spot_img
spot_img

ಸರಕಾರದಿಂದ ಹಾವೇರಿಯಲ್ಲಿ ಕುಮಾರ ಪಂಚಾಕ್ಷರಿ ಪುಟ್ಟರಾಜ ಟ್ರಸ್ಟ್ ಮತ್ತು ಪುಟ್ಟರಾಜರ ಹುಟ್ಟು ಹಬ್ಬ ಆಚರಣೆಗೆ ಒತ್ತಾಯ

Must Read

spot_img

ಪೂಜ್ಯಶ್ರೀ ಚನ್ನವೀರ ಸ್ವಾಮಿಗಳು ಹಿರೇಮಠ ಸಂಸ್ಥಾನ (ಕಡಣಿ) ಗದಗ ಇವರಿಂದ ಸರಕಾರಕ್ಕೆ ಒತ್ತಾಯ

ಹಾವೇರಿ: ಹಾನಗಲ್ ಕುಮಾರ ಮಹಾಸ್ವಾಮಿಗಳು, ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಮತ್ತು ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರು ಹಾವೇರಿ ಜಿಲ್ಲೆಯವರು ಎಂದು ಸುಮ್ಮನೆ ಹೆಮ್ಮೆ ಪಟ್ಟರೆ ಸಾಲದು, ಈ ಪೂಜ್ಯ ತ್ರಯರ ಹೆಸರಿನಲ್ಲಿ ಕುಮಾರ ಪಂಚಾಕ್ಷರಿ ಪುಟ್ಟರಾಜ ಟ್ರಸ್ಟ್ ಸ್ಥಾಪನೆ ಮಾಡಿ ಗುರು ತ್ರಯರ ಸೇವೆ ನಿರಂತರ ಸ್ಮರಿಸುವ ಕೆಲಸ ಸರಕಾರ ಮಾಡಬೇಕು ಎಂದು, ಜಿಲ್ಲೆಯವರೇ ಆದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಇವರಿಗೆ ನಾವು ಒತ್ತಾಯಿಸುತ್ತೇವೆ ಎಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕರಾದ ಪೂಜ್ಯಶ್ರೀ ಚನ್ನವೀರ ಸ್ವಾಮಿಗಳು ಹಿರೇಮಠ ಸಂಸ್ಥಾನ (ಕಡಣಿ) ಗದಗ ಇವರು ಹೇಳಿದರು.

ಅವರು ದಿನಾಂಕ ೨೬ ರಂದು ಹಾವೇರಿಯ ಸಿಂದಗಿ ಮಠದಲ್ಲಿ ಹಮ್ಮಿಕೊಂಡಿದ್ದ ಪುಟ್ಟರಾಜರ ವಚನ ಸಾಹಿತ್ಯ ಸ್ಮರಣೆಯ ‘ಗುರು ವಚನ ಪ್ರಭ’ ಭಕ್ತಿಗೀತೆ ಮತ್ತು ವಚನ ಗೋಷ್ಠಿ ಮತ್ತು ವಚನ ಗಾಯನ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡು ಮಾತನಾಡುತ್ತಿದ್ದರು.

ಶಿವಯೋಗಿ ಡಾ. ಪಂ. ಪುಟ್ಟರಾಜರ ಜಯಂತಿ ಸರಕಾರದಿಂದ ಆಚರಿಸಬೇಕು ಎಂದು ಬಹುದಿನದಿಂದ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತಾ ಬಂದಿದ್ದೇವೆ ಆದರೇ ಸರಕಾರ ಸ್ಪಂದಿಸುತ್ತಿಲ್ಲ. ಬೇಡಿಕೆ ಹಾಗೇ ಉಳಿದಿದೆ. ಈ ಎರಡು ಬೇಡಿಕೆ ಇಡೇರುವವರೆಗೆ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯ ಬೇಕಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ. ಎಸ್. ಕೋರಿಶಟ್ಟರ ಮಾತನಾಡಿ, ಹಾನಗಲ್ ಕುಮಾರ ಸ್ವಾಮಿಗಳು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರಲ್ಲದೆ ಪುಟ್ಟರಾಜ ಸೇವಾ ಸಮಿತಿಯ ಈ ಬೇಡಿಕೆಗೆ ನಾವು ಬೆಂಬಲಿಸುತ್ತೇವೆ ಎಂದರು. ಕದಳಿ ವೇದಿಕೆ ಜಿಲ್ಲಾ ಅಧ್ಯಕ್ಷರಾದ ಅಮೃತಮ್ಮ ಎಂ. ಶೀಲವಂತರ, ಹುಕ್ಕೇರಿಮಠ ಅಕ್ಕನಬಳಗದ ಅಧ್ಯಕ್ಷರಾದ ಚಂಪಾ ಎಂ. ಹುಣಸಿಕಟ್ಟಿ, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ದಾವಣಗೆರೆ ಜಿಲ್ಲಾ ಸಂಚಾಲಕರಾದ ಶಿವಬಸಯ್ಯ ಚರಂತಿಮಠ, ಕಾಡಶಟ್ಟಿಹಳ್ಳಿ ಮಾತನಾಡಿದರು. ಪುಟ್ಟರಾಜ ಸೇವಾ ಸಮಿತಿ ರಾಜ್ಯ ಕಾರ್ಯದರ್ಶಿಗಳಾದ ಬೆಳಗಾವಿಯ ಪ್ರೊ. ಮಂಜುಶ್ರೀ ಬ. ಹಾವಣ್ಣವರ ವಚನ ಸಾಹಿತ್ಯದಲ್ಲಿ ಏನಿದೇ ಕುರಿತಾಗಿ ಸುಂದರವಾಗಿ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಶಿವಬಸಯ್ಯ ಆರಾಧ್ಯಮಠ ವ್ಯೆವಸ್ಥಾಪಕರು, ಸಿಂದಗಿಮಠ ಇವರಿಗೆ ಸನ್ಮಾಸಿ ಗೌರವಿಸಲಾಯಿತು. ಸನ್ಮಾನಕ್ಕೆ ಉತ್ತರವಾಗಿ ಮಾತನಾಡಿದ ಶಿವಬಸಯ್ಯನವರು ಪುಟ್ಟರಾಜ ಗುರುಗಳಿಗೆ ಸಿಂದಗಿಯ ಪಟ್ಟದೇವರು ಕ್ರಿಯಾಮೂರ್ತಿಗಳಾಗಿದ್ದಾಗಿನ ಅನೇಕ ವಿಷಯ ಹಂಚಿಕೊಂಡು ಭಾವುಕರಾದರು. ಅನಾರೋಗ್ಯದ ಮಧ್ಯದಲ್ಲಿಯೆ ಪ್ರಸಾದ ನಿಲಯದ ಉದ್ಘಾಟನೆಗೆ ದಯಮಾಡಿಸಿದ್ದನ್ನು ಸ್ಮರಿಸಿಕೊಂಡರು.

ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಾವೇರಿ ಜಿಲ್ಲಾ ಅಧ್ಯಕ್ಷರಾದ ಪ್ರೊ. ಮಾರುತಿ ಶಿಡ್ಲಾಪೂರ, ವಚನ ಸಾಹಿತ್ಯ ಕುರಿತು ವಚನ ಗೋಷ್ಠಿಯ ಕವಿಗಳ ಕವನಗಳನ್ನು ಕುರಿತು ಮಾತನಾಡಿದರು. ಸೇವಾ ಸಮಿತಿಯ ಹಾವೇರಿ ಜಿಲ್ಲಾ ಸಂಚಾಲಕರಾದ ಶಿವರಾಜ ಉಜ್ಜನಿ ಕದರಮಂಡಲಗಿ, ರಾಣೆಬೆನ್ನೂರಿನ ಯೋಗ ಶಿಕ್ಷಕಿ ಜ್ಯೋತಿ ಜಂಬಗಿ ವೇದಿಕೆಯಲ್ಲಿ ಇದ್ದರು. ಸೇವಾ ಸಮಿತಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಡಾ. ಸುಮಾ ಬ. ಹಡಪದ, ಹಳಿಯಾಳ ಇವರು ವಚನ ಗಾಯನ ನಡೆಸಿಕೊಟ್ಟರು. ಕುಮಾರಿ ಐಶ್ವರ್ಯ ಮತ್ತು ಅಮೂಲ್ಯ ಹಡಪದ. ಹಾವೇರಿಯ ಪ್ರತಿಕ್ಷ ಆರ್. ದೊಡ್ಮನಿ ಇವರಿಂದ ಭರತ ನಾಟ್ಯ ಮತ್ತು ವಚನ ನೃತ್ಯ ನಡೆದವು.

ಹಾವೇರಿ ನಗರದ ಮತ್ತು ಹಾವೇರಿ ಜಿಲ್ಲೆಯ ಬೇರೆ ಬೇರೆ ತಾಲೂಕಿನಿಂದ ಬಂದಿದ್ದ ಕವಿಗಳಾದ ಸರ್ವಶ್ರೀ ಎ. ಎಂ. ಹರವಿ, ಸಂತೋಷ ವಿ. ಪಿಶೆ, ರಾಜೇಶ್ವರಿ ಆರ್. ಸಾರಂಗಮಠ, ಪವನ ಗುತ್ತಲ, ಸಿ. ಜಿ. ಮಲ್ಲೂರ, ಪ್ರಶಾಂತ್ ಮಹದೇವ ಎಫ್ ಕರಿಯಣ್ಣವರ, ಸುಭಾಷ್ ಹೇ. ಚವ್ಹಾಣ, ನೀಲಕಂಠಯ್ಯ ಪಂ. ಓದಿಸೋಮಠ, ಚನ್ನಬಸಪ್ಪ ಜಿ ನಾಡರ, ವಿಜಯಲಕ್ಷ್ಮಿ ಎನ್. ಸಾರಂಗಮಠ, ಕುಮಾರ ಮಡಿವಾಳರ, ಆಲದಗೇರಿ. ರೇವಣಸಿದ್ದಯ್ಯ ಗ. ಹಿರೇಮಠ, ಲತಾ ಶಂ. ಮಡ್ಲೂರಮಠ, ಶ್ರದ್ಧಾ ರು. ಹಿರೇಮಠ, ತೇಜಸ್ವಿನಿ ನಾ. ಸಾರಂಗಮಠ, ಚಂದ್ರಶೇಖರಯ್ಯ ಶಾಸ್ತ್ರಿ, ಕೃಷ್ಣವೇಣಿ ವಿ. ಸುಮಾ ಎಂ. ಕನವಳ್ಳಿಮಠ, ಡಾ. ಡಿ. ಪ್ರಾನ್ಸಿಸ್ ಕ್ಸೇವಿಯರ್, ಹರಿಹರ. ವಂದನಾ ಆರ್. ಕರಾಳೆ, ಹುಬ್ಬಳ್ಳಿ. ಸುಧಾ ಹೊಸಮನಿ, ಸುಭಾಷ ಹೊಸಮನಿ, ಸ್ವರಚಿತ ಭಕ್ತಿಗೀತೆ ಮತ್ತು ವಚನಗಳನ್ನು ವಾಚನ ಮಾಡಿದರು.

ವಿಜಯಲಕ್ಷ್ಮಿ ಎನ್. ಸಾರಂಗಮಠ ಪ್ರಾರ್ಥನ ಗೀತೆ ಹಾಡಿದರು. ಶಿವರಾಜ ಉಜ್ಜನಿ ಸ್ವಾಗತಿಸಿದರು. ಜ್ಯೋತಿ ಜಂಬಗಿ ವಂದಿಸಿದರು. ಹಾವೇರಿ ನಗರ ಸಮಿತಿ ಸಂಚಾಲಕರಾದ ಫಕ್ಕೀರಶೆಟ್ರು ಶಿವಪ್ಪ ಅಂಗಡಿ ಇವರು ಈ ಕಾರ್ಯಕ್ರಮ ನಿರೂಪಣೆ ಮಾಡಿದರು.

- Advertisement -
- Advertisement -

Latest News

ಮೊರೆ ಕೇಳು ಮಹಾದೇವ

ಮೊರೆ ಕೇಳು ಮಹಾದೇವ ವರುಷದ ಮೊದಲ ಹಬ್ಬ ಯುಗಾದಿ ತರಲಿ ನಮಗೆಲ್ಲ ಹರುಷ ಅನುದಿನದಿ ಕೋಪ ತಾಪ ದ್ವೇಷ ಅಸೂಯೆ ತನುಮನಗಳಿಂದ ‌ ದೂರಾಗಲಿ ಮಹಾದೇವ|| ಚಿಗುರೆಲೆಗಳು  ಚಿಗುರುವಂತೆ ತರುಲತೆಗಳು ಬೆಳೆಯುವಂತೆ ನವ ಯುಗದಿ ನವ...
- Advertisement -

More Articles Like This

- Advertisement -
close
error: Content is protected !!