spot_img
spot_img

ಕೊಡೇಕಲ್ ಬಸವಣ್ಣ

Must Read

- Advertisement -

15ನೆಯ ಶತಮಾನದಲ್ಲಿ ಆಗಿ ಹೋದ ಕೊಡೆಕಲ್ ಬಸವಣ್ಣನವರು ಭಾವೈಕ್ಯತೆಯ ಹರಿಕಾರ ಯಾದಗಿರಿ ಜಿಲ್ಲೆ, ಸುರಪುರ ತಾಲೂಕಿನಲ್ಲಿ ಕೊಡೆಕಲ್ ಕ್ಷೇತ್ರವಿದೆ. ಬಸವಣ್ಣನವರು ಕಾಲಜ್ಞಾನದ ವಚನಗಳ ಮೂಲಕ ಮನುಕುಲವನ್ನು ಉದ್ದರಿಸಿದ್ದಾರೆ. ಇವರ ಸಾಹಿತ್ಯವೆಲ್ಲ ಅಮರಗನ್ನಡ ಎಂಬ ಸಾಂಕೇತಿಕ ಲಿಪಿಯಲ್ಲಿದೆ. ಕೆಲವು ವಚನಕಾರರು ವಚನ ಬರೆದರೆ ಕೊಡೆಕಲ್ ಬಸವಣ್ಣನವರು ವಚನಗಳ ಜೊತೆಗೆ ಮುಂದಾಗುವ ಭವಿಷ್ಯವನ್ನು ಕಾಲಜ್ಞಾನದ ಮೂಲಕ ತಿಳಿಸಿದ್ದಾರೆ ಎಂದು ಡಾ. ಗೀತಾ ಡಿಗ್ಗೆ  ಹೇಳಿದರು.

ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಡಾ. ನಿರ್ಮಲಾ ಬಟ್ಟಲ ಅವರ ತಂದೆಯವರಾದ ದಿವಂಗತ ಶರಣ ಗಣಪತಿ ಪರಮೇಶ್ವರಪ್ಪ ಬಟ್ಟಲ ತಾಯಿಯವರಾದ ದಿವಂಗತ ಶರಣೆ ಶಾಂತಾ ಗಣಪತಿ ಬಟ್ಟಲ ಇವರ ಸ್ಮರಣಾರ್ಥ ಶ್ರಾವಣ ಮಾಸದ ವಿಶೇಷ ದತ್ತಿ ಉಪನ್ಯಾಸದ 32 ನೆಯ ದಿವಸ ಮಾತನಾಡಿದರು.

ಕಾಲಜ್ಞಾನ ಸಾಹಿತ್ಯವೆಂದರೆ ಮುಂದಾಗುವುದನ್ನು ತಿಳಿಸುವುದು ಉತ್ತರ ಕರ್ನಾಟಕದ ಕೊಡೆಕಲ್ ನ ಕಾಲಜ್ಞಾನ ಇಂದಿಗೂ ಹೆಸರು ವಾಸಿಯಾಗಿದೆ. ಇದರ ಮೂಲಕ ಸಂಭವನೀಯ ದುರಂತಗಳ ಬಗ್ಗೆ ಮೊದಲೇ ಊಹಿಸಿ ಪರಿಹಾರ ನೀಡುವ ಪ್ರಯತ್ನವನ್ನು ಕೊಡೆಕಲ್ ಬಸವಣ್ಣನವರು ಮಾಡಿದ್ದಾರೆ. ಅವರ ಸಾಹಿತ್ಯ ಸಾಮಗ್ರಿಯಲ್ಲಿ ಎರಡು ರೀತಿಯ ಕಾಲಜ್ಞಾನ ರಚನೆಗಳಿವೆ. ಒಂದು ಹಂಡಿ ಬಿಕ್ಷದ ಕಾಲಜ್ಞಾನ ವಚನ ಎರಡನೆಯದು ಸಾಮಾನ್ಯ ಕಾಲಜ್ಞಾನ. ಪ್ರತಿ ವರ್ಷ ಶಿವರಾತ್ರಿ ದಿನ ಬಸವೇಶ್ವರ ದೇವಸ್ಥಾನದಲ್ಲಿ ಕಾಲಜ್ಞಾನ ನುಡಿಯನ್ನು ಪಠಿಸಲಾಗುತ್ತದೆ. ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರದೊಂದಿಗೆ ಜಾಗರಣೆ ಮಾಡಿ ಕಾಲಜ್ಞಾನದ ಹೊತ್ತಿಗೆ ಯನ್ನು ತೆರೆಯಲಾಗುತ್ತದೆ. ಹೊತ್ತಿಗೆ ಮೊದಲ ಪುಟದಲ್ಲಿ ಯಾವ ವಾಣಿ ಬರುತ್ತದೆಯೋ ಅದುವೇ ಶಿವರಾತ್ರಿ ನುಡಿl ಇಲ್ಲವೇ ಕಾಲಜ್ಞಾನ ನೋಡಿ ಎನ್ನಲಾಗುತ್ತದೆ. ಈ ನುಡಿ ಆಲಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಅಸoಖ್ಯಾತ ಭಕ್ತಾದಿಗಳು ಆಗಮಿಸುತ್ತಾರೆ ಈ ವರ್ಷದ ಮಹಾಶಿವರಾತ್ರಿ ದಿನವಾದ ಶುಕ್ರವಾರ ರಾತ್ರಿ ಕೊಡೆಕಲ್ ನ ಬಸವ ಪೀಠಾಧಿಪತಿಗಳಾದ ಮಠದ ಶ್ರೀಗಳ ಸಾನಿಧ್ಯದಲ್ಲಿ ಕಾಲಜ್ಞಾನ ವಚನದ ಹೊತ್ತಿಗೆ ಹೊರತೆಗೆಯಲಾಗುತ್ತದೆ ಎಂದು ಸ್ಮರಿಸಿದರು.

- Advertisement -

ಕೊಡೇಕಲ್ ನಲ್ಲಿ ಎಲ್ಲ ಹೆಣ್ಣುಮಕ್ಕಳು ಕುಟ್ಟುವಾಗ, ಬೀಸುವಾಗ, ಹೊಲದಲ್ಲಿ ಕೆಲಸ ಮಾಡುವಾಗ, ಹೀಗೆ ತಮ್ಮ ಪ್ರತಿನಿತ್ಯದ ದೈನಂದಿನ ಕಾರ್ಯಗಳಲ್ಲಿ ಬಸವಣ್ಣನವರ ತ್ರಿಪದಿಗಳನ್ನು ಹಾಡುತ್ತಾರೆ ಎಂದು ಹೇಳುತ್ತಾ, ಸೃಷ್ಟಿಯಸೊಬಗಿನಲ್ಲಿ ಕೊಡೆಯಾಕಾರದ ಕಲ್ಲು ಅಲ್ಲಿರುವದರಿಂದ ಕೊಡೇಕಲ್ ಎಂಬ ಹೆಸರು ಬಂದದ್ದು, ಮೊದಲ ಮಗ ಅದ್ವೈತ ಯೋಗಿ ಕಪ್ಪಡಿಗೆ ಹೋಗಿದ್ದು , ಕಿರಿಯ ಮಗ ಆಧ್ಯಾತ್ಮದ ಹಿನ್ನೆಲೆಯಲ್ಲಿ ಕಾಗಿನೆಲೆಗೆ ಹೋಗಿದ್ದು, ಎರಡನೆಯ ಮಗ ಶಿವಾಚಾರ್ಯರಾಗಿ ಇಲ್ಲಿಯೇ ಉಳಿದು ಸಾಮಾನ್ಯ ಜನರಿಗೆ ಬೆಳಕಾಗಿದ್ದುದನ್ನು ಹೇಳುತ್ತಾ ಈಗ ಸಧ್ಯ ಅಲ್ಲಿ ನಡೆಯುವ ಹಿಂದೂ -ಮುಸ್ಲಿಂ ಭಾವೈಕ್ಯತೆಯ ಪೂಜೆ -ಪುನಸ್ಕಾರ, ದೇವಸ್ಥಾನದ ಒಳ -ಹೊರ ನೋಟ, ಪದ್ಧತಿ -ಆಚರಣೆಗಳನ್ನು ನಮ್ಮೊಂದಿಗೆ ಹಂಚಿಕೊಂಡರು.

ಕೊಡೇಕಲ್ ಬಸವಣ್ಣನವರು ಧಾರ್ಮಿಕ ನೆಲೆಯನ್ನು ಕಟ್ಟಿಕೊಂಡ ರೀತಿ, ಸಾಂಸ್ಕೃತಿಕ ಜೀವನದ ಕಾಳಜಿ, ಅವರ ತತ್ವಸಿದ್ಧಾಂತ, ನಡೆ -ನುಡಿಯ ಸಾಕ್ಷಿ ಪ್ರಜ್ಞೆ, ಕಾಲದ ಸಂಘರ್ಷದಲ್ಲಿ ಅಮರತ್ವದ ಕಲ್ಪನೆ, ಅಮರ ಕಲ್ಯಾಣ ಪರಂಪರೆಯನ್ನು ಸ್ಥಾಪಿಸಿದ್ದು, ವರ್ತಮಾನದ ಕಟುಸತ್ಯವನ್ನು ಹೇಳುವುದು, ಜನರ ಬದುಕಿನ ನಾಡಿಮಿಡಿತ ತಿಳಿದವರು, ಜನರನ್ನು ಪುನಃಶ್ಚೇತನಗೊಳಿಸಿದವರು, ಧಾರ್ಮಿಕ ಕ್ರಾಂತಿಯ ನೇತಾರರಾದ ಬಸವಣ್ಣನವರ ವಾರಸುದಾರರಾಗಿ 15 ನೆಯ ಶತಮಾನದಲ್ಲಿ ಅವರದೇ ಪ್ರತ್ಯಾವತಾರವಾಗಿ, ದಾರ್ಶನಿಕರಾಗಿ, ಧಾರ್ಮಿಕದ ನಂದಾದೀಪವಾಗಿ ಬೆಳಗಿದರು ಎಂದು ಹೇಳುತ್ತಾ ತಮ್ಮ ಮಾತುಗಳನ್ನು ಮುಗಿಸಿದರು.

ಪ್ರೊ. ಶಾರದಮ್ಮ ಪಾಟೀಲ ಅವರು 12 ನೆಯ ಶತಮಾನದ ಶರಣ-ಶರಣೆಯರ ವಚನಗಳನ್ನು ಉಲ್ಲೇಖಿಸುತ್ತ,ಕೊಡೇಕಲ್ ಶರಣರನ್ನು ಲಿಂಗಾಯತ ಮನ್ವಂತರದ ಹೊಸ ಬೆಳಕು,ಮಡಿವಂತಿಕೆಯ ಪರದೆ ಸರಿಸಿದವರು, ಚರಿತ್ರೆಯ ಯುಗಪುರುಷರು, ಪ್ರಗತಿಪರ ಸoರಕ್ಷಕರು, ಆತ್ಮ ಲಿಂಗ ನಂಬಿದವರು ಎಂದು ಸ್ಮರಿಸಿದರು.ಹಿಂದೂ -ಮುಸ್ಲಿಂ ಬಾಂಧವ್ಯದ ಪ್ರತೀಕವಾದ ದೇವಸ್ಥಾನದ ಆಚರಣೆಯನ್ನು, ಕೊಡೇಕಲ್ ಬಸವಣ್ಣನವರ ವೇಷ -ಭೂಷಣವನ್ನು ನಮ್ಮೊಂದಿಗೆ ಹಂಚಿಕೊಂಡು, ಇನ್ನೂ ಹಲವಾರು ಉಕ್ತಿಗಳನ್ನು ತಮ್ಮ ಮಾರ್ಗದರ್ಶನದ ನುಡಿಗಳಲ್ಲಿ ಹಂಚಿಕೊಂಡರು.

- Advertisement -

ಡಾ. ಶಶಿಕಾಂತ ಪಟ್ಟಣ ಅವರು ಅಲ್ಲಮ ಮತ್ತು ಬಸವಣ್ಣನವರ ಸಮನ್ವಯತೆಯನ್ನು ಕೊಡೇಕಲ್ ಬಸವಣ್ಣನವರ ಕಾಲಜ್ಞಾನದ ವಚನಗಳಲ್ಲಿ ಕಾಣಬಹುದು ಎಂದು ಹೇಳುತ್ತಾ,ಆಗಿನ ಕಾಲದ ಶ್ರಮಿಕವರ್ಗಗಳ ಬಗೆಗೆ ನೆನಪುಮಾಡುತ್ತಾ, ಕಾರಣೀಕರು, ಕೋಡಿಮಠದ ಭವಿಷ್ಯ ಪ್ರಚಲಿತದಲ್ಲಿದ್ದದ್ದು, ವಿದೇಶದ ನಾಷ್ಟ್ರಾಡಮಸ್ ಬಗೆಗೆ ನಮ್ಮ ಜೊತೆಗೆ ಹಂಚಿಕೊಂಡರು.

ಶರಣೆ ಏoಜಲಿನಾ ಗ್ರೆಗರಿ ಅವರ ವಚನ ಪ್ರಾರ್ಥನೆ, ಶರಣೆ ಅಕ್ಕಮಹಾದೇವಿ ತೆಗ್ಗಿ ಅವರ ಸ್ವಾಗತ -ಪ್ರಾಸ್ತಾವನೆ -ಪರಿಚಯ, ಡಾ. ಜಯಶ್ರೀ ಹಸಬಿ ಅವರ ಶರಣು ಸಮರ್ಪಣೆ, ಶರಣೆ ಜಯದೇವಿ ದಾoಡ್ರಾ ಅವರ ವಚನಮಂಗಳದೊಂದಿಗೆ ಕಾರ್ಯಕ್ರಮ ಮುಗಿಯಿತು.
ಡಾ. ಬಸಮ್ಮ ಗಂಗನಳ್ಳಿ ಅವರು ಕಾರ್ಯಕ್ರಮ ನಿರ್ವಹಣೆಯನ್ನು ಅತ್ಯುತ್ತಮವಾಗಿ ನಡೆಸಿಕೊಟ್ಟರು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕಲ್ಲು ಮಠದ ಶ್ರೀ ಪ್ರಭು ಸ್ವಾಮಿಗಳ ಲಿಂಗ ದೇವರ ಲೀಲಾ ವಿಳಾಸ ಚಾರಿತ್ರ

ಅಂತಾರಾಷ್ಟ್ರೀಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸಂಯುಕ್ತ ಆಶ್ರಯದಲ್ಲಿ ಕಲ್ಲು ಮಠದ ಶ್ರೀ...
- Advertisement -

More Articles Like This

- Advertisement -
close
error: Content is protected !!
Join WhatsApp Group