spot_img
spot_img

ಕುರುಹಿನಶೆಟ್ಟಿ ಕುಲದ ಬಗ್ಗೆ ಸಂಶೋಧನೆಯಾಗಬೇಕಾಗಿದೆ

Must Read

spot_img
- Advertisement -

ನಮ್ಮ ಭರತ ಖಂಡವು ಅನೇಕ ಜಾತಿ, ಪಂಗಡ, ಭಾಷೆ, ಸಂಸ್ಕ್ರತಿ, ಆಚಾರ ವಿಚಾರಗಳ ನಾಡು. ಅನೇಕ ಸಂಸ್ಕೃತಿಗಳ ಈ ಜನರ ದೇವತೆಗಳೂ, ಕಲೆಕಸುಬುಗಳೂ ಹಲವಾರು ಇರುತ್ತವೆ.

ದುರದೃಷ್ಟಕರವೆಂಬಂತೆ ಉಪಜೀವನಕ್ಕಾಗಿ ಬೇರೆ ಬೇರೆ ಉದ್ಯೋಗಗಳನ್ನೂ ಕಸುಬುಗಳನ್ನೂ ಕೈಕೊಂಡ ಈ ಜನರಲ್ಲಿ ಬೇರೆ ಬೇರೆ ಜಾತಿಗಳೇ ನಿರ್ಮಾಣವಾಗಿರುತ್ತದೆ. ಇಂತಹವುಗಳಲ್ಲಿ ನೇಯ್ಗೆಯ ಕಾಯಕವನ್ನು ಸಾಮಾನ್ಯವಾಗಿ ಅನುಸರಿಸುತ್ತಿರುವ ಕುರುಹಿನಶೆಟ್ಟಿ ಸಮಾಜದವರೇ ಒಂದು ಜನಾಂಗದವರಾಗಿದ್ದಾರೆ.ಸತ್ಯ ಹೇಳಬೇಕೆಂದರೆ ಜಗಜ್ಯೋತಿ ಶ್ರೀ ಬಸವಣ್ಣನವರಿಗಿಂತಲೂ ಪೂರ್ವದಲ್ಲಿ ಇದ್ದ ಈ ಜನಾಂಗದವರಲ್ಲಿ ಎಷ್ಟೋ ಜನ ಶರಣರಾಗಿ ಹೋಗಿದ್ದಾರೆ.

ಇದಕ್ಕೆ ಆಧಾರಗಳೂ ಉಂಟು.

- Advertisement -

ಹೋಳಿನ ಹಂಪಯ್ಯನೆಂಬ ಈ ಕುರುಹಿನಶೆಟ್ಟಿ ಸಮಾಜದ ಶರಣರು ಸುಮಾರು 10 ನೇ ಶತಮಾನದಲ್ಲಿ ಇದ್ದರೆಂಬ ಬಗ್ಗೆ ಶಿಲಾಶಾಸನಗಳುಂಟು.

ಶ್ರೀ ಹೋಳಿನ ಹಂಪಯ್ಯನವರು ಆಗ ದೊಡ್ಡ ವ್ಯಾಪಾರಿ ಆಗಿದ್ದರು. 101 ಕಂಟಲಿ ಎತ್ತುಗಳ ಮೇಲೆ ಮಾಲನ್ನು ಹೇರಿಕೊಂಡು ಕಾಯಕವನ್ನು ಮಾಡುತ್ತಿದ್ದರು.

ಕೊಪ್ಪಳದಲ್ಲಿರುವ “ಗವಿಮಠ” ವನ್ನು ಇವರೇ ಕಟ್ಟಿಸಿಕೊಟ್ಟ ಬಗ್ಗೆ ಶಿಲಾಶಾಸನವುಂಟು.

- Advertisement -

ಶ್ರೀ ಅಲ್ಲಮ ಪ್ರಭುದೇವರ ಮತ್ತು ಮಾಯಾದೇವಿಯ ಹೋರಾಟದ ಸ್ಥಾನವಾದ ಮಧುಕೇಶ್ವರ ದೇವಾಲಯದ ಮಹಾದ್ವಾರದ ಮುಂಭಾಗದಲ್ಲಿರುವ ಅನೇಕ ಪ್ರತಿಮೆಗಳಲ್ಲಿ ಶ್ರೀ ಹೋಳಿನ ಹಂಪಯ್ಯನವರ ಪ್ರತಿಮೆ ಪ್ರಮುಖವಾಗಿದೆ.

ಇನ್ನು 12ನೇ ಶತಮಾನದಲ್ಲಿ ಆಗಿಹೋದ ಮಹಾನುಭಾವಿ ಶ್ರೀ ಬಸವಣ್ಣನವರ ಆಧ್ಯಾತ್ಮಿಕ, ಸಾಮಾಜಿಕ, ರಾಜಕೀಯ ಕ್ರಾಂತಿಯ ಕಾಲದಲ್ಲಿ ಶ್ರೀ ಸಿದ್ಧರಾಮೇಶ್ವರ ಶರಣರ ತಪೋಭೂಮಿಯಾದ ಸೊನ್ನಲಿಗೆ (ಮಹಾರಾಷ್ಟ್ರದ ಈಗಿನ ಸೊಲ್ಲಾಪುರ) ಯಲ್ಲಿ ಕುರುಹಿನಶೆಟ್ಟಿ ಸಮಾಜದಲ್ಲಿ ಹುಟ್ಟಿ ಪ್ರಸಿದ್ಧಿಗೆ ಬಂದ ಅಮುಗಿ ದೇವಯ್ಯನೆಂಬ ಮಹಾ ಶರಣರು ತಮ್ಮ ನೇಯ್ಗೆಯ ಕಾಯಕದ ಬಲದಿಂದಲೇ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡಿದ್ದರು.

ಒಂದು ಸಲ ಮಹತ್ತರವಾದ ಅನ್ನ ಸಂತರ್ಪಣೆ ಮಾಡಿಸಬೇಕೆಂದು ಸಂಕಲ್ಪ ಮಾಡಿ ತಪೋನಿಧಿಗಳೂ ಸಿದ್ಧಪುರುಷರೂ ಆದ ಶ್ರೀ ಸಿದ್ಧರಾಮೇಶ್ವರರು ಗ್ರಾಮದಲ್ಲಿರುವ ಎಲ್ಲ ಕುಟುಂಬದ ಜನರಿಗೆ ಭತ್ತವನ್ನು ಹಸನು (ಸ್ವಚ್ಛ) ಮಾಡುವ ಕೆಲಸವನ್ನು ಹಂಚಿದರು.

ಆದರೆ ಸಿದ್ಧರಾಮೇಶ್ವರರು ಭವಿಯಾಗಿದ್ದ ಕಾರಣದಿಂದ ಅಮುಗಿ ದೇವಯ್ಯನವರ ಭತ್ತವನ್ನು ಹಸನು ಮಾಡುವ ಕಾರ್ಯವನ್ನು ಧಿಕ್ಕರಿಸಿದರು. ಆ ಮೂಲಕ ಅವರು ಸಿದ್ಧರಾಮನ ಕೋಪಕ್ಕೆ ಬಲಿಯಾಗಿ ಸೊನ್ನಲಿಗೆ ಬಿಟ್ಟು ಹೋಗಬೇಕಾಗಿ ಬಂತು. ಆವಾಗ್ಗೆ ಅಮುಗಿ ದೇವಯ್ಯನವರೂ ಅವರ ಧರ್ಮಪತ್ನಿ ಮರದಾನಿಯಮ್ಮನವರೂ ತಮ್ಮ ಗಂಟು ಗದಡಿಗಳನ್ನೆಲ್ಲಾ ( ಗಂಟು ) ಕಟ್ಟಿಕೊಂಡು ಸೊನ್ನಲಿಗೆಯನ್ನು ಬಿಟ್ಟು ಕಲ್ಯಾಣದ ಸಮೀಪದಲ್ಲಿರುವ ಶಿವಪುರಕ್ಕೆ ಹೋದರು.

ಶಿವಪುರವನ್ನು ತಲುಪಿ ಅಲ್ಲಿಯ ಒಂದು ಶಿವ ದೇವಾಲಯದಲ್ಲಿ ಇಳಕೊಂಡು ನೋಡಲಾಗಿ ಒಂದು ಗಂಟು ಸೊನ್ನಲಿಗೆಯಲ್ಲಿಯೇ ಉಳಿದಿದ್ದು ತಿಳಿಯಿತು.

ಆ ದಂಪತಿಗಳು ಮರುದಿನ ಉದಯ ಕಾಲದಲ್ಲಿ ಎದ್ದು ಸ್ನಾನ ಶಿವಾರ್ಚನೆ ಮಾಡಿ ಪರಮಾತ್ಮನ ನಾಮಸ್ಮರಣೆಯನ್ನು ಮಾಡಿ ನೋಡುವಷ್ಟರಲ್ಲಿ ಆ ಹಿಂದುಳಿದ ಗಂಟು ಬಂದು ಬಿದ್ದದ್ದು ಕಂಡು ಬಂತು.

ಆಗ ಶ್ರೀ ಮರದಾನಿಯಮ್ಮನವರು ಆಶ್ಚರ್ಯಚಕಿತರಾಗಿ ‘ಪತಿದೇವಾ’ ಇದು ಹೇಗೆ ಬಂತು ಎಂದು ವಿಚಾರಿಸಲಾಗಿ ಶ್ರೀ ಅಮುಗಿ ದೇವಯ್ಯನವರು “ಶಿವಶರಣರ” ಬಾಳುವೆಯ ಚಿಂತೆ ಶಿವನಿಗೆ ಉಂಟು, ಶಿವನೇ ತಂದು ಇಟ್ಟಿರಲು ಸಾಕೆಂದು ಹೇಳಿದರು.

ಇದನ್ನು ಕೇಳಿದ ಸಿದ್ಧರಾಮನು ಶಿವಪುರಕ್ಕೆ ಹೋಗಿ ಅಮುಗಿ ದೇವಯ್ಯನವರನ್ನು ಸಂದರ್ಶಿಸಿ ತಮ್ಮ ಅಪರಾಧವನ್ನು ಮನ್ನಿಸಿ ಸೊನ್ನಲಿಗೆಗೆ ದಯಮಾಡಿಸಬೇಕೆಂದು ಬೇಡಿಕೊಂಡರು.

ಆದರೆ ಅಷ್ಟರೊಳಗಾಗಿ ಕಲ್ಯಾಣದ ಶಿವಾನುಭವ ಮಂಟಪದಲ್ಲಿ ಭಾಗವಹಿಸಬೇಕೆಂದೂ ತಮ್ಮ ದಿವ್ಯ ಶಿವಾನುಭವವನ್ನು ಎಲ್ಲರಿಗೆ ತಿಳಿಸಬೇಕೆಂದೂ ಬಸವಣ್ಣನವರಿಂದ ಆಮಂತ್ರಣ ಬಂದಿತ್ತು.

ಕಲ್ಯಾಣದಲ್ಲಿ ಕೆಲವು ಕಾಲ ನಿಂತು ಶಿವಾನುಭವದಲ್ಲಿ ಭಾಗವಹಿಸುತ್ತಾ ಜೀವನ ಸಾಗಿಸಿದರು.

ಮುಂದೆ ಕಲ್ಯಾಣದಲ್ಲಿ ಕ್ರಾಂತಿ ಸಂಭವಿಸಿದಾಗ ಅಮುಗಿ ದೇವಯ್ಯನವರು ಕಲ್ಯಾಣವನ್ನು ಬಿಟ್ಟು ವಿಜಾಪುರದಿಂದ 45 ಮೈಲು ಅಂತರದಲ್ಲಿರುವ ಪುಳೂಜ ಎಂಬ ಗ್ರಾಮಕ್ಕೆ ಬಂದು ಅಲ್ಲಿ ತಮ್ಮ ಕಾಯಕವನ್ನು ಮುಂದುವರಿಸಿದರು. ಅಲ್ಲಿಯೂ ತಮ್ಮ ಖ್ಯಾತಿ ಬೆಳೆಯಿತು.

ಸುಮಾರು 1199 ನೇ ಸಾಲಿನಲ್ಲಿ ದೇವಗಿರಿಯ ಅರಸನಾದ ಯದುವಂಶದ ಶೀಂಷಣ ಮಹಾರಾಜನು ಕರ್ನಾಟಕದ ಮೇಲಿನ ದಂಡಯಾತ್ರೆಯಲ್ಲಿ ವಿಜಾಪುರಕ್ಕೆ ಬಂದಾಗ ಅಮುಗಿ ದೇವಯ್ಯನವರ ಕೀರ್ತಿಯನ್ನು ಕೇಳಿ ಪುಳೂಜ ಗ್ರಾಮಕ್ಕೆ ಬಂದು ಅವರ ದರ್ಶನ ಪಡೆದುಕೊಂಡು ಅವರ ಪ್ರಭಾವಕ್ಕೆ ಮನ ಸೋತು ‘ ಇತ್ತೆ ‘ ( ಇಟ್ಟೆ ) ಎಂಬ ಗ್ರಾಮವನ್ನು ಉಂಬಳಿಯನ್ನಾಗಿ ಅರ್ಪಿಸಿದರೆಂದು ಶಿಲಾಶಾಸನವುಂಟು.

ಇಷ್ಟು ಪೂರ್ವದಿಂದ ಬಂದಂಥ ಕುರುಹಿನಶೆಟ್ಟಿ ಜನಾಂಗದ ಹಿನ್ನೆಲೆಯ ಬಗ್ಗೆ ಇನ್ನೂ ಸಾಕಷ್ಟು ಪೂರ್ವ ಇತಿಹಾಸಗಳ ಸಂಶೋಧನೆ ಆಗಬೇಕಾಗಿದೆ.


ಮುರಿಗೆಪ್ಪ ಬನ್ನಿ
ಉಪಾಧ್ಯಕ್ಷರು ಬೆಳಗಾವಿ ವಿಭಾಗ
ಕುರುಹಿನಶೆಟ್ಟಿ ಕೇಂದ್ರ ಸಂಘ (ರಿ)
ಬೆಂಗಳೂರು

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group