ಕಲ್ಲೋಳಿ ಮಹಾಲಕ್ಷ್ಮೀ ಸಹಕಾರ ಸಂಸ್ಥೆಗೆ ರೂ. 60 ಲಕ್ಷ ಲಾಭ – ಸಂಸದ ಈರಣ್ಣ ಕಡಾಡಿ

Must Read

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಮೂಡಲಗಿ : ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ನಿ, ಇದರ ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ 60 ಲಕ್ಷ ಲಾಭಗಳಿಸಿ ಸಹಕಾರಿಯು ಪ್ರಗತಿಯಲ್ಲಿ ಸಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ, ಸಂಸದ ಈರಣ್ಣ ಕಡಾಡಿ ಹೇಳಿದರು.

ಕಲ್ಲೋಳಿ ಪಟ್ಟಣದಲ್ಲಿ ಏ-29 ರಂದು ಸಹಕಾರಿಯ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಡಾಡಿ ಅವರು, ಸಹಕಾರಿಯು 4681 ಸದಸ್ಯರನ್ನು ಹೊಂದಿ ರೂ. 12.75 ಲಕ್ಷ ಶೇರು ಬಂಡವಾಳ ಹೊಂದಿದ್ದು, 2020-21ರ ಆರ್ಥಿಕ ವರ್ಷದಲ್ಲಿ 18.17 ಕೋಟಿ ಠೇವಣಿ ಸಂಗ್ರಹಿಸಿ, ರೂ 19.60 ಕೋಟಿ ಸಾಲ ವಿತರಿಸಿದೆ. ರೂ 21.51 ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದರು.

ರೂ 3.21 ಕೋಟಿ ನಿಧಿಗಳನ್ನು ಹೊಂದಿದೆ, ಕಳೆದ 2 ವರ್ಷಗಳಿಂದ ಶೇ 20 ರಷ್ಟು ಶೇರು ಲಾಭಾಂಶವನ್ನು ಹಂಚಲಾಗಿದೆ ಎಂದರಲ್ಲದೆ ಪ್ರತಿ ವರ್ಷ ಅಡಿಟ್‍ದಲ್ಲಿ ಅ ಶ್ರೇಯಾಂಕ ದೊರೆತಿರುವುದು ಹೆಮ್ಮೆಯ ಸಂಗತಿ ಎಂದರು.

- Advertisement -

ಸಹಕಾರಿಯ ಪ್ರಗತಿಗೆ ಕಾರಣರಾದ ಸಾಲಗಾರ ಸದಸ್ಯರಿಗೆ, ಸಹಕಾರಿಯ ಮೇಲೆ ನಂಬಿಕೆಯಿಟ್ಟು ಠೇವಣಿಗಳನ್ನು ಮಾಡಿದ ಸದಸ್ಯರಿಗೆ, ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವ ನನ್ನ ಆಡಳಿತ ಮಂಡಳಿಯ ಸದಸ್ಯರಿಗೆ, ಶ್ರಮವಹಿಸಿ ಕೆಲಸ ಮಾಡಿದ ಸಿಬ್ಬಂದಿ ವರ್ಗ, ಕಾನೂನಿನ ಸಲಹೆಗಾರರಿಗೆ, ಎಲ್ಲ ಬ್ಯಾಂಕುಗಳಿಗೆ ಸಹಕಾರಿಯ ಹಿತೈಷಿಗಳ ಪ್ರೋತ್ಸಾಹವನ್ನು ಸಂಸದ ಈರಣ್ಣ ಕಡಾಡಿ ಅವರು ಸ್ಮರಿಸಿದರು.

ಸಹಕಾರಿಯ ಉಪಾಧ್ಯಕ್ಷ ರಾಜಪ್ಪ ಗೋಸಬಾಳ, ನಿರ್ದೇಶಕರಾದ ಸತೀಶ ಕಡಾಡಿ, ಶ್ರೀಶೈಲ ತುಪ್ಪದ, ಬಾಳಪ್ಪ ಸಂಗಟಿ, ಪರಪ್ಪ ಮಳವಾಡ, ಸಹದೇವ ಹೆಬ್ಬಾಳ, ಬೆಟಗೇರಿ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಈರಪ್ಪ ದೇಯನ್ನವರ, ಉಪಾಧಕ್ಷ ಮಾಯಪ್ಪ ಬಾಣಸಿ, ಪ್ರಧಾನ ವ್ಯವಸ್ಥಾಪಕ ಹಣಮಂತ ಕಲಕುಟ್ರಿ, ಶಾಖಾ ವ್ಯವಸ್ಥಾಪಕ ಪರಪ್ಪ ಗಿರೆನ್ನವರ ಉಪಸ್ಥಿತರಿದ್ದರು.

- Advertisement -
- Advertisement -

Latest News

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...
- Advertisement -

More Articles Like This

- Advertisement -
close
error: Content is protected !!