Kuvempu Poems in Kannada- ಕುವೆಂಪು ಕನ್ನಡ ಕವನಗಳು

ನಡೆ ಮುಂದೆ ನಡೆ ಮುಂದೆ

ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ !
ಜಗ್ಗದಯೆ ಕುಗ್ಗದೆಯೆ
ಹಿಗ್ಗಿ ನಡೆ ಮುಂದೆ !

ಭಾರತ ಖಂಡದ ಹಿತವೇ
ನನ್ನ ಹಿತ ಎಂದು
ಭಾರತ ಮಾತೆಯ ಮತವೇ
ನನ್ನ ಮತ ಎಂದು

ಭಾರತಾಂಬೆಯ ಸುತರೆ
ಸೋದರರು ಎಂದು
ಭಾರತಾಂಬೆಯ ಮುಕ್ತಿ
ಮುಕ್ಕಿ ನನಗೆಂದು

ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ !
ಜಗ್ಗದಯೆ ಕುಗ್ಗದೆಯೆ
ಹಿಗ್ಗಿ ನಡೆ ಮುಂದೆ


ಕನ್ನಡಮ್ಮನ ಹರಕೆ 

ಕನ್ನಡಕೆ ಹೋರಾಡು
ಕನ್ನಡದ ಕಂದ
ಕನ್ನಡವ ಕಾಪಾಡು
ನನ್ನ ಆನಂದ |

ಜೋಗುಳದ ಹರಕೆಯಿದು
ಮರೆಯದಿರು, ಚಿನ್ನಾ
ಮರತೆಯಾದರೆ ಅಯ್ಯೋ
ಮರೆತಂತೆ ನನ್ನ

ಮೊಲೆಯ ಹಾಲೆಒಂತಂತೆ
ಸವಿಜೆನು ಬಾಯ್ದೆ ;
ತಾಯಿಯಪ್ಪುಗೆಯಂತೆ
ಬಾಳಸೊಗಸು ಮೆಯ್ಕೆ

- Advertisement -

ಗುರುವಿನೊಲ್ಲುದಿಯಂತೆ
ಶ್ರೇಯಸ್ಸು ಬಾಳೆ
ತಾಯಿನುಡಿಗೆ ದುಡಿದು ಮಾಡಿ
ಇಹಪಾರಗಳೇಲ್‌ಗೆ

ದಮ್ಮಯ್ಯ ಕಂದಯ್ಯ
ಬೇಡುವೆನು ನಿನ್ನ ,
ಕನ್ನಡಮ್ಮನ ಹರಕೆ ,
ಮರೆಯದಿರು, ಚಿನ್ನಾ

ಮರತೆಯಾದರೆ ಅಯ್ಯೋ
ಮರೆತಂತೆ ನನ್ನ;
ಹೋರಾಡು ಕನ್ನಡಕೆ
ಕಲಿಯಾಗಿ,ರನ್ನಾ


ಎಂದೆಂದಿಗೂ ನೀ ಕನ್ನಡವಾಗಿರು

ಎಲ್ಲಾದರೂ ಇರು, ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡ ಗೋವಿನ ಓ ಮುದ್ದಿನ ಕರು,
ಕನ್ನಡತನವೊಂದಿದ್ದರೆ ನೀನಮ್ಮಗೆ
ಕಲ್ಪತರು!

ನೀ ಮೆಟ್ಟುವ ನೆಲ – ಅದೇ ಕರ್ನಾಟಕ
ನೀ ನೇರುವ ಮಾಲೆ – ಸಹ್ಯಾದ್ರಿ
ನೀ ಮುಟ್ಟುವ ಮರ – ಶ್ರೀಗಂಧದ ಮರ
ನೀ ಕುಡಿಯುವ ನೀರು – ಕಾವೇರಿ

ಪಂಪನನೋಡುವ ನಿನ್ನ ನಾಲಿಗೆ
ಕನ್ನಡವೇ ಸತ್ಯ ,
ಕುಮಾರವ್ಯಾಸನನಾಲಿಪ ಕಿವಿಯದು
ಕನ್ನಡವೇ ನಿತ್ಯ

- Advertisement -

ಹರಿಹರ ರಾಘವರಿಗೆ ಎರಗುವ ಮನ ,
ಹಾಳಾಗಿಹ ಹಂಪೆಗೆ ಕೊರಗುವ ಮನ ,
ಪೆಂಪಿನ ಬನವಾಸಿಗೆ ಕೊರಗುವ ಮನ ,
ಕಾ ಜಾನಕೆ ಗಿಣಿ ಕೋಗಿಲೆ ಇಂಪಿಗೆ ,
ಮಲ್ಲಿಗೆ ಸಂಪಗೆ ಕೇದಗೆ ಸೊಂಪಿಗೆ ,
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರಸ ರೋಮಾಂಚನಗೊಳುವಾತನ ಮನ
ಎಲ್ಲಿದ್ದರೆ ಏನ್ ? ಎಂತಿದ್ದರೆ ಏನ್ ?
ಎಂದೆಂದಿಗೂ ತಾನ್

ಕನ್ನಡವೇ ಸತ್ಯ !
ಕನ್ನಡವೇ ನಿತ್ಯ !
ಅನ್ಯವೆನಳದೆ ಮಿಥ್ಯಾ !


ಜಯ ಹೇ ಕರ್ನಾಟಕ ಮಾತೆ

ಜೈ ! ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ ||

ಜೈ ! ಸುಂದರ ನದಿ ವನಗಳ ನಾಡೆ
ಜಯಹೇ ರಸ ಋಷಿಗಳ ಬೀಡೆ ,
ಗಂಧದ ಚಂದದ ಹೊನ್ನಿನ ಗಣಿಯೇ ,
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ

ಜನನಿ ಜೋಗುಳದ ವೇದದ ಘೋಷ
ಜನನಿಗೆ ಜೀವವು ನಿನ್ನಾವೇಶ
ಹಸುರಿನ ಗಿರಿಗಳಸಾಲೆ
ನಿನ್ನಯ ಕೊರಳಿನ ಮಾಲೆ
ಕಪಿಲ ಪತಂಜಸ ಗೌತಮ ಜಿನನುತ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ.

ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರ ಮಾಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಪತಿ ಜನ್ನ
ಕಬ್ಬಿಗ ನುಡಿಸಿದ ಮಂಗಳಧಾಮ
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಾಕರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ ಜೈ

ತೈಲಪ ಹೊಯ್ಸಲರಾಳಿದ ನಾಡೆ
ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರರಂಗ
ಚೈತನ್ಯ ಪರಮಹಂಸ ವೀವೆಕರ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ

- Advertisement -

ಸರ್ವಜನಾಂಗದ ಶಾಂತಿಯ ತೋಟ
ರಸಿಕರ ಕಣಗಳ ಸೆಳೆಯುವ ನೋಟ
ಕ್ರಿಶ್ಚಿಯನ್ ಮುಸಲ್ಮಾನ
ಪಾರಸಿಕ ಜೈನರ ಉದ್ಯಾನ
ಜನಕನ ಹೋಲುವ ದೊರೆಗಳ ಧಾಮ
ಗಾಯಕ ವೈಣಿಕರಾ ಧಾಮ

ಕನ್ನಡ ನುಡಿ ಕುಣಿದಾಡುತ ಗೇಹ
ಕನ್ನಡ ತಾಯಿಯ ಮಕ್ಕಳ ದೇಹ

ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ


ಭಾರತ ತಪಸ್ವಿನಿ

ವೇದರುಶಿ ಭೂಮಿಯಲಿ ನಾಕನರಕಗಳಿಂದ
ಸಾವು ಬದುಕಿನ ಕಟ್ಟಕಡೆಯ ಹೋರಾಟದಲಿ
ಸಂದಿಸಿವೆ , ಮಾನವನೆಡೆಯ ಕಾಳಕೂಟದಲಿ
ಅಮೃತವನ ಹಾರಿಸಿ ಬಲಿರಕ್ತದಲಿ ಮಿಂದು
ಕಾಡಿಹೆವು ಕಣ್ಣೀರು ತುಂಬಿ, ನಾಗರಿಕತೆಯು

ನಾಗಿಣಿಯ ಪ್ರಗತಿನಾಮಕ ಫಣೆಯ ಮೇಲೆತ್ತಿ
ಚುಂಬಿಸಿಯೇ ಕೊಲ್ಲಲೆಳೆಸುತಿದೆ – ಹಿಂದಿನ ಬುತ್ತಿ
ಸವೆಯುತಿದೆ , ಇಂದಿನ ಮಹಾ ತಪಸ್ಸಿನ ಚಿತೆಯ
ರಕ್ತಮ ವಿಭೂತಿಯೊಳೆ ಮುಂದಿನ ನವೋದಯದ
ಧವಳಿಮ ಪಿನಾಕಾದಾರನೈಥಹನು , ಮತ್ತೊಮ್ಮೆ

ಭಾರತಾಂಬೆಯು ಜಗದ ಬೆಳಗಾಗುವುದು , ಹೆಮ್ಮೆ
ಗೌರವಗಳಿಂದ ಜನಗಣದ ಕಟು ನಿರ್ಧಯದ
ಲೋಭ ಬುದ್ಧಿಯ ಹೀನ ಕುಟಿಳತೆಯ ಸುರೆನೀಗಿ
ಮೆರೆವಳು ತಪಸ್ವಿನಿಯೆ ಚಕ್ರವರ್ತಿನಿಯಾಗಿ !


You May Like: Kuvempu Information in Kannada

Related articles

Comments

You May Like

close
error: Content is protected !!
Join WhatsApp Group