spot_img
spot_img

ರಾಜ್ಯದೆಲ್ಲೆಡೆ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ

Must Read

spot_img

ಕೃಷ್ಣಂ ವಂದೇ ಜಗದ್ಗುರುಂ ….

ಯದಾ ಯದಾ ಹಿ ಧರ್ಮಸ್ಯ | ಗ್ಲಾನಿರ್ಭವತಿ ಭಾರತ ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ ಪರಿತ್ರಾಣಾಯ ಸಾಧೂನಾಂ | ವಿನಾಶಯ ಚ ದುಷ್ಕೃತಾಂ ಧರ್ಮಸಂಸ್ಥಾಪನಾರ್ಥಾಯ | ಸಂಭವಾಮಿ ಯುಗೇ ಯುಗೇ ||

ಬೆಂಗಳೂರು: ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಯಿತು. ಕೃಷ್ಣನ ವಿಗ್ರಹಗಳನ್ನು ವಿಧವಿಧವಾಗಿ ಅಲಂಕರಿಸಿ, ಬಗೆಬಗೆಯ ತಿಂಡಿಗಳನ್ನು ಮಾಡಿ ಬಾಲ ಕೃಷ್ಣನನ್ನು ಪೂಜಿಸಲಾಯಿತು. ಕೆಲವು ಕಡೆ, ಮಧ್ಯರಾತ್ರಿಯವರೆಗೆ ಉಪವಾಸವಿದ್ದು, ನಂತರ ಆಹಾರ ಸ್ವೀಕರಿಸಿ ರಾಜ್ಯದೆಲ್ಲೆಡೆ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮ ದಿಂದ ಆಚರಿಸಲಾಯಿತು. ಹಿಂದುಗಳ ಪವಿತ್ರ ಹಬ್ಬವಾದ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೃಷ್ಣ ಮತ್ತು ರಾಧೆಯ ದೇವಾಲಯಗಳಲ್ಲಿ ನಗರದ ಇಸ್ಕಾನ್ ದೇವಾಲಯ , ವಿದ್ಯಾಪೀಠ ಹಾಗು ಉಡುಪಿಯ ಶ್ರೀ ಕೃಷ್ಣ ಮಠ , ಬಸವನಗುಡಿಯ ಶ್ರೀ ಗೋವರ್ಧನಗಿರಿ ಕ್ಷೇತ್ರ ಹಾಗು ಪರಮಪೂಜ್ಯ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಗಳ ಆದೇಶ ಅನುಗ್ರಹದೊಂದಿಗೆ ಬೆಂಗಳೂರಿನ ಜಯನಗರದ 5 ನೇ ಬಡಾವಣೆಯಲ್ಲಿರುವ ರಾಯರ ಮಠದಲ್ಲಿ ಜನ್ಮಾಷ್ಟಮಿ ಯ ಪ್ರಯುಕ್ತ ವಿಶೇಷವಾದ ಪೂಜೆ ಜರುಗಿತು.

ಮುದ್ದು ಕೃಷ್ಣನ ವೇಷದಲ್ಲಿ ತನ್ವಿತ

ರಾಜ್ಯದೆಲ್ಲೆಡೆ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಕೃಷ್ಣನಿಗೆ ಅಭಿಷೇಕ, ಆರತಿ, 108 ಸಿಹಿ ತಿಂಡಿಗಳು, ಉಯ್ಯಾಲೆ ಸೇವೆ ಇತ್ಯಾದಿ ಸೇವೆಗಳನ್ನು ಅರ್ಪಿಸಲಾಯಿತು. ಬೆಣ್ಣೆ ಮತ್ತು ಸಕ್ಕರೆ ಸೇರಿದಂತೆ ಅನೇಕ ವಿಶೇಷ ತಿನಿಸುಗಳನ್ನು ಶ್ರೀ ಕೃಷ್ಣನಿಗೆ ಸಮರ್ಪಿಸಲಾಯಿತು.

ಲಿಶಾಂತ್

ಶ್ರೀ ಕೃಷ್ಣನ ಲೀಲೆಗಳನ್ನು ಆಧರಿಸಿದ ಸಂಗೀತ ನೃತ್ಯ ಸೇವೆಗಳನ್ನು ಭಕ್ತರು ಅರ್ಪಿಸಿದರು. ಪುಟ್ಟ ಮಕ್ಕಳಿಗೆ ರಾಧಾ-ಕೃಷ್ಣ ವೇಷಭೂಷಣಗಳನ್ನು ತೊಡಿಸಿ ನೋಡಿ ಆನಂದಿಸಿದರು ಪಾಲಕರು. ನಗರದ ಬನಶಂಕರಿ 3 ನೇ ಹಂತದ ಶ್ರೀಮತಿ ಮಹಿಮಾ ಅಜಯ್ ಬಾಯರಿ ಮತ್ತು ಅಜಯ್ ಗಣಪಯ್ಯ ಬಾಯರಿ ದಂಪತಿಯ ಸುಪುತ್ರ ಅಭಿರಾಮ್ ಎರಡೂವರೆ ವರ್ಷದ ಬಾಲಕ ಶ್ರೀ ಕೃಷ್ಣನ ವೇಷ ಧರಿಸಿ ಕೈಯಲ್ಲಿ ಡೈರಿ ಮಿಲ್ಕ್ ಚಾಕೊಲೇಟ್ ಹಿಡಿದು ಮಂದಹಾಸ ಬೀರಿದ್ದು ಆಕರ್ಷಣೀಯ ವಾಗಿತ್ತು ಶ್ರೀಮತಿ ಶಾಲಿನಿ ಮತ್ತು ವಿಜಯ್ ಕುಮಾರ್ ಅವರ ಸುಪುತ್ರ ಲಿಶಾಂತ್ ಶ್ರೀ ಕೃಷ್ಣ ನ ವೇಷ ಧರಿಸಿ ಸಂಭ್ರಮ ಪಟ್ಟಿದ್ದು ಹೀಗೆ.

ಬಾಯರಿ ದಂಪತಿಗಳ ಸುಪುತ್ರ ಅಭಿರಾಮ್

ವಿಜಯನಗರದ ಶ್ರೀಮತಿ ಸಿಂಧೂರ ಮತ್ತು ದೀಪಂಕರ್ ಅವರ ಸುಪುತ್ರಿ ಬಾಂಧವ್ಯ (೩ ವರ್ಷ ೫ ತಿಂಗಳು ) ಶ್ರೀ ಕೃಷ್ಣ ನ ವೇಷ ಧರಿಸಿ ಎಲ್ಲರ ಕಣ್ಮಣಿಯಾದಳು ಬಾಗಲಕೋಟೆಯ ಲಿಟಲ್ ವಂಡರ್ ಶಾಲೆಯ ಅಂಗಳದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ . ಶಾಲೆಯ ಅಧ್ಯಕ್ಷರಾದ ಪ್ರಕಾಶ್ ಗೌಡ ಅವರ ಜೊತೆ ಪತ್ರಿಕೆ ಮಾತಿಗಿಳಿದಾಗ ಅವರು ಶಾಲೆ ಬೆಳೆದು ಬಂದ ಹಾದಿ ಹಾಗೂ ಸಾಧನೆಯ ಬಗ್ಗೆ ಹಾಗೂ ಶಾಲೆಯಲ್ಲಿ ಆಚರಿಸುವ ಹಬ್ಬ – ಹರಿದಿನಗಳ ಕುರಿತು ಪತ್ರಿಕೆ ಗೆ ಎಳೇ ಎಳೆಯಾಗಿ ತಿಳಿಸುತ್ತಾ ಶಾಲೆ 2012ರಲ್ಲಿ ಕೇವಲ ಹನ್ನೆರಡು ಮಕ್ಕಳಿಂದ ಪ್ರಾರಂಭ ಮಾಡಿ ಇಂದು 400 ಮಕ್ಕಳನ್ನು ಹೊಂದಿ ಅರ್ಥಪೂರ್ಣ ಕಲಿಕೆಯ ಜೊತೆಗೆ ಅರ್ಥಪೂರ್ಣ ಆಚರಣೆ ಹಾಗೂ ಇಂಗ್ಲೀಷ್ ಭಾಷಾ ಜೊತೆಗೆ ಮಾತೃ ಭಾಷೆ ಕಲಿಕೆ ಕಡ್ಡಾಯ ಮಾಡಿ ಎಲ್ಲಾ ವರ್ಗದ ಮಕ್ಕಳಿಗೂ ಶೈಕ್ಷಣಿಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಹೊಂದಿರುವ ಪಾಠ ಪ್ರವಚನ ಕಾರ್ಯಕ್ರಮ ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ ಎಂದು ತಿಳಿಸುವಂತೆ ಶಿಕ್ಷಣ ನೀಡುತ್ತಾ ಬಂದಿದೆ ಮತ್ತು ತಂದೆ ತಾಯಿ ಇಬ್ಬರೂ ಇಲ್ಲದ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಿ ಸಮಾಜ ಮುಖಿ ಕಾರ್ಯ ಮಾಡುತ್ತಾ ಬಂದಿದೆ ಪ್ರತಿ ವರ್ಷ ಸುಮಾರು 10 ಕಾರ್ಯಕ್ರಮ ಮಾಡಿ ಎಲ್ಲಾ ವರ್ಗದ ಮಕ್ಕಳಿಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ಕ್ರಿಯೆ ಹಮ್ಮಿಕೊಳ್ಳಲಾಗುತ್ತಿದೆ ಹಾಗು ಇದೇ ವರ್ಷ ದಶಮಾನೋತ್ಸವ ಸಂಭ್ರಮ ಆಚರಿಸುವ ನಿಟ್ಟಿನಲ್ಲಿಸಮಗ್ರ ವಿಕಾಸ ಕಾರ್ಯಕ್ರಮ ನಡೆಯಲಿದೆ ಎಂದು ನುಡಿದರು.

ಭಾಂಧವ್ಯ

ಲಿಟಲ್ ವಂಡರ್ ಶಾಲೆಯ ಅಂಗಳದಲ್ಲಿ ಬಾಗಲಕೋಟೆಯ ಶ್ರೀಮತಿ ಶೃತಿ ಹಾಗು ಡಿ .ಎಸ್ . ರಾಘವೇಂದ್ರ ಅವರ ಸುಪುತ್ರಿ ತನ್ವಿತ (4.5 yrs) ಶ್ರೀ ಕೃಷ್ಣ ನ ವೇಷ ಧರಿಸಿ ಸಂಭ್ರಮ ಪಟ್ಟರು.

ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!