ಡಿಎಪಿ ಗೊಬ್ಬರ ಕೊರತೆ ; ರೈತರ ಪರದಾಟ

Must Read

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಬನವಾಸಿ: ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರುತ್ತಿದೆ. ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗಿದ್ದು ಭೂಮಿ ಹದವಾಗಿರುವುದರಿಂದ ರೈತರು ತಮ್ಮ ತಮ್ಮ ಹೊಲಗಳನ್ನು ಉಳುಮೆ ಮಾಡಿ ಬಿತ್ತನೆಗೆ ತಯಾರಿ ಮಾಡಿಕೊಳ್ಳುತ್ತ ಬಿತ್ತನೆ ಬೀಜ ಮತ್ತು ಗೊಬ್ಬರ ಖರೀದಿಗೆ ಮುಂದಾಗಿದ್ದಾರೆ.

ಕೋರೊನಾ ಸಾವುನೋವುಗಳನ್ನು ನುಂಗಿಕೊಂಡು ಅನ್ನದಾತ ಕೃಷಿ ಚಟುವಟಿಕೆಯಲ್ಲಿ ತೊಡಗಿ ಪ್ರಸಕ್ತ ಸಾಲಿನ ಮಳೆ ರೈತನ ಕೈ ಹಿಡಿಯಲಿದೆ ಎಂಬ ನಿರೀಕ್ಷೆಯಲ್ಲಿ ಬಿತ್ತನೆಗೆ ತಯಾರಿ ನಡೆಸಿದ್ದರೆ ಇತ್ತ ಸಮರ್ಪಕವಾಗಿ ರಸಗೊಬ್ಬರ ಸಿಗದೇ ರೈತರು ಪರದಾಡುವಂತಾಗಿದೆ.

ಈ ಭಾಗದಲ್ಲಿ ಕಳೆದ ಒಂದು ವಾರದಿಂದ ಡಿಎಪಿ ರಸಗೊಬ್ಬರದ ಅಭಾವ ತಲೆದೋರಿದ್ದು ರೈತರು ತಮ್ಮ ದೈನಂದಿನ ಕೆಲಸಗಳನ್ನು ಬಿಟ್ಟು ಅಂಗಡಿಯಿಂದ ಅಂಗಡಿಗೆ ಅಲೆದಾಡುವಂತಾಗಿದೆ.

- Advertisement -

ಬನವಾಸಿ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಸುಮಾರು 5600 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾಗೂ ಮುಸುಕಿನ ಜೋಳ ಬೆಳೆಯುತ್ತಾರೆ. ಬನವಾಸಿಯಲ್ಲಿ ವ್ಯವಸಾಯ ಸಹಕಾರ ಸಂಘ ಹಾಗೂ ಎರಡು ಖಾಸಗಿ ರಸ ಗೊಬ್ಬರ ವಿತರಣೆಯ ಅಂಗಡಿಗಳಿದ್ದು ಕಳೆದ ಕೆಲ ದಿನಗಳಿಂದ ಯಾವ ಅಂಗಡಿಗಳಲ್ಲಿಯೂ ಡಿಎಪಿ ರಸಗೊಬ್ಬರ ಸಿಗುತ್ತಿಲ್ಲ.

ಈ ಕುರಿತು ರೈತರು ಅಂಗಡಿಯವರನ್ನು ಪ್ರಶ್ನಿಸಿದರೆ ಇನ್ನೂ ಒಂದು ವಾರ ಗೊಬ್ಬರ ಸಿಗುವುದಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ. ಸಕಾಲಕ್ಕೆ ಗೊಬ್ಬರ ಸಿಗದೇ ರೈತರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳು ಶೀಘ್ರದಲ್ಲಿ ರಸಗೊಬ್ಬರದ ಸಮಸ್ಯೆಯನ್ನು ಬಗೆಹರಿಸಬೇಕೆನ್ನುವುದು ಅನ್ನದಾತನ ಕೂಗಾಗಿದೆ.


ರಸಗೊಬ್ಬರಕ್ಕಾಗಿ ಕಳೆದೊಂದು ವಾರದಿಂದ ಅಂಗಡಿಗಳಿಗೆ ಅಲೆದಾಡುತ್ತಿದ್ದೆನೆ. ಆದರೆ ಎಲ್ಲಿಯೂ ಡಿಐಪಿ ಗೊಬ್ಬರ ಲಭ್ಯವಿಲ್ಲ ಎನ್ನುವ ಉತ್ತರವಷ್ಟೇ ಸಿಗುತ್ತಿದೆ. ಸಕಾಲದಲ್ಲಿ ಗೊಬ್ಬರ ಹಾಕದೇ ಹೋದರೆ ನಿರೀಕ್ಷಿತ ಇಳುವರಿಯೂ ಸಿಗುವುದಿಲ್ಲ. ಗೊಬ್ಬರದ ಅಭಾವ ನೀಗಿಸಲೂ ಸರ್ಕಾರ ಬೇಗನೇ ಕ್ರಮ ಕೈಗೊಳ್ಳಬೇಕು.

ಸಂತೋಷ ಕುಮಾರ
ಪ್ರಗತಿಪರ ರೈತ ಭಾಶಿ


ಸದ್ಯ ರಸಗೊಬ್ಬರದ ಕೊರತೆ ಇರುವುದು ನಿಜ. ರಾಜ್ಯದಲ್ಲಿ ಲಾಕ್ ಡೌನ್ ಇದ್ದ ಕಾರಣದಿಂದ ಅವಶ್ಯವಾದಷ್ಟು ಪ್ರಮಾಣ ಗೊಬ್ಬರ ಪೂರೈಕೆ ಆಗುತ್ತಿಲ್ಲ. ಜೂ.13ರಂದು ಬನವಾಸಿ, ಕಾಳಂಗಿ, ಕೋರ್ಲಕಟ್ಟ, ಅಂಡಗಿ ವ್ಯವಸಾಯ ಸಹಕಾರ ಸಂಘಗಳಿಗೆ 75 ಟನ್ ಗೊಬ್ಬರ ಪೂರೈಕೆಯಾಗಲಿದೆ. ರೈತರು ಸಹಕರಿಸಬೇಕು.

ಮಧುಕರ ನಾಯ್ಕ್
ಸಹಾಯಕ ಕೃಷಿ ನಿರ್ದೇಶಕರು ಶಿರಸಿ


ಪ್ರತಿ ವರ್ಷ ರಸಗೊಬ್ಬರದ ಕೊರತೆ ಉಂಟಾಗುತ್ತಿದ್ದು ಸರ್ಕಾರ ಇದರ ಬಗ್ಗೆ ನಿರ್ಲಕ್ಷ್ಯವಹಿಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಶೀಘ್ರದಲ್ಲಿ ಡಿಎಪಿ ಗೊಬ್ಬರ ಪೂರೈಕೆ ಮಾಡದೇ ಇದ್ದಲ್ಲಿ ಭಾರತೀಯ ಕೃಷಿಕ ಸಮಾಜ ರೈತ ಸಂಘಟನೆಯಿಂದ ಉಗ್ರ ಹೋರಾಟ ನಡೆಸಲಾಗುವುದು.

ಜಯಶೀ ಗೌಡ
ಜಿಲ್ಲಾಧ್ಯಕ್ಷರು, ಭಾರತೀಯ ಕೃಷಿಕ ಸಮಾಜ ರೈತ ಸಂಘಟನೆ


ವರದಿ: ಸುಧೀರ ನಾಯರ್
ಬನವಾಸಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...
- Advertisement -

More Articles Like This

- Advertisement -
close
error: Content is protected !!