿಕ ಕೋಚಿಂಗ್ ಕೇಂದ್ರದ ಅಧ್ಯಕ್ಷರಾದ ಲಕ್ಷ್ಮಣ  ಅಡಿಹುಡಿ ಮಾತನಾಡಿ ನಮ್ಮ ಭಾಷೆ ನಮ್ಮ ಗ್ರಾಮೀಣ ಜನರ ವಿಚಾರಗಳು ಮೊಬೈಲ್ ವಿದ್ಯಮಾನದಿಂದ ತಮ್ಮ ಆಸ್ತಿತ್ವ ಕಳೆದುಕೊಳ್ಳುತ್ತಿದ್ದು ನಮ್ಮ ಸಂಪ್ರದಾಯ ಸಂಸ್ಕೃತಿ ಹಾಗೂ ಭಾಷೆಯ ಸೊಗಡು ನಮ್ಮ ಜೀವನದ ಆಧಾರಸ್ತಂಭಗಳಾಗಬೇಕು ಇಂದು ಪಟ್ಟಣದ ಬದುಕು ಕೃತಕವಾಗಿದ್ದು ಹಳ್ಳಿಯ ಹಿಂದಿನ ಬದುಕು ನೈಸರ್ಗಿಕ ನಿಯಮಗಳಂತೆ ರಚಿತವಾಗಿತ್ತು ಆಯುಷ್ಯವು ಸಹಿತ ದೀರ್ಘಕಾಲಿಕವಾಗಿ ಜನರ ಬಾಳುತ್ತಿದ್ದರು ಅದು ವಾಸ್ತವಿಕ ಜೀವನವಾಗಿ ಜನರ ನಾಡಿಮಿಡತದಲ್ಲಿ ಉಸಿರಾಗಿತ್ತು ಇಂದು ಗ್ರಾಮೀಣ ಬದುಕಿನ ಅನಾವರಣ ಮಕ್ಕಳಲ್ಲಿ ಬೆಳಸುವುದು ಅವಶ್ಯಕವಿದೆ ಎಂದರು.

- Advertisement -

ಪದವಿ ಕಾಲೇಜಿನ ಪ್ರಾಚಾರ್ಯ ಸತೀಶ ಗೋಟೂರೆ ಮಾತನಾಡಿ ನಮ್ಮ ಉಡುಗೆ ತೊಡುಗೆಗಳು ನಮ್ಮ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತವೆ ಅವುಗಳನ್ನು ನಾವುಗಳು ಉಳಿಸಿಕೊಂಡು ಹೋಗುವುದು ಅವಶ್ಯವಿದೆ ಎಂದರು.

ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶಿವಾನಂದ ಸತ್ತಿಗೇರಿ ಮಾತನಾಡಿ ಹಳ್ಳಿಯ ಜೀವನ ನಮ್ಮ ಸಂಪ್ರದಾಯಿಗಳ ಪ್ರತಿಬಿಂಬವಾಗಿದ್ದು ಅವುಗಳನ್ನು ವಿದ್ಯಾರ್ಥಿಗಳಲ್ಲಿ ಬೆಳಸಿ ಉಳಿಸಿಕೊಂಡು ಹೋಗುವುದು ಇಂದಿನ ಅವಶ್ಯಕತೆಯಾಗಿದೆ ಎಂದರು.

ವಿದ್ಯಾರ್ಥಿಗಳು ಗ್ರಾಮೀಣ ಹಾಡುಗಳು, ಗ್ರಾಮೀಣ ನೃತ್ಯಗಳು ಹಾಗೂ ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿ ಗ್ರಾಮೀಣ ಸೊಬಗಿನ ಆನಂದವನ್ನು ಗ್ರಾಮೀಣ ಊಟದೊಂದಿಗೆ ಸವಿದರು.

- Advertisement -

ಕಾರ್ಯಕ್ರಮದಲ್ಲಿ ಸಂಗಮೇಶ ಕುಂಬಾರ, ಸಂಜೀವ ವಾಲಿ, ಎಸ್.ಬಿ.ಲಟ್ಟಿ, ಎಂ.ಬಿ. ಸಿದ್ನಾಳ, ಎಂ. ಆಯ್ ಜಾಡರ, ರವಿ ಕಟಗೇರಿ, ಸಂಜೀವ ಮಂಟೂರ, ಮಲ್ಲಪ್ಪಾ ಪಾಟೀಲ, ಬಾಳು ಪುರವಂತ, ಮಾಯವ್ವ ಪೂಜೇರಿ, ಅಶ್ವೀನಿ ಬಡಿಗೇರ, ಲಕ್ಷ್ಮಿ ಮುರಗೋಡ ಇನ್ನಿತರ ಸಿಬ್ಬಂದಿಗಳು ಹಾಜರಿದ್ದರು.
ಉಪನ್ಯಾಸಕ ಜಿ.ಎಸ್.ಮನ್ನಾಪೂರ ನಿರೂಪಿಸಿದರು. ಉಪನ್ಯಾಸಕ ಸಿದ್ದಾರೂಡ ಬೆಳವಿ ಸ್ವಾಗತಿಸಿದರು. ಉಪನ್ಯಾಸಕಿ ವಾಣಿಶ್ರೀ ಕಾಪಸೆ ವಂದಿಸಿದರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆ

ಸಿಂದಗಿ: ಸಾಲದ ಸುಳಿಗೆ ಸಿಲುಕಿದ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮನ್ನಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದುಂಡಪ್ಪ ಸಿದ್ರಾಮಪ್ಪ ಮನಗೂಳಿ(೩೫) ಮೃತ ದುರ್ದೈವಿ ರೈತನಾಗಿದ್ದಾನೆ....
- Advertisement -

More Articles Like This

- Advertisement -
close
error: Content is protected !!
Join WhatsApp Group