spot_img
spot_img

ಮೂಲ ಸೌಕರ್ಯ ಕೊರತೆ ; ಆಸ್ಪತ್ರೆಗೆ ಬೀಗ ಜಡಿದು ಮಹಿಳೆಯರ ಪ್ರತಿಭಟನೆ

Must Read

spot_img

ಮೂಡಲಗಿ: ಪಟ್ಟಣದ ಸಮುದಾಯ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಸೂಕ್ತ ವ್ಯವಸ್ಥೆ ನೀಡುತ್ತಿಲ್ಲ ಹಾಗೂ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳು ಇಲ್ಲದೇ ಇರುವುದರಿಂದ ಪಟ್ಟಣದ ಮಹಿಳೆಯರು ಆಸ್ಪತ್ರೆಗೆ ಬೀಗ ಜಡಿದು ಕೆಲ ಕಾಲ ಪ್ರತಿಭಟಸಿ, ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕೆಂದು ತಹಶೀಲ್ದಾರ ಡಿ ಜಿ ಮಹಾತ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸ್ಥಳೀಯ ನಿವಾಸಿ ನಿಮ೯ಲಾ ಹಿರೇಮಠ ಮಾತನಾಡಿ, ಆಸ್ಪತ್ರೆಯ ಸಿಬ್ಬಂದಿ ರೋಗಿಗಳ ಜೊತೆ ಸರಿಯಾಗಿ ವರ್ತಿಸದೇ ತಾವು ಮಾಡಿದ್ದೇ ಆಟ ಅಂತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಗರ್ಭಿಣಿಯರಾಗಲಿ ಹಾಗೂ ರೋಗಿಗಳಾಗಲಿ ಬಂದರೆ ಆಸ್ಪತ್ರೆಯಲ್ಲಿ ಕೆಲವು ಸಿಬ್ಬಂದಿಗಳನ್ನು ಬಿಟ್ಟರೆ ವೈದ್ಯರು ಇರೋದಿಲ್ಲ ಹೀಗಾಗಿ ಸಿಬ್ಬಂದಿಗಳು ಗೋಕಾಕ ಆಸ್ಪತ್ರೆಗೆ ಹೋಗಿ ಅಂತ ಕಳಿಸಿ ಬಿಟ್ಟುತ್ತಾರೆ. ರೋಗಿಗಳು ಗೋಕಾಕ ಆಸ್ಪತ್ರೆಗೆ ಹೋಗೋದಾದ್ರೆ ಈ ಆಸ್ಪತ್ರೆಗೆ ವೈದ್ಯರು ಸಿಬ್ಬಂದಿಗಳು ಯಾಕೆ ಬೇಕು ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.

ಆಸ್ಪತ್ರೆಯಲ್ಲಿ ಬಾಣಂತಿಯರು ಇರುವುದರಿಂದ ಬಿಸಿ ನೀರು, ಶುದ್ಧ ಕುಡಿಯುವ ನೀರು, ಉಪಾಹಾರ ಈ ಯಾವ ಸೌಕರ್ಯಗಳು ಆಸ್ಪತ್ರೆಯಲ್ಲಿ ಇಲ್ಲವಾದರೇ ಸರ್ಕಾರ ಮಾಡಿರುವ ಯೋಜನೆ ಬರೀ ತಮ್ಮ ಖಜಾನೆ ತುಂಬಿಕೊಳ್ಳುವುದಕ್ಕೆ ಅಷ್ಟೇ ಸೀಮಿತವಾಗಿದೆ. ತಾಲೂಕಾಗಿ ಸುಮಾರು ನಾಲ್ಕು ವರ್ಷ ಗತಿಸಿದ್ದರೂ ಆಸ್ಪತ್ರೆಯನ್ನು ತಾಲೂಕಾ ಆಸ್ಪತ್ರೆಯನ್ನಾಗಿ ಮಾಡದೇ ಇರುವುದರಿಂದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ತಪ್ಪಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಕವಿತಾ ನಂದಗಾಮಠ, ಲಕ್ಷ್ಮಿ ಬಾಳಿಗೇರಿ, ಪ್ರೇಮಾ ರಬಕವಿ, ಕಸ್ತೂರಿ ಗಾಣಿಗೇರ, ಬಸವ್ವಾ ಮಾಲಗಾರ, ಕಮಲ್ಲವ್ವಾ ಮಾಲಗಾಂವಿ, ಮುತ್ತವ್ವ ಬೇಣ್ಣಿ, ಯಲ್ಲವ್ವಾ ಮಾಲಗಾರ, ಶೋಭಾ ಹಿರೇಮಠ, ಕವಿತಾ ಕುಂಬಾರ, ಲಕ್ಷ್ಮಿ ಕುಡಗನೂರ, ಬೌರವ್ವ ರಬಕವಿ, ಸವಿತಾ ಗಾಣಿಗೇರಿ ಹಾಗೂ ಅನೇಕ ಮಹಿಳೆಯರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!