ಬೀದರ: ಹೆಣ್ಮಕ್ಕಳೆ ಸ್ಟ್ರಾಂಗ್ ಗುರು… ಎಂಬುದು ಗಡಿ ಜಿಲ್ಲೆ ಬೀದರ್ ತಾಲ್ಲೂಕಿನ ಬಗದಲ ಪಿ ಎಸ್ ಐ ಸುವರ್ಣ ಅವರ ವಿಷಯದಲ್ಲಿ ನಿಜವಾಗಿದ್ದು ಹೆಣ್ಣು ಮಕ್ಕಳು ಯಾವುದರಲ್ಲೂ ಏನೂ ಕಡಿಮೆ ಇಲ್ಲ ಎಂಬುದಕ್ಕೆ ಈ ಒಂದು ಉದಾಹರಣೆ.
ಬೀದರ್ ತಾಲ್ಲೂಕಿನ ಡಿವೈಸ್ಪಿ ಒಳಗೊಂಡ ತಂಡದಲ್ಲಿ ಸಿಪಿಐ ಶ್ರೀನಿವಾಸ ಅಲ್ಲಾಪುರೆ ಮತ್ತು ಸುವರ್ಣ ಪಿ ಎಸ್ ಐ ತಂಡವು ಅಂತರ ರಾಜ್ಯ ಬೈಕ್ ಕಳ್ಳರನ್ನು ಬಂಧಿಸಿ ಸುಮಾರು 7,20,000 ರೂಪಾಯಿ ಬೆಲೆಬಾಳುವ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದೆ.
ಬೀದರ ಜಿಲ್ಲಾ ಪೋಲಿಸ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೀದರ ಜಿಲ್ಲೆಯ ಪೋಲಿಸ ವರಿಷ್ಠ ಪೋಲಿಸ್ ಚನ್ನಬಸವ ಎಸ್ ಲಂಗೋಟಿ ಅವರು ಮಾತನಾಡಿ, ದಿನಾಂಕ 19/03/2023ರ ಬೆಳಿಗ್ಗೆ 10ಗಂಟೆಗೆ ಜಿಲ್ಲೆಯ ಬೌವಗಿ ಕ್ರಾಸ್ ಬಳಿ ಜಿಲ್ಲೆಯ ಸಿ ಪಿ ಐ ಶ್ರೀನಿವಾಸ ಅಲ್ಲಾಪುರೆ ಪಿಎಸ್ಐ ಗಳಾದ ಸುವರ್ಣ ಮತ್ತು ಶಶಿಕಲಾ ಸಂತೋಷ ತಾವರಖೇಡ್ ಅವರ ತಂಡವು ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಮೇಘಣ್ಣನವರ ಹಾಗೂ ಡಿವೈಸ್ ಪಿ ಸತೀಶ್ ಮಾರ್ಗದರ್ಶನದಲ್ಲಿ ಅಂತಾರಾಜ್ಯ ಬೈಕ್ ಕಳ್ಳರನ್ನು ಬಂಧಿಸಿ ಸುಮಾರು 7,20,000, ರೂಪಾಯಿ ಬೆಲೆಬಾಳುವ 14 ದ್ವಿಚಕ್ರ ವಾಹನಗಳನ್ನು ವಶ ಪಡಿಸಿ ಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಆರೋಪಿಗಳನ್ನು ನಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದ ಪೋಲಿಸ್ ಅಧೀಕ್ಷಕರು, ನಮ್ಮ ಜಿಲ್ಲೆಯ ಪೋಲಿಸ್ ಅಧಿಕಾರಿಗಳು ವಶಪಡಿಸಿಕೊಂಡ ಬೈಕ್ ಗಳಲ್ಲಿ ಬೀದರ ನಗರದ 5 ಬೈಕ್, ತೆಲಂಗಾಣದ ರಾಜ್ಯದ ಜಹೀರಾಬಾದ ನಗರದ ಒಂದು ಬೈಕ್ ಮತ್ತು ಹೈದ್ರಾಬಾದ ನಗರದ 8 ಬೈಕ್ ಗಳು ಇವೆ ಇದರಿಂದ ನಮ್ಮ ಪೋಲಿಸ್ ಅಧಿಕಾರಿಗಳು ನಮ್ಮ ರಾಜ್ಯ ಅಲ್ಲದೆ ಪಕ್ಕದ ತೆಲಂಗಾಣ ರಾಜ್ಯದ ಜನರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿ ಈ ತಂಡಕ್ಕೆ ಸೂಕ್ತ ಬಹುಮಾನ ಘೋಷಿಸಲಾಗುವದು ಎಂದು ಜಿಲ್ಲಾ ವರಿಷ್ಠ ಪೊಲೀಸ ಅಧಿಕಾರಿ ಚನ್ನಬಸವ ಲಂಗೋಟಿ ತಿಳಿಸಿದರು.
ಲೇಡಿ ಪೊಲೀಸ್ ಅಧಿಕಾರಿಗಳ ಈ ಕಾರ್ಯಕ್ಕೆ ಇಲಾಖೆಯಲ್ಲದೆ ಸಾರ್ವಜನಿಕ ವಲಯದಿಂದಲೂ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದ್ದು ಹೆಣ್ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಈ ಮಹಿಳಾ ಅಧಿಕಾರಿಗಳು ಸಾಬೀತುಪಡಿಸಿದ್ದಾರೆನ್ನಬಹುದು.
ವರದಿ: ನಂದಕುಮಾರ ಕರಂಜೆ, ಬೀದರ