ಸಿಂದಗಿ: ಸಾಧನೆಗಳು ಸಾಧಕರ ಸ್ವತ್ತು ವಿನಃ ಸೋಮಾರಿಗಳ ಸ್ವತ್ತಲ್ಲ. ಅಂತೆಯೇ ಛಾಯಾಚಿತ್ರಕಲೆಯಲ್ಲಿ ಸತತ 30 ವರ್ಷಗಳಿಂದ ಸೇವೆ ಸಲ್ಲಿದ ಪ್ರತಿಫಲವಾಗಿ ತಾಲೂಕಿನ ನಾಲ್ಕು ಜನರಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದು ಸ್ವಾಗತಾರ್ಹ ಎಂದು ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ನಾಗರಬೆಟ್ಟ ಹೆಳಿದರು.
ಅವರು ಪಟ್ಟಣದ ಪಾಂಚಜನ್ಯ ಪೈನಾನ್ಸದಲ್ಲಿ ಗೆಳೆಯರ ಬಳಗದ ವತಿಯಿಂದ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರಾದ ಪಂಡಿತ ಯಂಪೂರೆ ಹಾಗೂ ಅಂಬರೀಶ ಅಲ್ದಿ ಅವರನ್ನು ಗೌರವಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಪಂಡಿತ ಯಂಪೂರೆ ಮಾತನಾಡಿ, ಸತತ 30 ವರ್ಷಗಳ ಅನುಭವದ ಮೇರೆಗೆ ರಾಜ್ಯ ಛಾಯಾಚಿತ್ರಗ್ರಾಹಕ ಸಂಘ ಗುರುತಿಸಿ ಪ್ರಶಸ್ತಿ ನೀಡಿರುವುದು ಸಿಂದಗಿಯ ಗರಿಮೆ ಹೆಚ್ಚಿಸಿದಂತಾಗಿದೆ ಅವರಿಗೆ ಅಭಿನಂದನೆ ಸಲ್ಲಿಸಿದರು.
ಪತ್ರಕರ್ತರ ಸಂಘದ ಅದ್ಯಕ್ಷ ಅನಂದ ಶಾಬಾದಿ, ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ, ನೌಕರರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಸೋಮನಗೌಡ ಬಿರಾದಾರ, ರಮೇಶ ಬಿರಾದಾರ, ಶಿವಲಿಂಗ ಬತಗೌಡರ, ರಮೇಶ ಯಾಳಗಿ, ಮಹಾಂತೇಶ ಐಗಳಿ, ಬಸಯ್ಯ ಹಿರೇಮಠ ಬಂದಾಳ, ವಿಜಯಕುಮಾರ ಪತ್ತಾರ ಸೇರಿದಂತೆ ಹಲವರಿದ್ದರು.