spot_img
spot_img

ನೆರೆ ಪೀಡಿತರ ಕಷ್ಟ ಸುಖ ಆಲಿಸಿದ ಲಕ್ಕಣ್ಣ ಸವಸುದ್ದಿ

Must Read

- Advertisement -

ಮೂಡಲಗಿ – ಭಾರೀ ಮಳೆಯಿಂದ ಪ್ರವಾಹ ಪೀಡಿತರಾಗಿರುವ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಸಂತ್ರಸ್ತರ ಗಂಜಿ ಕೇಂದ್ರಗಳಿಗೆ ಕಾಂಗ್ರೆಸ್ ಮತ್ತು ಮುಖಂಡ ಲಕ್ಕಣ್ಣ ಸವಸುದ್ದಿ ಭೇಟಿಯಾಗಿ ಸಂತ್ರಸ್ತರ ಕಷ್ಟಸುಖ ವಿಚಾರಿಸಿದರು.

ಸಂತ್ರಸ್ತರು ಪರಿಹಾರಕ್ಕಾಗಿ ಕೇವಲ ಸರ್ಕಾರದ ಮೇಲಷ್ಟೇ ಅವಲಂಬಿತರಾಗಬೇಕಿಲ್ಲ ಏನಾದರೂ ಅಗತ್ಯ ಬಿದ್ದರೆ ತಾವೂ ವೈಯಕ್ತಿಕ ವಾಗಿ ಪೂರೈಸುವುದಲ್ಲದೆ ಸರ್ಕಾರದಿಂದಲೂ ಕೊಡಿಸಲು ಪ್ರಯತ್ನಿಸುವುದಾಗಿ ಹೇಳಿದರು.

ಮೂಡಲಗಿ ತಾಲೂಕಿನ ಪಟಗುಂದಿ ಸರ್ಕಾರಿ ಶಾಲೆಯಲ್ಲಿ ೨೨ ಕುಟುಂಬಗಳು ಆಶ್ರಯ ಪಡೆದುಕೊಂಡಿದ್ದು ೪೦ ಜನ ಮಕ್ಕಳಿದ್ದಾರೆ. ಜಾನುವಾರುಗಳಿಗೆ ಸ್ಥಳಾವಕಾಶ ಮಾಡಿಕೊಡಲಾಗಿದೆ. ಮೇವಿನ ವ್ಯವಸ್ಥೆಯನ್ನು ತಹಶೀಲ್ದಾರರು ಮಾಡಿಕೊಟ್ಟಿದ್ದಾಗಿ ಸಂತ್ರಸ್ತರು ಹೇಳಿದರು. ತಾಲೂಕಾಡಳಿತದಿಂದ ಬೆಡ್ ಶೀಟ್ ಒದಗಿಸಲಾಗಿದೆ. ಸಾಕಷ್ಟು ರೇಷನ್ ಕೂಡ ಪೂರೈಕೆಯಾಗಿದೆಯೆಂದರು.

- Advertisement -

ಮುಸಗುಪ್ಪಿ ಗ್ರಾಮ ಅರ್ಧದಷ್ಟು ಮುಳುಗಿದ್ದು ಊರೇ ಖಾಲಿಯಾಗಿದೆ. ತಿಗಡಿ ಸೇತುವೆ ಕೂಡ ಮುಳುಗಿದೆ.
ಮುಸಗುಪ್ಪಿಯ ಸರ್ಕಾರಿ ಪ್ರೌಢ ಶಾಲೆ ಹಾಗೂ ಬಡಲಕ್ಕನವರ ತೋಟದ ಕೇಂದ್ರದಲ್ಲಿ ಸೇರಿ ಒಟ್ಟು ೪೨೮ ಕುಟುಂಬಗಳ ೧೩೪೦ ಜನ ಆಶ್ರಯ ಪಡೆದುಕೊಂಡಿದ್ದಾರೆ. ಅವರಿಗೆ ೩೦೦ ಬೆಡ್ ಶೀಟ್ ಕಂಬಳಿಗಳನ್ನು ಈಗಾಗಲೇ ಸರಬರಾಜು ಮಾಡಲಾಗಿದೆ. ಇನ್ನೂ ತರಬೇಕಾಗಿದೆ. ಶೌಚ ವ್ಯವಸ್ಥೆಗೆ ಮೊಬಾಯಿಲ್ ಶೌಚಾಯಲದ ವ್ಯವಸ್ಥೆ ಮಾಡಲಾಗಿದೆ ಎಂಬುದಾಗಿ ಅಲ್ಲಿನ ಪಿಡಿಓ ಹಾಗೂ ಉಸ್ತವಾರಿ ವಹಿಸಿಕೊಂಡಿರುವ ಅಧಿಕಾರಿಗಳು ತಿಳಿಸಿದರು.

ಸಂತ್ರಸ್ತರು ಹಾಗೂ ಅಧಿಕಾರಿಗಳ ಜೊತೆ ಮಾತನಾಡಿದ ಲಕ್ಕಣ್ಣ ಸವಸುದ್ದಿ, ಯಾವುದೇ ರೀತಿಯ ತೊಂದರೆಯಾಗದಂತೆ ತಮ್ಮನ್ನು ಸರ್ಕಾರ ನೋಡಿಕೊಳ್ಳುತ್ತದೆ. ನಾನು ಕೂಡ ವೈಯಕ್ತಿಕವಾಗಿ ಕೈಲಾದಷ್ಟು ನೆರವು ನೀಡಲು ಸಿದ್ಧನಿದ್ದೇನೆ ಏನಾದರೂ ಅಗತ್ಯ ಬಿದ್ದರೆ ಸಂಪರ್ಕಿಸಲು ಕೋರಿದರು.

ಕಳೆದ ಎರಡು ದಿನಗಳಿಂದ ಮಳೆರಾಯ ತನ್ನ ಆರ್ಭಟಕ್ಕೆ ಬಿಡುವು ಕೊಟ್ಟಿದ್ದು ಸಂತ್ರಸ್ತರು ನಿಟ್ಟುಸಿರು ಬಿಡುವಂತಾಗಿದೆ. ಪಶ್ಚಿಮ ಘಟ್ಟದಲ್ಲಿ ಇನ್ನೂ ಮಳೆಯಾಗುತ್ತಿದೆಯೆಂಬ ವರದಿಗಳಿದ್ದು ಅದು ಕಡಿಮೆಯಾಗಿ ಇನ್ನೆರಡು ದಿನಗಳಲ್ಲಿ ಮಹಾಪೂರ ಪರಿಸ್ಥಿತಿ ತಹಬದಿಗೆ ಬರಬಹುದೆಂದು ಅಂದಾಜಿಸಲಾಗಿದೆ.

- Advertisement -

ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಮನ ಸೆಳೆದ ಶಾಂತಲಾ ಆರ್ಟ್ ಗ್ರೂಪ್ ಶೋ

ಕಲಾವಿದನು ಮೂಲತಃ ಸೌಂದರ್ಯ ಆರಾಧಕ ಹಾಗೂ ಸೌಂದರ್ಯವನ್ನು ಪ್ರೀತಿಸುವವನು. ಪ್ರಕೃತಿ ಸೌಂದರ್ಯಮಯ ಕಲೆ ಆನಂದಮಯ ಅನ್ನುವಂತೆ ಕಲಾವಿದನು ದೃಶ್ಯಗಳ ನಕಲನ್ನು ಮಾಡಲಾರ ಹಾಗೂ ತನ್ನೊಳಗಿನ ವಿಚಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group