spot_img
spot_img

ಶ್ರೀ ಸರಸ್ವತಿ ಶಾಲೆಯಲ್ಲಿ  ಕೃಷ್ಣ ಜನ್ಮಾಷ್ಠಮಿ

Must Read

spot_img

ಗುರ್ಲಾಪೂರ: ಸಮೀಪದ ಇಟನಾಳ ಗ್ರಾಮದ ವಿದ್ಯಾ ಸರಸ್ವತಿ ಕನ್ನಡ ಮತ್ತು ಆಂಗ್ಲಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಇಟನಾಳದ ಮೈಲಾರಲಿಂಗೇಶ್ವರ ದೇವಸ್ಥಾನದ ಶ್ರೀ ಸಿದ್ದೇಶ್ವರ ಆಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ  ಮಾತನಾಡಿದ ಶ್ರೀಗಳು,  ಮಕ್ಕಳ ಮನಸ್ಸು ಅತಿ ತಿಳಿಯಾಗಿರುತ್ತದೆ ಅದನ್ನು ನಾವು ಅಂದರೆ ಶಿಕ್ಷಕ ಮತ್ತು ಪಾಲಕರು ಯಾವ ರೂಪ ಕೊಡಬೇಕು ಎನ್ನುತ್ತಾ ಮಕ್ಕಳಿಗೆ ರಾಧಾ ಕೃಷ್ಣನ ಕಥೆಗಳನ್ನು ಮತ್ತು ಅವರ ತುಂಟಾಟವನ್ನು ಹೇಳುತ್ತಾ ಮಕ್ಕಳ ವೇಷ ಭೂಷಣ ಹಾಗೂ ನೃತ್ಯ  ನೋಡಿ ಸಂತೋಷಗೂಂಡರು.

ಶಾಲೆಯ ಅಧ್ಯಕ್ಷರಾದ ವಿಠ್ಠಲ ಸುರಾಣಿಯವರು ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತವಾಗಿ ಮಕ್ಕಳಿಗೆ ಬಹುಮಾನ ವಿತರಿಸಿ ಮಕ್ಕಳಿಗೆ ಶಾಲೆ ಒಂದು ಕಠಿಣವಾದ ಶಾಲೆಯಾಗದೆ ಶಾರದಾಂಬೆಯ ಮನೆಯಂತೆ  ಮಕ್ಕಳ ಮನಸಿನಲ್ಲಿ ಬಂದರೆ ಯಾವುದೆ ಕಾಲಕ್ಕೂ ಮಕ್ಕಳು ಶಿಕ್ಷಣ ದಿಂದ ದೂರ ಉಳಿಯುವದಿಲ್ಲ ಅದರ ಕೆಲಸವನ್ನು ಶಾಲಾ ಆಡಳಿತ ಮಂಡಳಿ ಹಾಗು ಶಿಕ್ಷಕರು ಮಾಡಬೇಕು ಎನ್ನತ್ತಾ ಮುದ್ದಾದ ಮಕ್ಕಳ ಆಟವನ್ನು ನೋಡಿ ಶ್ರೀ ಕೃಷ್ಣ-ರಾಧೆಯರು ನಮ್ಮ ಶಾಲೆಯ ನಂದಗೋಕುಲದಲ್ಲಿ ಆಟವಾಡುತ್ತಿದ್ದಾರೆ ಎಂದು ನಾನು ತಿಳಿದುಕೂಂಡೆ ಎಂದರು.

ಈ ಸಂದರ್ಭದಲ್ಲಿ ಶಾಲೆಯ  ಆಡಳಿತ ಮಂಡಳಿ ಹಾಗು ಪ್ರಧಾನ ಗುರುಗಳು ಸಹ ಶಿಕ್ಷಕರು ಗುರಮಾತೆಯರು ಮತ್ತು ಪಾಲಕರು ಆಗಮಿಸಿದ್ದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!